ಸಿನಿಮಾ ಸುದ್ದಿ

'ಕ್ರಾಂತಿ' ಅಭಿಮಾನಿಗಳಿಂದ ಸಿಗುತ್ತಿರುವ ಬೆಂಬಲ ವಿವರಿಸಲು ಪದಗಳೇ ಸಿಗುತ್ತಿಲ್ಲ: ಚಾಲೆಂಜಿಂಗ್ ಸ್ಟಾರ್ ದರ್ಶನ್

Nagaraja AB

ವಿ. ಹರಿಕೃಷ್ಣ ನಿರ್ದೇಶನದ, ಶೈಲಜಾ ನಾಗ್ ಹಾಗೂ ಬಿ. ಸುರೇಶ್ ನಿರ್ಮಾಣದ ದರ್ಶನ್ ಅವರ ಮುಂದಿನ 'ಕ್ರಾಂತಿ' ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭವಾಗಿದೆ. ಕ್ರಾಂತಿ ಚಿತ್ರದ ಪ್ರಚಾರವನ್ನು ದರ್ಶನ್ ಅಭಿಮಾನಿಗಳೇ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಿದ್ದಾರೆ.  

ಶೂಟಿಂಗ್‌ ಮುಗಿಸಿರುವ ತಂಡ, ಇನ್ನೇನು ಶೀಘ್ರದಲ್ಲಿ ಬಿಡುಗಡೆಯ ಸಿಹಿ ಸುದ್ದಿಯನ್ನು ಅಭಿಮಾನಿಗಳಿಗೆ ನೀಡಲಿದ್ದು, ಈಗಾಗಲೇ ಸಂಭ್ರಮಾಚರಣೆ ಶುರುವಾಗಿದೆ.  ಕಳೆದೊಂದು ತಿಂಗಳಿನಿಂದ ಕ್ರಾಂತಿ ಬಗ್ಗೆ ಕೇಳದ ಒಂದು ದಿನವೂ ಇಲ್ಲ. ಅಭಿಮಾನಿಗಳು ಚಿತ್ರದ ಬಗ್ಗೆ ಬೈಕ್ ರ‍್ಯಾಲಿ,  ರೋಡ್‌ಶೋ, ಪ್ರಾರ್ಥನೆ, ಸಂಭ್ರಮಾಚರಣೆಗಳನ್ನು ನಡೆಸುತ್ತಿದ್ದು, ಒಂದು ರೀತಿಯ ಕ್ರಾಂತಿ ಸೃಷ್ಟಿಸಿದೆ.

ಕ್ರಾಂತಿ ಸಿನಿಮಾಕ್ಕೆ ಅಭಿಮಾನಿಗಳಿಂದ ನನಗೆ ಸಿಗುತ್ತಿರುವ ಬೆಂಬಲ ವಿವರಿಸಲು ಪದಗಳೇ ಸಿಗುತ್ತಿಲ್ಲ. ನನ್ನ ಕೃತಜ್ಞತೆ ವ್ಯಕ್ತಪಡಿಸಲು ಧನ್ಯವಾದ ಹೇಳುವುದು ಸಣ್ಣ ಪದ.  ಇದು ಹೇಗೆ ಪ್ರಾರಂಭವಾಯಿತು, ಅವರು ಚಿತ್ರಕ್ಕೆ ಹೇಗೆ ಹತ್ತಿರವಾದರು ಮತ್ತು ಪ್ರಚಾರಕ್ಕೆ ಹೊರಟಿದ್ದಾರೆ ಎಂಬುದು ಖಚಿತವಲ್ಲ, ಅವರು ನನಗಾಗಿ ಸಮಯ ತೆಗೆದುಕೊಳ್ಳವುದು ಹರ್ಷದ ಸಂಗತಿ.  ಈ ಸೂಚನೆ  ಯಾವಾಗಲೂ ನನಗೆ ಆಶ್ಚರ್ಯವನ್ನುಂಟುಮಾಡುತ್ತದೆ. ನಾನು ಏನು ಮಾಡುತ್ತೇನೊ ಅದಕ್ಕಿಂತಲೂ ಹೆಚ್ಚಿನದಾಗಿ ನನಗಾಗಿ ಅವರು ಮಾಡ್ತಿದ್ದಾರೆ. ದೊಡ್ಡ ಪರದೆಗಾಗಿ ನಾನು ಒಬ್ಬ ನಟ. ಆದರೆ, ಅವರ ಮುಂದೆ ನಾನು ನಟಿಸಲ್ಲ. ಒಳ್ಳೆಯವರಾಗಿರಿ, ನಿಮ್ಮಂತೆಯೇ ಇರಿ ಎಂದು ದರ್ಶನ್ ಹೇಳಿದ್ದಾರೆ. 

ನಾನು ಮಾಸ್ ಪ್ರೇಕ್ಷಕರನ್ನು ರಂಜಿಸಲು ಪ್ರಯತ್ನಿಸುತ್ತೇನೆ ಮತ್ತು ಅದೇ ರೀತಿ ಸಾಮಾಜಿಕ ಸಂದೇಶವನ್ನು ಹೊಂದಿರುವ ಚಲನಚಿತ್ರಗಳನ್ನು ಮಾಡುವ ಉದ್ದೇಶ ಹೊಂದಿದ್ದೇನೆ. ಇಂದಿನ ಸರ್ಕಾರಿ ಶಾಲೆಗಳ ದುಃಸ್ಥಿತಿ ಬಗ್ಗೆ ಚಿತ್ರ ಬೆಳಕು ಚೆಲ್ಲಲಿದೆ.  ಹೆಚ್ಚುತ್ತಿರುವ ಶಿಕ್ಷಣದ ಬೆಲೆ ಮತ್ತು ಖಾಸಗಿ ಸಂಸ್ಥೆಗಳು ಪಡೆಯುವಷ್ಟು ಫಲಿತಾಂಶವನ್ನು ಸರ್ಕಾರಿ ಶಾಲೆಗಳು ಏಕೆ ಪಡೆಯುತ್ತಿಲ್ಲ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗುತ್ತಿದೆ ಎಂದು  ದರ್ಶನ್ ತಿಳಿಸಿದ್ದಾರೆ. 

'ಒಂಟಿಯಾಗಿ ಹೋರಾಡಲು ಕಲಿಯಿರಿ’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಬರುತ್ತಿರುವ ಪ್ಯಾನ್-ಇಂಡಿಯಾ ಚಲನಚಿತ್ರವನ್ನು ಬಹು ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತದೆ. ಕ್ರಾಂತಿ ಚಿತ್ರದ ಡಬ್ಬಿಂಗ್ ಮುಗಿಸಿರುವ ದರ್ಶನ್, ಚಿತ್ರ ಪ್ರೇಕ್ಷಕರ ನಿರೀಕ್ಷೆಯನ್ನು ಪೂರೈಸುತ್ತದೆ ಎಂದು ಹೇಳುತ್ತಾರೆ. “ಯಜಮಾನ ನಂತರ ಮೀಡಿಯಾ ಹೌಸ್ ಸ್ಟುಡಿಯೋಸ್ ಮತ್ತು ವಿ ಹರಿಕೃಷ್ಣ ಜೊತೆಗಿನ ಎರಡನೇ ಸಿನಿಮಾವಾಗಿರುವ ಕ್ರಾಂತಿ ಬಿಡುಗಡೆ ಕುರಿತು ಮುಂದಿನ ಮೂರು ವಾರಗಳಲ್ಲಿ  ಅಧಿಕೃತವಾಗಿ ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ. 

ಈ ಮಧ್ಯೆ  ದರ್ಶನ್ ತಮ್ಮ ಮುಂದಿನ ಪ್ರಾಜೆಕ್ಟ್‌ನ ಚಿತ್ರೀಕರಣವನ್ನು ಮಂಗಳವಾರ ಪ್ರಾರಂಭಿಸಲು ಸಜ್ಜಾಗಿದ್ದಾರೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಇನ್ನೂ ಹೆಸರಿಡದ ಚಿತ್ರವನ್ನು ರಾಬರ್ಟ್ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ನಿರ್ದೇಶಿಸುತ್ತಿದ್ದಾರೆ.  75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದರ್ಶನ್ ಅವರು, ಕ್ರಾಂತಿಯಿಲ್ಲದೆ ನಮ್ಮ ಸ್ವಾತಂತ್ರ್ಯ ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ. 

SCROLL FOR NEXT