ಸಿನಿಮಾ ಸುದ್ದಿ

ನಕಲಿ ಪಿಎಚ್ ಡಿ ತೋರಿಸಿ ಆಸ್ಪತ್ರೆಯಲ್ಲಿ ನೌಕರಿ: 'ಬಾಳ ಠಾಕ್ರೆ' ಸಿನಿಮಾ ನಿರ್ಮಾಪಕಿ ಸ್ವಪ್ನಾ ಪಾಟ್ಕರ್ ಬಂಧನ

Shilpa D

ಮುಂಬಯಿ: ನಕಲಿ ಪಿಎಚ್ ಡಿ ತೋರಿಸಿ ಆಸ್ಪತ್ರೆಯಲ್ಲಿ ನೌಕರಿ ಪಡೆದ ಹಿನ್ನೆಲೆಯಲ್ಲಿ ಮರಾಠಿ ನಿರ್ಮಾಪಕಿ ಸ್ವಪ್ನಾ ಪಾಟ್ಕರ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

39 ವರ್ಷದ ಸ್ವಪ್ನಾ ಪಾಟ್ಕರ್ ಕ್ಲಿನಿಕಲ್‌ ಫಿಸಿಯೋಲಜಿಯಲ್ಲಿ ಪಿಎಚ್‌ಡಿ ಮಾಡಿರುವುದಾಗಿ ದಾಖಲೆಗಳನ್ನು ತೋರಿಸಿ ಆಸ್ಪತ್ರೆಯಲ್ಲಿ ಕೆಲಸ ಗಿಟ್ಟಿಸಿದ್ದರು ಎಂದು ಪೊಲೀಸ್‌ ಮೂಲಗಳು  ತಿಳಿಸಿವೆ. 

ಶಿವಸೇನೆ ಸ್ಥಾಪಕ ಬಾಳ್‌ ಠಾಕ್ರೆ ಅವರ ಜೀವನಚಿತ್ರ ಮರಾಠಿಯ 'ಬಾಳ್‌ ಕಡು' ಚಿತ್ರವನ್ನು ಸ್ವಪ್ನಾ ನಿರ್ಮಿಸಿದ್ದಾರೆ. 2015ರಲ್ಲಿ ಸಿನಿಮಾ ಬಿಡುಗಡೆಯಾಗಿತ್ತು.

ಮುಂಬೈನ ಬಾಂದ್ರಾ ಪೊಲೀಸ್‌ ಠಾಣೆಯಲ್ಲಿ ಮೇ 26ರಂದು ನಕಲಿ ಪಿಎಚ್‌ಡಿ ಹೊಂದಿರುವ ದೂರು ದಾಖಲಾಗಿದೆ. ವಂಚನೆ, ನಕಲು ಮತ್ತು ಮೋಸ ಮಾಡುವುದಕ್ಕಾಗಿ ನಕಲು ಮಾಡಿದ ಆರೋಪಗಳು ಸ್ವಪ್ನಾ ಅವರ ಮೇಲಿವೆ. ಐಪಿಸಿ ಕಾಯ್ದೆ 419, 420, 467 ಮತ್ತು 468 ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT