ಸಿನಿಮಾ ಸುದ್ದಿ

ಜೈ ಭೀಮ್ ಚಿತ್ರದಲ್ಲಿ ಸೂರ್ಯ ಲಾಯರ್ ಲುಕ್ ಹಿಂದೆ ಬೆಂಗಳೂರು ಮೂಲದ ವಿನ್ಯಾಸಕ ಬಸ್ಸಮ್ ಒಸ್ಮಾನ್!

Nagaraja AB

ಬೆಂಗಳೂರು: ಇತ್ತೀಚಿಗೆ ವಿಶ್ವದಾದ್ಯಂತ ಜನರ ಗಮನ ಸೆಳೆದ ಚಿತ್ರವಿದ್ದರೆ, ಅದು ಟಿಜೆ ಜ್ಞಾನವೇಲ್ ನಿರ್ದೇಶನದ ಜೈ ಭೀಮ್. ಕಥೆಯು ಅನೇಕರನ್ನು ಆಕರ್ಷಿಸಿದ್ದು, ಆಸಕ್ತಿಯನ್ನುಂಟುಮಾಡಿದ್ದರೆ, ಮತ್ತೆ ಕೆಲವರು ನಾಯಕ ನಟ ಸೂರ್ಯ ಅವರ ಲುಕ್ ಬಗ್ಗೆ ಕುತೂಹಲ ವ್ಯಕ್ತಪಡಿಸಿದ್ದಾರೆ. ಕಳೆದ ವಾರ ಒಟಿಟಿ ಪ್ಲಾಟ್ ಪಾರಂನಲ್ಲಿ ಬಿಡುಗಡೆಯಾದ ಚಿತ್ರದಲ್ಲಿನ ಸೂರ್ಯರ ಕೋರ್ಟ್ ರೂಮ್ ಲುಕ್ ಸೃಷ್ಟಿಸಿದ್ದು, ಬೆಂಗಳೂರು ಮೂಲದ ಪುರುಷರ ಉಡುಪು ವಿನ್ಯಾಸಕ ಬಸ್ಸಮ್ ಒಸ್ಮಾನ್.

ಚೆನ್ನೈನಲ್ಲಿ ಸ್ಟುಡಿಯೋ ಬಾಸ್ ಎನ್ನುವ ಸ್ಟುಡಿಯೋ ಒಂದನ್ನು ಹೊಂದಿರುವ ಒಸ್ಮಾನ್,  ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿನ ಹೆಚ್ಚುವರಿ ಸ್ಟುಡಿಯೋ ದಿಂದ ತಮಿಳು ಸ್ಟಾರ್ ಗಳೊಂದಿಗೆ ಡಬಲ್ ನಲ್ಲಿ ಕೆಲಸ ಮಾಡಿದ್ದಾರೆ. ನಾಲ್ಕು ದಿನಗಳಲ್ಲಿ ಇದನ್ನು ನಾವು ಪೂರ್ಣಗೊಳಿಸಿದೇವು. ನಾವು ಅನೇಕ ವರ್ಷಗಳಿಂದ ತಮಿಳು ನಟರಿಗಾಗಿ ಲುಕ್ ವಿನ್ಯಾಸಕರಾಗಿ ಕೆಲಸ ಮಾಡುತ್ತಿದ್ದೇವೆ. 2003ರಲ್ಲಿ ಬಿಡುಗಡೆಯಾದ ಸೂರ್ಯರ ಪ್ರಥಮ ಚಿತ್ರ ಕಾಖಾದಿಂದಲೂ ಅವರ ಲುಕ್ ವಿನ್ಯಾಸಕರಾಗಿ ಮಾಡುತ್ತಿರುವುದಾಗಿ ತಿಳಿಸಿದರು.

ಜೈ ಭೀಮ್ ಚಿತ್ರಕ್ಕಾಗಿ ವಿನ್ಯಾಸಕ ಹಾಗೂ ಅವರ ತಂಡಕ್ಕೆ ಸಂಕ್ಷಿಪ್ತವಾಗಿ ವಿವರಿಸಿ, ಕೋರ್ಟ್ ರೂಮ್ ದೃಶ್ಯಕ್ಕಾಗಿ ಅಗತ್ಯವಿರುವ ಸಿದ್ಧತೆ ಮಾಡುವಂತೆ ಸೂಚಿಸಲಾಗಿತ್ತು.  ಚಿತ್ರದ ಹೆಸರು ಕೂಡಾ ಹೇಳಿರಲಿಲ್ಲ. ಕೋರ್ಟ್ ರೂಮ್ ಲುಕ್ ಹೇಗಿರಬೇಕು ಎಂಬುದು ಎಲ್ಲರಿಗೂ ಗೊತಿತ್ತು. ಈ ಹಿಂದೆ ಅಜಿತ್ ನಾಯಕ ನಟರಾಗಿ ಅಭಿನಯಿಸಿದ್ದ ನೆರಕೊಂಡ ಪಾರ್ವೈ' ಅದರ ರಿಮೇಕ್ ಬಾಲಿವುಡ್ ನ ' ಪಿಂಕ್' ಚಿತ್ರದಲ್ಲಿ ಕೋರ್ಟ್ ರೂಮ್ ಲುಕ್ ವಿನ್ಯಾಸ ಮಾಡಿದ್ದೇವು. ಅದೇ ರೀತಿಯಲ್ಲಿ ಜೈ ಭೀಮ್ ಚಿತ್ರದಲ್ಲೂ ಮಾಡಿದ್ದಾಗಿ ಅವರು ಹೇಳಿದರು.

ಫಿಲಂ ಸೆಟ್ ನಲ್ಲಿ ಯಾವಾಗಲೂ ವಸ್ತ್ರ ವಿನ್ಯಾಸಕರೊಬ್ಬರು ಇರುತ್ತಾರೆ. ಆದರೆ, ನಾಯಕ/ನಾಯಕಿಯ ಲುಕ್ ನ್ನು  ರಚಿಸಲು ಹೊಸ ದೃಷ್ಟಿಕೋನವನ್ನು ಹೊಂದಿರುವ ಬಾಹ್ಯ ವ್ಯಕ್ತಿಯನ್ನು ಹೊಂದಿರುವುದು ಚಿತ್ರದ ವಸ್ತ್ರ ವಿನ್ಯಾಸಕನಿಗೆ ಇತರ ಸಿಬ್ಬಂದಿಗೆ ಕೆಲಸ ಮಾಡಲು ಸಮಯವನ್ನು ನೀಡುತ್ತದೆ. ಅಲ್ಲಿಗೆ ನಾವು ಬರುತ್ತೇವೆ ಎಂದು ಅವರು ತಿಳಿಸಿದರು. 

ಜೈ ಭೀಮ್ ಚಿತ್ರದಲ್ಲಿನ ಬಿಳಿ ಶರ್ಟ್, ಕಪ್ಪು ಬಣ್ಣದ ಜಾಕೆಟ್ ನ ಪೋಸ್ಟರ್ ವೈರಲ್ ಆಗಿತ್ತು. ಇದು ಒಸ್ಮಾನಿ ಅವರ ತಂಡದ ಕೆಲಸವಾಗಿದೆ. ಇದಕ್ಕೂ ಮುನ್ನ ಅವರು ಸೂರ್ಯರ ಸೂರರೈ ಪೊಟ್ರು ಚಿತ್ರದಲ್ಲೂ ಕೆಲಸ ಮಾಡಿದ್ದರು. ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಒಸ್ಮಾನ್, ಇತ್ತೀಚಿಗೆ ಅಸುರನ್‌ ಚಿತ್ರಕ್ಕಾಗಿ  ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ್ದಾಗ ಧನುಷ್‌ ಧರಿಸಿದ್ದ ಗರಿಗರಿಯಾದ ಬಿಳಿ ಅಂಗಿಯನ್ನು ವಿನ್ಯಾಸಗೊಳಿಸಿದರು.

ಸೂರ್ಯರಿಗಾಗಿ ಅನೇಕ ವರ್ಷಗಳಿಂದ ಭಿನ್ನ, ವಿಭಿನ್ನ ರೀತಿಯಲ್ಲಿ ಲುಕ್ ಸೃಷ್ಟಿಸುವ ಒಸ್ಮಾನ್, ಇದೊಂದು ಅತ್ಯುತ್ತಮ ಅವಕಾಶವಾಗಿದೆ ಎನ್ನುವ ಒಸ್ಮಾನ್, ಸೂರ್ಯ ಅವರ ಪತ್ನಿ ಮತ್ತು ನಟಿ ಜ್ಯೋತಿಕಾ ಕೂಡ ಕಸ್ಟಮೈಸ್ ಮಾಡಿದ ಸೀರೆಗಳಿಗಾಗಿ ಆಗಾಗ್ಗೆ ಚೆನ್ನೈನಲ್ಲಿರುವ ತನ್ನ ಸಹೋದರನ ಸ್ಟುಡಿಯೋಗೆ ಬರುತ್ತಾರೆ ಎಂದು ತಿಳಿಸಿದರು. 

SCROLL FOR NEXT