ಅನುಜ್ ಸಕ್ಸೇನಾ 
ಸಿನಿಮಾ ಸುದ್ದಿ

141 ಕೋಟಿ ರೂ. ವಂಚನೆ ಪ್ರಕರಣ: ಪ್ರಸಿದ್ಧ ಕಿರುತೆರೆ ನಟ ಅನುಜ್ ಸಕ್ಸೇನಾ ಅರೆಸ್ಟ್

ಕಿರುತೆರೆ ನಟ ಹಾಗೂ ಎಲ್ಡರ್ ಫಾರ್ಮಾಸ್ಯುಟಿಕಲ್ಸ್‌ನ ಸಿಒಒ ಅನುಜ್ ಸಕ್ಸೇನಾ ಮುಂಬೈ ಪೊಲೀಸರ ಅತಿಥಿಯಾಗಿದ್ದಾರೆ. ಮುಂಬೈ ಪೊಲೀಸ್ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ) ಗುರುವಾರ ಅನುಜ್ ಸಕ್ಸೇನಾ ಅವರನ್ನು ಬಂಧಿಸಿದೆ. 

ಮುಂಬೈ: ಕಿರುತೆರೆ ನಟ ಹಾಗೂ ಎಲ್ಡರ್ ಫಾರ್ಮಾಸ್ಯುಟಿಕಲ್ಸ್‌ನ ಸಿಒಒ ಅನುಜ್ ಸಕ್ಸೇನಾ ಮುಂಬೈ ಪೊಲೀಸರ ಅತಿಥಿಯಾಗಿದ್ದಾರೆ. ಮುಂಬೈ ಪೊಲೀಸ್ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ) ಗುರುವಾರ ಅನುಜ್ ಸಕ್ಸೇನಾ ಅವರನ್ನು ಬಂಧಿಸಿದೆ. ಹೂಡಿಕೆದಾರರಿಗೆ 141 ಕೋಟಿ ವಂಚಿಸಿದ್ದಾರೆ ಎಂಬ ದೂರಿಗೆ ಸಂಬಂಧಿಸಿದಂತೆ ಸಕ್ಸೇನಾ ಅವರನ್ನು ಬಂಧಿಸಲಾಗಿದೆ.

ಕಂಪನಿಯ ಸಿಒಒ ಆಗಿ ಅವರ ಪಾತ್ರದ ತನಿಖೆಗೆ ಇಒಡಬ್ಲ್ಯೂ ಅನುಜ್ ಸಕ್ಸೇನಾ ಅವರ ವಶಕ್ಕೆ ಮುಂದಾದಾಗ ಅವರು ತಾವೊಬ್ಬ ವೈದ್ಯಕೀಯ ಕಿಟ್‌ಗಳು ಮತ್ತು ಸ್ಯಾನಿಟೈಸರ್ಗಳನ್ನು ಉತ್ಪಾದಿಸುವ ಸುವ ಕಂಪನಿಯನ್ನು ಹೊಂದಿರುವವನು ಎಂದೂ ತನ್ನನ್ನು ವಶಕ್ಕೆ ಪಡೆಯುವುದು ಸರಿಯಲ್ಲವೆಂದು ವಿರೋಧಿಸಿದರು.  ಸಿಒಒ ಆಗಿ ಸಕ್ಸೇನಾ ವಂಚನೆ ಮಾಡಿದ ಆರೋಪದ ಕುರಿತು ತಿಳುವಳಿಕೆ ಹೊಂದಿರಬಹುದು ಎಂಬ ಇಒಡಬ್ಲ್ಯೂ ವಾದವನ್ನು ನ್ಯಾಯಾಲಯ ಒಪ್ಪಿಕೊಂಡಿತು.

ಮೋಸ ಮತ್ತು ಕ್ರಿಮಿನಲ್ ಪಿತೂರಿ ಮತ್ತು ಮಹಾರಾಷ್ಟ್ರ ಪ್ರೊಟೆಕ್ಷನ್ ಆಫ್ ಇಂಟರೆಸ್ಟ್ ಆಫ್ ಡಿಪಾಸಿಟರ್ ಆಕ್ಟ್, 1999 ರ ವಿಭಾಗಗಳ ಮೇಲೆ ಸಕ್ಸೇನಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.  2012 ರಲ್ಲಿ ಕಂಪನಿಯ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡಿದ್ದರೆ ಲಾಭದಾಯಕ ಆದಾಯವನ್ನು ಹೊಂದುವ ಭರವಸೆ ನೀಡಿದ್ದ ಸಕ್ಸೇನಾ ಅವರ ವಿರುದ್ಧ ಹೂಡಿಕೆದಾರರು ದೂರು ದಾಖಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

SCROLL FOR NEXT