ನಯನತಾರಾ-ವಿಷ್ನೇಶ್ ಶಿವನ್ ಮದುವೆಯ ಚಿತ್ರ 
ಸಿನಿಮಾ ಸುದ್ದಿ

ನೆಟ್‌ಫ್ಲಿಕ್ಸ್‌ನಲ್ಲಿ ನಯನತಾರಾ-ವಿಘ್ನೇಶ್ ಶಿವನ್ ಮದುವೆ ಸಾಕ್ಷ್ಯಚಿತ್ರದ ತುಣುಕು ಬಿಡುಗಡೆ

ತಮ್ಮ ಮುಂಬರುವ ಸಾಕ್ಷ್ಯಚಿತ್ರ 'ನಯನತಾರಾ: ಬಿಯಾಂಡ್ ದಿ ಫೇರ್‌ಟೇಲ್‌'ನ ಒಂದು ತುಣುಕನ್ನು ನೆಟ್‌ಫ್ಲಿಕ್ಸ್ ಮಂಗಳವಾರ ಬಿಡುಗಡೆ ಮಾಡಿದೆ. ಇದು ಜೂನ್‌ನಲ್ಲಿ ನಡೆದ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರ ವಿವಾಹವನ್ನು ಕೇಂದ್ರೀಕರಿಸಿರುವ ಸಾಕ್ಷ್ಯಚಿತ್ರವಾಗಿದೆ.

ತಮ್ಮ ಮುಂಬರುವ ಸಾಕ್ಷ್ಯಚಿತ್ರ 'ನಯನತಾರಾ: ಬಿಯಾಂಡ್ ದಿ ಫೇರ್‌ಟೇಲ್‌'ನ ಒಂದು ತುಣುಕನ್ನು ನೆಟ್‌ಫ್ಲಿಕ್ಸ್ ಮಂಗಳವಾರ ಬಿಡುಗಡೆ ಮಾಡಿದೆ. ಇದು ಜೂನ್‌ನಲ್ಲಿ ನಡೆದ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರ ವಿವಾಹವನ್ನು ಕೇಂದ್ರೀಕರಿಸಿರುವ ಸಾಕ್ಷ್ಯಚಿತ್ರವಾಗಿದೆ.

ಈ ಸಾಕ್ಷ್ಯಚಿತ್ರವು ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರ ಅದ್ಧೂರಿ ವಿವಾಹದಲ್ಲಿ ಕೊನೆಗೊಂಡ ಪ್ರೇಮಕಥೆಯನ್ನು ವಿವರಿಸುತ್ತದೆ. ಇದನ್ನು ಗೌತಮ್ ವಾಸುದೇವ್ ಮೆನನ್ ನಿರ್ದೇಶಿಸಿದ್ದಾರೆ.

'ನಾನು ಕೆಲಸ ಮಾಡುವುದನ್ನು ಮಾತ್ರ ನಂಬುತ್ತೇನೆ. ನಿಮ್ಮ ಸುತ್ತಲೂ ತುಂಬಾ ಪ್ರೀತಿ ಇದೆ ಎನ್ನುವುದನ್ನು ತಿಳಿದುಕೊಳ್ಳಲು ಖಂಡಿತವಾಗಿಯೂ ಸಂತೋಷವಾಗುತ್ತದೆ' ಎಂದು ವಿಡಿಯೊ ಬೈಟ್ ಸೆಷನ್‌ನಲ್ಲಿ ನಯನತಾರಾ ಹೇಳುತ್ತಿರುವುದನ್ನು ನೆಟ್‌ಫ್ಲಿಕ್ಸ್ ಬಿಡುಗಡೆ ಮಾಡಿರುವ ಗ್ಲಿಂಪ್ಸ್‌ನಲ್ಲಿ ತೋರಿಸಲಾಗಿದೆ.

'ಓರ್ವ ಮಹಿಳೆಯಾಗಿ, ಅವರ ಸ್ವಭಾವ ಮತ್ತು ಚಾರಿತ್ರ್ಯವು ತುಂಬಾ ಸ್ಪೂರ್ತಿದಾಯಕವಾಗಿದೆ ಮತ್ತು ಅವರು ಒಳಗಿನಿಂದಲೂ ತುಂಬಾ ಸುಂದರವಾಗಿದ್ದಾರೆ' ಎಂದು ವಿಘ್ನೇಶ್ ಶಿವನ್ ಹೇಳುತ್ತಾರೆ.

ಕೆಲವು ವರ್ಷಗಳ ಕಾಲ ಸಾರ್ವಜನಿಕವಾಗಿ ಡೇಟಿಂಗ್ ಮಾಡಿದ ನಂತರ, ನಯನತಾರಾ ಮತ್ತು ವಿಘ್ನೇಶ್ ಶಿವನ್ ಜೂನ್ 9 ರಂದು ಮಹಾಬಲಿಪುರಂನ ಐಷಾರಾಮಿ ರೆಸಾರ್ಟ್‌ನಲ್ಲಿ ವಿವಾಹವಾಗಿದ್ದರು. ಮದುವೆಗೆ ನಟ ಸೂರ್ಯ, ಜ್ಯೋತಿಕಾ, ರಜನಿಕಾಂತ್ ಮತ್ತು ಶಾರುಕ್ ಖಾನ್ ಸೇರಿದಂತೆ ಭಾರತೀಯ ಚಿತ್ರರಂಗದ ಟಾಪ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

SCROLL FOR NEXT