ಸಿನಿಮಾ ಸುದ್ದಿ

ಸೈಬರ್ ಕ್ರೈಂ ಕಥೆ ಆಧಾರಿತ ಸಿನಿಮಾದಲ್ಲಿ ವಿಜಯ ರಾಘವೇಂದ್ರ

Shilpa D

2017ರಲ್ಲಿ ತೆರೆಕಂಡ ಅಯನ ಸಿನಿಮಾಗಾಗಿ ರಾಜ್ಯ ಪ್ರಶಸ್ತಿ  ಪಡೆದ ನಿರ್ದೇಶಕ ಗಂಗಾಧರ್ ಸಾಲಿಮಠ್ ಮತ್ತೊಂದು ಸಿನಿಮಾ ತಯಾರಿಯಲ್ಲಿದ್ದಾರೆ.

ಸೈಬರ್ ಕ್ರೈಂ ಆಧರಿಸಿದ ಗ್ರೇ ಗೇಮ್ಸ್ ಎಂಬ ಸಿನಿಮಾದಲ್ಲಿ ವಿಜಯ ರಾಘವೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆನಂದ್ ಎಚ್.ಮುಗದ್ ದೀಸ್ ಫಿಲ್ಮ್ ಬ್ಯಾನರ್ ನಲ್ಲಿ ಗ್ರೇ ಗೇಮ್ಸ್  ಸಿನಿಮಾ ನಿರ್ಮಾಣವಾಗುತ್ತಿದ್ದು, ನಿರ್ಮಾಪಕರೇ ಕಥೆ ಬರೆದಿದ್ದಾರೆ. 

ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು,  ಗೇಮಿಂಗ್ ಬಗ್ಗೆ ಕಥೆ ಹೊಂದಿದೆ. ನಾಯಕನಾಗಿ ನಟಿಸಿರುವ ವಿಜಯ್ ರಾಘವೇಂದ್ರ ಹಾರ್ವರ್ಡ್ ರಿಟರ್ನ್-ಸೈಕಾಲಜಿಸ್ಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಮುಹೂರ್ತದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯ ರಾಘವೇಂದ್ರ, ‘ಇದರಲ್ಲಿ ಸೈಕಾಲಜಿಸ್ಟ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸೈಬರ್‌ ಜಗತ್ತು ನಮ್ಮನ್ನಾಳುವ ಈ ಕಾಲವಿದು. ಯುವಕರು ಅದಕ್ಕೆ ಬಲಿಬಿದ್ದಾಗ ಅವರು ಮಾತ್ರವಲ್ಲ, ಪೋಷಕರು, ಇಡೀ ಕುಟುಂಬ, ಸಮಾಜ ಅದರ ಪರಿಣಾಮ ಎದುರಿಸುತ್ತದೆ. ಅದನ್ನು ಈ ಸಿನಿಮಾದಲ್ಲಿ ಹೇಳಿದ್ದೇವೆ. ಸೈಬರ್‌ ಗೇಮ್‌ ಜಾಲಕ್ಕೆ ಸಿಲುಕುವ 20ರ ಹರೆಯದ ಹುಡುಗನ ಪಾತ್ರದಲ್ಲಿ ನನ್ನ ಅಕ್ಕನ ಮಗ ಜೈ ನಟಿಸಿದ್ದಾನೆ’ ಎಂದರು.

ಟೈಗರ್ ಗಲ್ಲಿ ಸಿನಿಮಾದಲ್ಲಿ ನಟಿಸಿದ್ದ ಭಾವನಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದಲ್ಲದೇ, ಬಿಗ್ ಬಾಸ್ ಸ್ಪರ್ಧಿ ಮತ್ತು ನಟ ಶ್ರುತಿ ಪ್ರಕಾಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಚಿತ್ರದ ಸಂಗೀತವನ್ನು ಶ್ರೀಯಾಂಶ್ ಶ್ರೀರಾಮ್ ಮತ್ತು ವರುಣ್ ಡಿಕೆ ಛಾಯಾಗ್ರಹಣವನ್ನು ನಿರ್ವಹಿಸಲಿದ್ದಾರೆ.

SCROLL FOR NEXT