ಸಿನಿಮಾ ಸುದ್ದಿ

ಸ್ಯಾಂಡಲ್ ವುಡ್ ನಿರ್ದೇಶಕ ಎ.ಪಿ. ಅರ್ಜುನ್ ದಂಪತಿಗೆ ಗಂಡು ಮಗು ಜನನ!

Raghavendra Adiga

ವಿರಾಟ್ ಹಾಗೂ ಸಂಜನಾ ಆನಂದ್ ಅಭಿನಯದ "ಅದ್ದೂರಿ ಲವರ್" ಸಿನಿಮಾ ತಯಾರಿ ಪ್ರಾರಂಭಿಸಿದ್ದ ಸ್ಯಾಂಡಲ್ ವುಡ್ ನಿರ್ದೇಶಕ ಎಪಿ ಅರ್ಜುನ್ ಗಂಡು ಮಗುವಿಗೆ ತಂದೆಯಾಗಿದ್ದಾರೆ.

ಕಳೆದ ವರ್ಷದ ಮೇ 10ರಂದು ಕುಟುಂಬದ ಆಪ್ತರು ಹಾಗೂ ಕೆಲವೇ ಸ್ನೇಹಿತರ ಸಮ್ಮುಖದಲ್ಲಿ ತಮ್ಮ ದೀರ್ಘಕಾಲದ ಪ್ರೇಮಿ ಅನ್ನಪೂರ್ಣಾ ಅವರನ್ನು ವಿವಾಹವಾಗಿದ್ದ ಅರ್ಜುನ್ ದಂಪತಿಗಳಿಗೆ ಗಂಡು ಮಗುವಾಗಿದೆ.

ನಿರ್ದೇಶಕ ಈ ಶುಭ ಸುದ್ದಿಯನ್ನು ಸ್ವತಃಅ ಹಂಚಿಕೊಂಡಿದ್ದು ಶುಕ್ರವಾರ (ಮೇ ೭) ತಾನು ಗಂಡು ಮಗಿವಿನ ತಂದೆಯಾಗಿರುವುದಾಗಿ ಟ್ವೀಟ್ ಮಾಡಿದ್ದಾರೆ.

SCROLL FOR NEXT