ಅಧ್ವಿತಿ ಶೆಟ್ಟಿ 
ಸಿನಿಮಾ ಸುದ್ದಿ

"ನನ್ನೆ ಈಗ" ಹಾಡಿನೊಂದಿಗೆ 'ಐರಾವನ್' ಬೆಡಗಿ ಅಧ್ವಿತಿ ಶೆಟ್ಟಿ ಎಂಟ್ರಿ!

ಅಧ್ವಿತಿ ಶೆಟ್ಟಿ ಒಂದು ಹಾಡಿನ ಮೂಲಕ ಚೊಚ್ಚಲ ಬಾರಿಗೆ ಏಕವ್ಯಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಈ ಹಾಡಿನ ವಿಡಿಯೋ ಜೂನ್ 10 ರಂದು ಬಿಡುಗಡೆಯಾಗಲಿದೆ. "ನನ್ನೆ ಈಗ" ಎಂಬ ಹೆಸರಿನ ಹಾಡು ರೋಮ್ಯಾಂಟಿಕ್ ಟ್ರ್ಯಾಕ್ ಆಗಿರಲಿದ್ದು  ಇದರಲ್ಲಿ ಪ್ರತಾಪ್ ಟೋನಿ ಕೂಡ ಕಾಣಿಸಿಕೊಂಡಿದ್ದಾರೆ.

ಅಧ್ವಿತಿ ಶೆಟ್ಟಿ ಒಂದು ಹಾಡಿನ ಮೂಲಕ ಚೊಚ್ಚಲ ಬಾರಿಗೆ ಏಕವ್ಯಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಈ ಹಾಡಿನ ವಿಡಿಯೋ ಜೂನ್ 10 ರಂದು ಬಿಡುಗಡೆಯಾಗಲಿದೆ. "ನನ್ನೆ ಈಗ" ಎಂಬ ಹೆಸರಿನ ಹಾಡು ರೋಮ್ಯಾಂಟಿಕ್ ಟ್ರ್ಯಾಕ್ ಆಗಿರಲಿದ್ದು  ಇದರಲ್ಲಿ ಪ್ರತಾಪ್ ಟೋನಿ ಕೂಡ ಕಾಣಿಸಿಕೊಂಡಿದ್ದಾರೆ.

"ಆಲ್ಬಮ್ ಹಾಡುಗಳು ಅಥವಾ ಹಾಡೊಂದರ ರಿಲೀಸ್ ಇಂದಿನ ಪ್ರವೃತ್ತಿಯಾಗಿದೆ, ಮತ್ತು ಇದು ನನ್ನ ಅಭಿಮಾನಿಗಳನ್ನು ತಲುಪಲು ಸರಿಯಾದ ಅವಕಾಶವಾಗಿದೆ. ಎರಡನೆಯದಾಗಿ, ಸಿನಿಮಾಗಳು ಬಿಡುಗಡೆಯಾಗಲು ಇನ್ನೂ ತಿಂಗಳುಗಳ ಕಾಲಾವಕಾಶ ಬೇಕಾಗಬಹುದು. ಆದಾಗ್ಯೂ, ಈ ಹಾಡನ್ನು ಅಲ್ಪಾವಧಿಯಲ್ಲಿಯೇ ಮಾಡಲಾಗಿದ್ದು  ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಹೊರಬರಲಿದೆ.. ಆದ್ದರಿಂದ ಅದನ್ನು ಯಾವುದೇ ಸಮಯದಲ್ಲಿ ವೀಕ್ಷಿಸಬಹುದು." ಐರಾವನ್ ನಟಿ ಹೇಳಿದ್ದಾರೆ.

ಕೆ.ಎಸ್.ಗೌಡರು ನಿರ್ಮಿಸಿದ ಈ ಹಾಡಿಗೆ ಭರಣ ಸಂಗೀತವಿದ್ದು ರವಿ ಸಾಹಿತ್ಯ ಬರೆದಿದ್ದಾರೆ.

"ನನ್ನೆ ಈಗ" ಹಾಡನ್ನು ಪುದುಚೆರಿ ಮತ್ತು ಬೆಂಗಳೂರಿನಂತಹ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದ್ದು, ವಿಷ್ಣು ವಿರ್ತ ಕ್ಯಾಮೆರಾ ಕೆಲಸವನ್ನು ನಿರ್ವಹಿಸಿದ್ದಾರೆ.

ಅದ್ವಿತಿ ತಮ್ಮ ಕೈಯಲ್ಲಿ ಉತ್ತಮ ಚಿತ್ರಗಳನ್ನು ಹೊಂದಿದ್ದು ಧರ್ಮ ಕೀರ್ತಿರಾಜ್ ಅಭಿನಯದ ಕ್ಯಾಡ್ಬರೀಸ್ ಕಾರ್ತಿಕ್ ಜಯರಾಮ್ ನಾಯಕನಾಗಿರುವ ಐರಾವನ್ ಧೀರ ಸಾಮ್ರಾಟ್ ಹಾಗೂ ಡಾ. ಅಭಿ 007 ಇದರಲ್ಲಿ ಸೇರಿದೆ. ಅಲ್ಲದೆ ನಟಿ ದೀಪಕ್ ಅರಸ್ ನಿರ್ದೇಶನದ ಶುಗರ್ ಫ್ಯಾಕ್ಟರಿ ಚಿತ್ರದ ಭಾಗವಾಗಿದ್ದಾರೆ. ಇದರಲ್ಲಿ ಅವರು ಕೃಷ್ಣ, ಸೋನಾಲ್ ಮಾಂಟೆರೋ ಮತ್ತು ಶಿಲ್ಪಾ ಶೆಟ್ಟಿ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

SCROLL FOR NEXT