ಸಿನಿಮಾ ಸುದ್ದಿ

ಮಿಸ್ಟರ್ ಆರ್‌ಜಿವಿ, ನಿಮ್ಮ 'ಡೇಂಜರಸ್'ಗೂ ಮೊದಲೇ ಕನ್ನಡದಲ್ಲಿ ಸಲಿಂಗಿ ಚಿತ್ರ ಬಂದಿದೆ, ಮರೀಬೇಡಿ: ಟೇಶಿ ವೆಂಕಟೇಶ್

Vishwanath S

ಟಾಲಿವುಡ್ ನಿರ್ದೇಶಕ ರಾಮಗೋಪಾಲ್ ವರ್ಮಾ ಅವರು ಡೇಂಜರಸ್ ಚಿತ್ರ ನಿರ್ದೇಶಿಸಿದ್ದು ನಾಳೆ ಚಿತ್ರದ ಟ್ರೈಲರ್ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ್ದಾರೆ. 

ಡೇಂಜರಸ್ ಚಿತ್ರದ ಪೋಸ್ಟರ್ ವೊಂದನ್ನು ಟ್ವೀಟ್ ಮಾಡಿದ್ದು ಪೋಸ್ಟರ್ ನಲ್ಲಿ ಇದು ಭಾರತ ಮೊದಲ ಸಲಿಂಗಿ ಚಿತ್ರ ಎಂದು ಬರೆಯಲಾಗಿದೆ. ಇನ್ನು ಚಿತ್ರದಲ್ಲಿ ನೈನಾ ಗಂಗೂಲಿ ಮತ್ತು ಅಪ್ಸರ ರಾಣಿ ನಟಿಸಿದ್ದು ನಾಳೆ ಚಿತ್ರದ ಟ್ರೈಲರ್ ಬಿಡುಗಡೆಯಾಗುತ್ತದೆ ಎಂದು ಆರ್ ಜಿವಿ ಟ್ವೀಟಿಸಿದ್ದರು. 

ಈ ಟ್ವೀಟ್ ಗೆ ಕನ್ನಡದ ನಿರ್ದೇಶಕ ಟೇಸಿ ವೆಂಕಟೇಶ್ ರೀಟ್ವೀಟ್ ಮಾಡಿದ್ದು ಮಿಸ್ಟರ್ ಆರ್‌ಜಿವಿ, ನಿಮ್ಮ ಡೇಂಜರಸ್ ಗೂ ಮೊದಲೇ ಅಂದರೆ 2017ರಲ್ಲೇ ಆರ್ಟಿಕಲ್ 377 ಮತ್ತು ಸಲಿಂಗಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಬೆಸ್ಟ್ ಫ್ರೆಂಡ್ಸ್ ಅನ್ನೋ ಸಲಿಂಗಿ ಚಿತ್ರ ನಿರ್ಮಾಣವಾಗಿದ್ದು 2019ರ ಜನವರಿ 4ರಂದು ಚಿತ್ರ ಬಿಡುಗಡೆಯಾಗಿತ್ತು. ನಿಮ್ಮದು ಮೊದಲನೆಯದಲ್ಲ. ಜನರನ್ನು ಗೊಂದಲಕ್ಕೀಡು ಮಾಡಬೇಡಿ. ಅಲ್ಲದೆ ಒಲವಿನ ಒಲೆ ಕನ್ನಡ ಚಿತ್ರವನ್ನು ಮರಾಠಿಯಲ್ಲಿ ಸೈರಟ್ ಮತ್ತು ಹಿಂದಿಯಲ್ಲಿ ಧಡಕ್ ಹೆಸರಿನಲ್ಲಿ ಚಿತ್ರ ನಿರ್ಮಿಸಿದ್ದರು. ನಾವು ದಕ್ಷಿಣದವರಿಗೆ ಹೆಮ್ಮೆ ವಿಷಯ ಎಂದು ಟ್ವೀಟ್ ಮಾಡಿದ್ದಾರೆ. 

ಇತ್ತೀಚೆಗೆ ರಾಮಗೋಪಾಲ್ ವರ್ಮಾ ಅವರು ಹಲವಾರು ಪ್ರಯೋಗಾತ್ಮಕ ಚಿತ್ರಗಳನ್ನು ನಿರ್ದೇಶಿಸುತ್ತಿದ್ದಾರೆ. ಇನ್ನು ಗಾಡ್, ಸೆಕ್ಸ್ ಅಂಡ್ ಥ್ರೂತ್ ಚಿತ್ರದಲ್ಲಿ ಪೋರ್ನ್ ನಟಿ ಮಾಲ್ಕೋವಾ ಅವರನ್ನು ಬೆತ್ತಲಾಗಿ ತೋರಿಸಿದ್ದರು. 

SCROLL FOR NEXT