ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ 
ಸಿನಿಮಾ ಸುದ್ದಿ

ಪುನೀತ್ ರಾಜ್ ಕುಮಾರ್- ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ನಲ್ಲಿ ಮತ್ತೊಂದು ಆ್ಯಕ್ಷನ್ ಸಿನಿಮಾ

ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯೊಂದೇ ತನ್ನ ಬ್ಯಾನರ್​​ನಲ್ಲಿ ಬಿಗ್​ ಬಜೆಟ್​ನ ಹಲವು ಚಿತ್ರಗಳನ್ನು ಘೋಷಿಸಿದೆ. ಚಂದನವನದ ಹಿಟ್ ಕಾಂಬಿನೇಷನ್​ನಲ್ಲಿ ಒಂದಾದ ಸಂತೋಷ್ ಆನಂದರಾಮ್ ಮತ್ತು ಪುನೀತ್ ರಾಜಕುಮಾರ್ ಜೋಡಿ ಮತ್ತೆ ಒಂದಾಗುವುದು ಪಕ್ಕಾ ಆಗಿದೆ.

ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯೊಂದೇ ತನ್ನ ಬ್ಯಾನರ್​​ನಲ್ಲಿ ಬಿಗ್​ ಬಜೆಟ್​ನ ಹಲವು ಚಿತ್ರಗಳನ್ನು ಘೋಷಿಸಿದೆ. ಚಂದನವನದ ಹಿಟ್ ಕಾಂಬಿನೇಷನ್​ನಲ್ಲಿ ಒಂದಾದ ಸಂತೋಷ್ ಆನಂದರಾಮ್ ಮತ್ತು ಪುನೀತ್ ರಾಜಕುಮಾರ್ ಜೋಡಿ ಮತ್ತೆ ಒಂದಾಗುವುದು ಪಕ್ಕಾ ಆಗಿದೆ. ಈ ಕುರಿತು ಸಂತೋಷ್, ಮಾಹಿತಿ ನೀಡಿದ್ದಾರೆ.

ಟ್ವೀಟ್ ಮುಖಾಂತರ ಮಾಹಿತಿ ನೀಡಿರುವ ನಿರ್ದೇಶಕ ಸಂತೋಷ್ ಆನಂದರಾಮ್, ಹೊಂಬಾಳೆ ಫಿಲ್ಮ್ಸ್, ಪುನೀತ್ ರಾಜಕುಮಾರ್ ಹಾಗೂ ಅವರ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರದ ಅಪ್ಡೇಟ್ ನೀಡಿದ್ದಾರೆ. ‘ಹೊಂಬಾಳೆ ಫಿಲ್ಮ್ಸ್, ಪುನೀತ್ ಹಾಗೂ ನನ್ನ ಕಾಂಬಿನೇಷನ್​ನ ಹೊಸ ಚಿತ್ರದ ಬಗ್ಗೆ ಎಲ್ಲರೂ ಕೇಳುತ್ತಿದ್ದಿರಿ.

ಅವರಿಗೆಲ್ಲರಿಗೂ ಈ ಮಾಹಿತಿ. ನಮ್ಮ ಕಾಂಬಿನೇಷನ್​ನಲ್ಲಿ ಹೊಸ ಚಿತ್ರ ಮುಂದಿನ ವರ್ಷ ಸೆಟ್ಟೇರಲಿದೆ. ನಿಮ್ಮೆಲ್ಲರ ಅಭಿಮಾನ, ಹಾರೈಕೆಗೆ ಧನ್ಯವಾದಗಳು’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಪುನೀತ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿಯನ್ನು ನೀಡಿದ್ದು, ಹೊಸ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಈ ಸಂಬಂಧ ಮಾಹಿತಿ ಹಂಚಿಕೊಂಡಿರುವ ಸಂತೋಷ್ ಆನಂದರಾಮ್,  ಮುಂದಿನ ಸಿನಿಮಾಗಾಗಿ ನಾವು ಉತ್ತಮವಾಗಿ ಪ್ಲಾನ್ ಮಾಡಿಕೊಂಡಿದ್ದೇವೆ, ಇದೊಂದು ಆ್ಯಕ್ಷನ್ ಸಿನಿಮಾವಾಗಿದೆ,  ತಮ್ಮ ಹಿಂದಿನ ಎರಡು ಸಿನಿಮಾಗಳಿಗಿಂತ ಈ ಸಿನಿಮಾ ಭಿನ್ನವಾಗಿದೆ. ಪುನೀತ್ ಜೊತೆ ಕೆಲಸ ಮಾಡುವಾಗ ಅವರನ್ನು ಗಮನದಲ್ಲಿರಿಸಿಕೊಂಡು ಕಥೆ ರಚನೆಯಾಗುತ್ತದೆ ಎಂದು ಹೇಳಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ಬ್ಯಾನರ್​ನಲ್ಲಿ ಪುನೀತ್ ರಾಜಕುಮಾರ್ ಕಡೆಯದಾಗಿ ‘ಯುವರತ್ನ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.  ರಾಜಕುಮಾರ’ ಚಿತ್ರದ ನಂತರ ಸಂತೋಷ್ ಆನಂದರಾಮ್ ಹಾಗೂ ಪುನೀತ್ ಜೋಡಿ ಈ ಚಿತ್ರಕ್ಕೆ ಒಂದಾಗಿತ್ತು. ಆದರೆ ಚಿತ್ರವು ಬೃಹತ್ ತಾರಾಗಣ, ಬಿಗ್ ಬಜೆಟ್​ನ ಹೊರತಾಗಿಯೂ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು. ಇದು ಪುನೀತ್ ರಾಜ್
ಕುಮಾರ್, ಸಂತೋಷ್ ಆನಂದ್ರಾಮ್ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ಹ್ಯಾಟ್ರಿಕ್ ಸಿನಿಮಾವಾಗಿದೆ.

ನಾವು ಇತರರೊಂದಿಗೆ ಸಿನಿಮಾ ಮಾಡಲು ಬಯಸುವುದಿಲ್ಲವೆಂದಲ್ಲ. ನಮ್ಮ ನಡುವೆ ಅದ್ಭುತವಾದ ಕಂಫರ್ಟ್ ಲೆವೆಲ್ ಇದೆ. ಸಮಯ, ಕಥೆ ಮತ್ತು ಲಭ್ಯತೆ ಕೂಡ ಮುಖ್ಯವಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ, ವಿಷಯವು ನಮ್ಮ ಕಾಂಬೀನೇಷನ್ ನನ್ನು  ಸಮರ್ಥಿಸಬೇಕು, ಎಂದು ಮೂವರು ಮತ್ತೆ ಸೇರುವ ಬಗ್ಗೆ ಸಂತೋಷ್ ಹೇಳಿದ್ದಾರೆ. 2022 ರಲ್ಲಿ ಸಿನಿಮಾ ಆರಂಭವಾಗಲಿದೆ ಎಂದು ಸಂತೋಷ್ ಆನಂದ ರಾಮ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ