ಪುನೀತ್ ಮತ್ತು ಫಹಾದ್ 
ಸಿನಿಮಾ ಸುದ್ದಿ

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಸಿನಿಮಾದಲ್ಲಿ ಫಹಾದ್ ಫಾಸಿಲ್: ಪವನ್ ಕುಮಾರ್ ಆ್ಯಕ್ಷನ್ ಕಟ್! ಪುನೀತ್ ಪಾತ್ರಕ್ಕೆ ಫಹಾದ್?

ವಿಜಯ್ ಕಿರಂಗದೂರು ಒಡೆತನದ ಹೊಂಬಾಳೆ ಪಿಲ್ಮ್ಸ್ ಸದ್ಯ ಪ್ರಭಾಸ್ ಜೊತೆ ಸಲಾರ್, ಪೃಥ್ವಿರಾಜ್ ಜೊತೆ ಟೈಸನ್, ಮತ್ತು ಸುಧಾ ಕೊಂಗರ ಜೊತೆ ಇನ್ನೂ ಹೆಸರಿಡದ  ಭಾರೀ ಬಜೆಟ್ ಸಿನಿಮಾ ನಿರ್ಮಾಣ ಮಾಡುತ್ತಿದೆ

ಕೆಜಿಎಫ್ ಯಶಸ್ಸಿನ ನಂತರ, ಹೊಂಬಾಳೆ ಫಿಲ್ಮ್ಸ್ ಭಾರತೀಯ ಚಿತ್ರರಂಗದಾದ್ಯಂತ ವಿಸ್ತರಿಸುತ್ತಿದೆ. ವಿಜಯ್ ಕಿರಂಗದೂರು ಒಡೆತನದ ಹೊಂಬಾಳೆ ಪಿಲ್ಮ್ಸ್ ಸದ್ಯ ಪ್ರಭಾಸ್ ಜೊತೆ ಸಲಾರ್, ಪೃಥ್ವಿರಾಜ್ ಜೊತೆ ಟೈಸನ್, ಮತ್ತು ಸುಧಾ ಕೊಂಗರ ಜೊತೆ ಇನ್ನೂ ಹೆಸರಿಡದ  ಭಾರೀ ಬಜೆಟ್ ಸಿನಿಮಾ ನಿರ್ಮಾಣ ಮಾಡುತ್ತಿದೆ.

ಮಲಯಾಳಂ ನಟ ಫಹಾದ್ ಫಾಸಿಲ್ ಜತೆ ವಿಜಯ್ ಕಿರಂಗದೂರು ಅವರು ಸಿನಿಮಾ ಮಾಡುತ್ತಿದ್ದಾರೆ. ನಟನ ಬರ್ತ್​ಡೇ ದಿನವೇ ಈ ಬಗ್ಗೆ ಘೋಷಣೆ ಆಗಿದೆ. ಆದರೆ, ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ಹೊಂಬಾಳೆ ಫಿಲ್ಮ್ಸ್ ಹಾದ್ ಫಾಸಿಲ್ ಅವರ ಜನ್ಮ ದಿನಕ್ಕೆ ಟ್ವಿಟ್ಟರ್ ನಲ್ಲಿ ಶುಭಾಶಯ ಕೋರಿದೆ.

ಫಹಾದ್ ಫಾಸಿಲ್ ಅವರು ಮಲಯಾಳಂನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ತಮಿಳು ಮೊದಲಾದ ಭಾಷೆಗಳಲ್ಲಿ ನಟಿಸಿ ಅವರು ಭೇಷ್ ಎನಿಸಿಕೊಂಡಿದ್ದಾರೆ. ಈಗ ಅವರು ಇದೇ ಮೊದಲ ಬಾರಿಗೆ ಕನ್ನಡಕ್ಕೆ ಕಾಲಿಡುತ್ತಿದ್ದಾರೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್​ ಕಡೆಯಿಂದ ಅಧಿಕೃತ ಘೋಷಣೆ ಆಗಿದೆ. ಯಾವ ಚಿತ್ರ, ಅವರ ಪಾತ್ರ ಏನು ಎಂಬುದು ಇನ್ನಷ್ಟೇ ಅಧಿಕೃತವಾಗಬೇಕಿದೆ. ಹೀಗಿರುವಾಗಲೇ ಸೋಶಿಯಲ್ ಮೀಡಿಯಾದಲ್ಲಿ ಬಣ್ಣ ಬಣ್ಣದ ಚರ್ಚೆಗಳು ಆಗುತ್ತಿವೆ.

ಮೂಲಗಳ ಪ್ರಕಾರ ‘ಲೂಸಿಯಾ’ ಪವನ್ ಕುಮಾರ್ ಅವರು ಫಹಾದ್ ಫಾಸಿಲ್ ಅವರ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಪವನ್ ಕುಮಾರ್ ನಿರ್ದೇಶನದ ಚಿತ್ರಗಳು ಎಂದರೆ ಒಂದಷ್ಟು ಹೊಸ ವಿಚಾರಗಳು, ಸಿನಿಮಾದಲ್ಲಿ ಹೊಸತನ ಇದ್ದೇ ಇರುತ್ತದೆ. ‘ಲೂಸಿಯಾ’, ‘ಯು-ಟರ್ನ್​’ ಚಿತ್ರಗಳೇ ಇದಕ್ಕೆ ಸಾಕ್ಷಿ. ಈಗ ಅವರು ಆ್ಯಕ್ಟನ್ ಕಟ್ ಹೇಳುತ್ತಿರುವ ಹೊಸ ಸಿನಿಮಾದಲ್ಲಿ ಫಹಾದ್ ನಟಿಸುತ್ತಿದ್ದಾರೆ ಎಂಬ ವದಂತಿ ಸಾಕಷ್ಟು ಕುತೂಹಲ ಸೃಷ್ಟಿ ಮಾಡಿದೆ.

ಲೂಸಿಯಾ ಪವನ್ ಕುಮಾರ್ ಪುನೀತ್ ರಾಜಕುಮಾರ್ ನಟನೆಯ ದ್ವಿತ್ವ ಸಿನಿಮಾ ನಿರ್ದೇಶನ ಮಾಡಬೇಕಿತ್ತು, ಪುನೀತ್ ಗೆ ತ್ರಿಶಾ ನಾಯಕಿಯಾಗಬೇಕಿತ್ತು, ಆದರೆ ಪುನೀತ್ ಅಕಾಲಿಕ ಮರಣದಿಂದಾಗಿ ಅಪ್ಪು ನಿರ್ವಹಿಸಬೇಕಿದ್ದ ಪಾತ್ರವನ್ನು ಫಹಾದ್ ಪಾಸಿಲ್ ನಿರ್ವಹಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ದ್ವಿತ್ವ ಸಿನಿಮಾದ ಕನ್ನಡ ಆವೃತ್ತಿಗೆ ಪುನೀತ್ , ಮಲಯಾಳಂ ಮತ್ತು ತಮಿಳು ಆವೃತ್ತಿಗಳಲ್ಲಿ ಫಹಾದ್ ನಟಿಸಲಿದ್ದರು ಎಂಬುದಾಗಿ ತಿಳಿದು ಬಂದಿತ್ತು. ಈ ಬೆಳವಣಿಗೆಯ ಬಗ್ಗೆ ಪುನೀತ್ ಕೂಡ ಉತ್ಸಾಹ ವ್ಯಕ್ತಪಡಿಸಿದರು.  ಆದರೆ ಈಗ, ಫಹಾದ್ ಎಲ್ಲಾ ಆವೃತ್ತಿಗಳಿಗೆ ನಾಯಕರಾಗಲಿದ್ದಾರೆ.

ಹೊಂಬಾಳೆ ಫಿಲ್ಮ್ಸ್, ಫಹದ್ ಫಾಸಿಲ್ ಮತ್ತು ಪವನ್ ನಡುವಿನ ಸಹಯೋಗದ ಬಗ್ಗೆ ಅಧಿಕೃತ ದೃಢೀಕರಣವು ಶೀಘ್ರದಲ್ಲೇ ಹೊರಬರುವ ನಿರೀಕ್ಷೆಯಿದೆ. ಆದರೆ ನಿಜವಾಗಿಯೂ ದ್ವಿತ್ವ ಸಿನಿಮಾ ಕಥೆಯೋ ಅಥವಾ ಹೊಸ ಯೋಜನೆಯೋ ಎಂಬ ಬಗ್ಗೆ ಇನ್ನೂ ಖಚಿತ ಮಾಹಿತಿಯಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

SCROLL FOR NEXT