ಸ್ನೇಹಿತ್ ಗೌಡ 
ಸಿನಿಮಾ ಸುದ್ದಿ

ಅರವಿಂದ್ ಕೌಶಿಕ್ ನಿರ್ದೇಶನದ 'ಗಾನ್ ಕೇಸ್' ನಲ್ಲಿ ಬಿಗ್ ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್!

ಹುಲಿರಾಯ ನಿರ್ದೇಶಕ ಅರವಿಂದ್ ಕೌಶಿಕ್ ಅವರ ಮುಂದಿನ ಸಿನಿಮಾ 'ಗಾನ್ ಕೇಸ್', ಥ್ರಿಲ್ಲರ್ ಕಥೆಯುಳ್ಳ ಈ ಸಿನಿಮಾ ಅರವಿಂದ್ ಕೌಶಿಕ್ ಅವರ ಆರನೆ ಸಿನಿಮಾವಾಗಿದೆ.

ಹುಲಿರಾಯ ನಿರ್ದೇಶಕ ಅರವಿಂದ್ ಕೌಶಿಕ್ ಅವರ ಮುಂದಿನ ಸಿನಿಮಾ 'ಗಾನ್ ಕೇಸ್', ಥ್ರಿಲ್ಲರ್ ಕಥೆಯುಳ್ಳ ಈ ಸಿನಿಮಾ ಅರವಿಂದ್ ಕೌಶಿಕ್ ಅವರ ಆರನೆ ಸಿನಿಮಾವಾಗಿದೆ.

ಗಾನ್ ಕೇಸ್ ಸಿನಿಮಾ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ತಯಾರಾಗಲಿದೆ. ಸರಣಿ ಹಂತಕನೊಬ್ಬನ ಅಪರಾಧ ಪ್ರಕರಣಗಳು ಮತ್ತು ಅದಕ್ಕಾಗಿ ಅವನಿಗಾಗುವ ಶಿಕ್ಷೆ ಸಂಬಂಧಿತ ಕಥೆ ಇದಾಗಿದೆ. ಈಗಾಗಲೇ ಕಥೆ ಸಿದ್ಧವಾಗಿದ್ದು, ಚಿಕ್ಕದಾದ ಟೀಸರ್ ಕೂಡ ರೆಡಿಯಾಗಿದೆ.

ಲಾಕ್ ಡೌನ್ ಮುಗಿದ ಮೇಲೆ ಶೂಟಿಂಗ್ ನಡೆಸಲು  ಕಾಯುತ್ತಿದ್ದಾರೆ, ಇನ್ನೂ ಸಿನಿಮಾದಲ್ಲಿ ಸ್ನೇಹಿತ್ ಗೌಡ ಎಂಬ ಹೊಸ ಪ್ರತಿಭೆಯನ್ನು ಪರಿಚಯಿಸುತ್ತಿದ್ದಾರೆ. ಸ್ನೇಹಿತ್ ಪಂಜಾಬಿ ನಾಟಕಗಳಲ್ಲಿ ಸಕ್ರಿಯರಾಗಿರುವ ರಂಗಭೂಮಿ ಕಲಾವಿದರಾಗಿದ್ದಾರೆ.

ಬೆಳ್ಳಿ ಪರದೆ ಪ್ರವೇಶಿಸಲು ಸ್ನೇಹಿತ್ ಒಂದು ವರ್ಷದಿಂದ ಸಿದ್ಧತೆ ನಡೆಸಿದ್ದಾರೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಇನ್ನೂ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಚಕ್ರವರ್ತಿ ಚಂದ್ರಚೂಡ್ ನಟಿಸಲಿದ್ದಾರೆ, ಚಂದ್ರಚೂಡ್ ನನ್ನ ಸ್ನೇಹಿತ, ಅವರು ನನ್ನ ಸಿನಿಮಾದಲ್ಲಿ ನಟಿಸಬೇಕು ಎಂಬ ಐಡಿಯಾ ತುಂಬಾ ಹಿಂದಿನಿಂದಲೂ ಇತ್ತು. ಹೀಗಾಗಿ ಅವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇದು ಮತ್ತೊಂದು ಪಾತ್ರವಾಗಬೇಕೆಂದು ನಾನು ಬಯಸಲಿಲ್ಲ. ಅವರು ಬಿಗ್ ಬಾಸ್ ಶೋನಲ್ಲಿದ್ದಾಗ, ಅವರ ಪಾತ್ರವು ವಿಭಿನ್ನ ಆಕಾರವನ್ನು ಪಡೆದುಕೊಂಡಿತು. ನಾನು ಬಿಗ್ ಬಾಸ್ ನಲ್ಲಿ ಅವರ ಪ್ರದರ್ಶನದಲ್ಲಿ ನೋಡಿದಾಗ, ಅವರ ಆಫ್-ಸ್ಕ್ರೀನ್ ವ್ಯಕ್ತಿತ್ವವು ನಾನು ಚಿತ್ರಿಸಿದ ಪಾತ್ರಕ್ಕೆ ಸರಿಹೊಂದುತ್ತದೆ ಎನಿಸಿತು. ಹೀಗಾಗಿ ಅವರಿಗಾಗಿ ವಿಶೇಷವಾದ ಸ್ಕ್ರಿಪ್ಟ್ ತಯಾರಿಸಿದ್ದೇನೆ
ಎಂದು ಅರವಿಂದ್ ಹೇಳಿದ್ದಾರೆ.

ಚಿತ್ರದಲ್ಲಿ ನಾಯಕಿಯಿರುವುದಿಲ್ಲ, ಆದರೆ ಪ್ರಬಲವಾದ ಮಹಿಳಾ ಪಾತ್ರವಿರುತ್ತದೆ, ಇನ್ನೂ ಹಲವು ಕಲಾವಿದರ ಆಯ್ಕೆ ನಡೆಯಬೇಕಿದ್ದು ಅಧಿಕೃತ ಘೋಷಣೆ ಬಾಕಿಯಿದೆ.

ಕೊರೋನಾ ಎರಡನೇ ಅಲೆ ಮುಗಿದ ಮೇಲೆ ಶೂಟಿಂಗ್ ಕೆಲಸ ಆರಂಭಿಸಲು ನಿರ್ದೇಶಕರು ತೀರ್ಮಾನಿಸಿದ್ದಾರೆ. ಕನ್ನಡ ಮತ್ತು ಹಿಂದಿಯಲ್ಲಿ ಪ್ರಯೋಗಾತ್ಮಕ ಚಿತ್ರವಾಗಿದೆ. ಇದು ಬಿ-ಟೌನ್‌ಗೆ ಪ್ರವೇಶದ ಕೇಂದ್ರವಾಗಲಿದೆ. ಹಾಡುಗಳನ್ನು ಹೊಂದಿರದ ಚಿತ್ರಗಳಲ್ಲಿ ಇದು ಒಂದಾಗಿದೆ, ಮತ್ತು ಚಿತ್ರೀಕರಣ ಪೂರ್ಣಗೊಂಡ ನಂತರ ಸಂಗೀತ ಸಂಯೋಜಕನನ್ನು ನಿರ್ಧರಿಸಲು ನಿರ್ದೇಶಕರು ಬಯಸಿದ್ದಾರೆ.. ಏತನ್ಮಧ್ಯೆ, ಅರವಿಂದ್ ಅವರ ಸ್ಟೀಲ್ ಪಾತ್ರೆ ಸಾಮಾನ್ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಈ ಚಿತ್ರವನ್ನು ಸೆನ್ಸಾರ್ ಮಂಡಳಿಗೆ ನೀಡಲು ಕಾಯುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT