ಶ್ರೀ ಮುರುಳಿ 
ಸಿನಿಮಾ ಸುದ್ದಿ

ಶ್ರೀಮುರುಳಿ ನಟನೆಯ 'ಮದಗಜ' ಸಿನಿಮಾ 1,500 ಸ್ಕ್ರೀನ್ ಗಳಲ್ಲಿ ಪ್ರದರ್ಶನ

ಉಮಾಪತಿ ಫಿಲ್ಮ್ಸ್ ನಿರ್ಮಾಣ ಮಾಡಿರುವ ಮದಗಜ ಸಿನಿಮಾವನ್ನು1500 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ.

ನಟ ಶ್ರೀಮುರಳಿ ಅಭಿನಯದ ಮದಗಜ ಸಿನಿಮಾ ಹಾಡಿನಿಂದ ಸಖತ್ ಸದ್ದು ಮಾಡುತ್ತಾ ಇದೆ. ಈ ಹಿಂದೆ ಮದಗಜ ಮೆಲೋಡಿ ಹಾಡಿನ ಮೂಲಕ ಗಮನ ಸೆಳೆದಿತ್ತು. ನಟಿ ಶ್ರೀಮುರಳಿ ಮತ್ತು ಆಶಿಕಾ ರಂಗನಾಥ್ ಕಾಣಿಸಿಕೊಂಡು ಮೆಲೋಡಿ ಲವ್‌ ಟ್ರ್ಯಾಕ್ ಸಿನಿಪ್ರಿಯರ ಮನ ಗೆದ್ದಿದೆ. ಗೆಳೆಯ ನನ್ನ ಗೆಳೆಯ ಅನ್ನೊ ಹಾಡಿನ ಬಳಿಕ ಈಗ ಮಸ್ತ್ ಮಾಸ್‌ ಹಾಡು ರಿಲೀಸ್ ಮಾಡಿದೆ ಚಿತ್ರತಂಡ.

ನವೆಂಬರ್ 12 ರಂದು ಸಾಂಗ್ ರಿಲೀಸ್ ಆಗಿದ್ದು, ಈ ಹಾಡಿಗೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ.  ಈಗಾಗಲೇ ಹಾಡನ್ನು 4 ಮಿಲಿಯನ್  ವೀಕ್ಷಣೆ ಕಂಡಿದೆ. ಸದ್ಯ ಸಿನಿಮಾ ಸೆನ್ಸಾರ್ ಬೋರ್ಡ್ ತಲುಪಿದೆ.  ಕನ್ನಡ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಡಿಸೆಂಬರ್ 3 ರಂದು ಸಿನಿಮಾ ರಿಲೀಸ್ ಆಗಲಿದೆ.

ಉಮಾಪತಿ ಫಿಲ್ಮ್ಸ್ ನಿರ್ಮಾಣ ಮಾಡಿರುವ ಮದಗಜ ಸಿನಿಮಾ1500 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ಮುಂದಾಗಿದೆ. ಮದಗಜ ಸಿನಿಮಾ ಸ್ಯಾಟಲೈಟ್ಮತ್ತು ಡಿಜಿಟಲ್ ಹಕ್ಕುಗಳು ಭಾರೀ ಹಣಕ್ಕೆ ಮಾರಾಟವಾಗಿ ವೆ ಎಂದು ನಿರ್ದೇಶಕ ಮಹೇಶ್ ತಿಳಿಸಿದ್ದಾರೆ.

ಮದಗಜ ಚಿತ್ರದಲ್ಲಿ ಮಫ್ತಿ ನಾಯಕ ಶ್ರೀಮುರುಳಿ ಮತ್ತು ಆಶಿಕಾ ರಂಗನಾಥ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಜಗಪತಿ ಬಾಬು ಅವರು ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ತಮಿಳು ನಟಿ ದೇವಯಾನಿ ಅವರು ಬೆಳ್ಳಿತೆರೆಗೆ ಮರಳುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

SCROLL FOR NEXT