ಸುದೀಪ್ 
ಸಿನಿಮಾ ಸುದ್ದಿ

ಕೋವಿಡ್-19: ವಿಶೇಷ ಚೇತನ ಮಕ್ಕಳಿಗೆ ಕಿಚ್ಚ ಸುದೀಪ್ ನೆರವು

ಕೊರೋನಾ ಲಾಕ್ ಡೌನ್ ಸಮಯದಲ್ಲಿ ತಮ್ಮದೇ ಟ್ರಸ್ಟ್ ಮೂಲಕ ಆಸ್ಪತ್ರೆ ಬಿಲ್, ಆಹಾರ ಕಿಟ್, ಶಾಲಾ ಮಕ್ಕಳು, ಶಿಕ್ಷಕರು, ಫ್ರಂಟ್ ಲೈನ್ ವರ್ಕರ್ ಸೇರಿದಂತೆ ಅನೇಕರಿಗೆ ನೆರವು ನೀಡಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಇದೀಗ ವಿಶೇಷ ಚೇತನ ಮಕ್ಕಳ ನೆರವಿಗೆ ಕಿಚ್ಚ ಮುಂದಾಗಿದ್ದಾರೆ.

ಕೊರೋನಾ ಲಾಕ್ ಡೌನ್ ಸಮಯದಲ್ಲಿ ತಮ್ಮದೇ ಟ್ರಸ್ಟ್ ಮೂಲಕ ಆಸ್ಪತ್ರೆ ಬಿಲ್, ಆಹಾರ ಕಿಟ್, ಶಾಲಾ ಮಕ್ಕಳು, ಶಿಕ್ಷಕರು, ಫ್ರಂಟ್ ಲೈನ್ ವರ್ಕರ್ ಸೇರಿದಂತೆ ಅನೇಕರಿಗೆ ನೆರವು ನೀಡಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಇದೀಗ ವಿಶೇಷ ಚೇತನ ಮಕ್ಕಳ ನೆರವಿಗೆ ಕಿಚ್ಚ ಮುಂದಾಗಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿರುವ ಪೃಥ್ವಿ ವಸತಿ ಶಾಲೆಯಲ್ಲಿ 40ಕ್ಕೂ ಹೆಚ್ಚು ಮಕ್ಕಳಿದ್ದು, ಮಳೆಯಿಂದ ಸೋರುತ್ತಿತ್ತು. ಅಲ್ಲದೆ ಲಾಕ್ ಡೌನ್ ನಿಂದ ಆಹಾರಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ಶಾಲೆಗೆ ಸುದೀಪ್ ನೆರವು ನೀಡಿದ್ದಾರೆ.

ಕಿಚ್ಚ ಚಾರಿಟೆಬಲ್ ರಾಜ್ಯ ಮುಖಂಡ ರಮೇಶ್ ಕಿಟ್ಟಿ ಹಾಗೂ ಜಿಲ್ಲಾ ಮುಖಂಡರಾದ ಸೋಮ ನಾಯಕ, ಪರಶಿವ ಅವರ ತಂಡ ಇತ್ತೀಚೆಗೆ ಶಾಲೆಗೆ ಭೇಟಿ ನೀಡಿ ಒಂದು ತಿಂಗಳಿಗಾಗುವಷ್ಟು ಆಹಾರ ಕಿಟ್ ವಿತರಿಸಿ ವಸತಿ ಶಾಲೆ ಮೂಲ ಸೌಕರ್ಯಾಭಿವೃಧಿ ಮಾಡಲು ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ಈ ವಸತಿ ಶಾಲೆ ಬಾಡಿಗೆ ಕಟ್ಟಡದಲ್ಲಿದ್ದು ಅವಕಾಶ ಕೊಟ್ಟರೆ ಇದೇ ಕಟ್ಟಡವನ್ನು ದುರಸ್ತಿ ಮಾಡಲಾಗುವುದು ಇಲ್ಲವೇ ಬೇರ್ರೆ ಕಟ್ಟಡ  ನೋಡಿ ಶಾಲೆಯನ್ನು ಸ್ಥಳಾಂತರ  ಮಾಡುವ ಕೆಲಸವನ್ನು ಚಾರಿಟೆಬಲ್ ಸೊಅಸಿಟಿ ಮಾಡಲು ಮುಂದಾಗಿದೆ. ಜತೆಗೆ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟಿಂಬಗಳುಗೆ ಶಾಶ್ವತ ಪರಿಹಾರವೊಂದನ್ನು ಒದಗಿಸಲು ಚಿಂತನೆ ಮಾಡಿದೆ.

ಕಳೆದ ವಾರ ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದ ಮಂಗಳಮುಖಿಯರು ಕಿಚ್ಚ ಸುದೀಪ್ ಚಾರಿಟೆಬಲ್ ಸೊಸೈಟಿಗೆ ಕರೆ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದರು. ತಕ್ಷಣವೇ ನೆರವಿಗೆ ಧಾವಿಸಿದ ಸೊಸೈಟಿ ಚಿತ್ರದುರ್ಗದ ಮಂಗಳಮುಖಿಯರ ಮನೆಗೆ ದಿನಸಿ ಕಿಟ್ ಗಳನ್ನು ವಿತರಿಸಿದ್ದಾರೆ.ಕಿಚ್ಚ ಸುದೀಪ್ ಅವರ ಈ ಸೇವೆಗೆ ಶ್ಲಾಘನೆ ವ್ಯಕ್ತವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

SCROLL FOR NEXT