ಸಿನಿಮಾ ಸುದ್ದಿ

ಬ್ರಾಹ್ಮಣ್ಯವನ್ನು ಉಳಿಸಿಕೊಳ್ಳುವುದರಿಂದ ಕಾಂಗ್ರೆಸ್ ಮತ್ತು ಆರ್ ಎಸ್ ಎಸ್ ಎರಡಕ್ಕೂ ಲಾಭ: ನಟ ಚೇತನ್

Shilpa D

ಬೆಂಗಳೂರು: ಸಮಾಜದಲ್ಲಿ ಸಮಾನತೆಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡನ್ನು ಸೋಲಿಸಬೇಕು ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಮತ್ತು ಬಿಜೆಪಿ, ಎರಡನ್ನೂ ಮಣಿಸಬೇಕು - ಹೇಗೆ? ಅಧಿಕಾರಕ್ಕೋಸ್ಕರ ಕಾಂಗ್ರೆಸ್ ಪಕ್ಷವು ಏನನ್ನು ಬೇಕಾದರೂ ಮಾಡುತ್ತದೆ. ಬಿಜೆಪಿ ಪಕ್ಷವು ದ್ವೇಷದ ಸಿದ್ದಾಂತವನ್ನು ಹೊಂದಿದೆ. ನಾವು ಮೊದಲು ಬಿಜೆಪಿಯನ್ನು ತೊಡೆದು ಹಾಕಿದರೆ, ಕಾಂಗ್ರೆಸ್ ಅದರಿಂದ ಲಾಭ ಪಡೆದು ಇನ್ನಷ್ಟು ಬಲಗೊಳ್ಳುತ್ತದೆ. ಆದರೆ ಮೊದಲು ಕಾಂಗ್ರೆಸ್ಸನ್ನು ತೊಡೆದು ಹಾಕಿದರೆ, ಬಿಜೆಪಿಯ ಸಿದ್ದಾಂತವನ್ನು ನಮ್ಮ ಸಮಾನತೆಯ ಸಿದ್ಧಾಂತದಿಂದ ಧ್ವಂಸ ಮಾಡಬಹುದು ಎಂದು ಅಭಿಪ್ರಾಯ
ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಸದಸ್ಯರಾದ ಕೆಬಿ ಹೆಡ್ಗೆವಾರ್ ಅವರು 1925 ರಲ್ಲಿ ಆರ್.ಎಸ್.ಎಸ್ಸನ್ನು ಸ್ಥಾಪಿಸಿದರು. ಕಾಂಗ್ರೆಸ್ ನ ಮತ್ತೊಬ್ಬ ಸದಸ್ಯರಾದ ಬಾಲ ಗಂಗಾಧರ ತಿಲಕ್ ಅವರು ಹೆಡ್ಗೆವಾರ್ ಅವರನ್ನು ಪ್ರಭಾವಿಸಿದ್ದರು. 

ಕಾಂಗ್ರೆಸ್ ಮತ್ತು ಆರ್ ಎಸ್ ಎಸ್ ( ಸಂಘ ಪರಿವಾರ ) ಯಾವತ್ತಿನಿಂದಲೂ ಒಂದಕ್ಕೊಂದು ಬೆಸೆದುಕೊಂಡೇ ಇದೆ. ಬ್ರಾಹ್ಮಣ್ಯವನ್ನು ಉಳಿಸಿಕೊಳ್ಳುವುದರಿಂದ ಕಾಂಗ್ರೆಸ್ ಮತ್ತು ಆರ್ ಎಸ್ ಎಸ್, ಎರಡಕ್ಕೂ ಲಾಭವಾಗುತ್ತದೆ. ಸಮಾನತೆಗಾಗಿ ಕಾಂಗ್ರೆಸ್ ಮತ್ತು ಸಂಘ ಎರಡನ್ನೂ ಸೋಲಿಸಬೇಕು.

SCROLL FOR NEXT