ಸಿನಿಮಾ ಸುದ್ದಿ

ಯುಟ್ಯೂಬ್ ಇಂಡಿಯಾ: 'ಶ್ರೀವಲ್ಲಿ' ಟಾಪ್ ಮ್ಯೂಸಿಕ್ ವಿಡಿಯೋ; ಶಾರ್ಟ್ಸ್ ಬ್ರೇಕ್ ಟಾಪ್ ಕ್ರಿಯೆಟರ್!

ಯೂಟ್ಯೂಬ್ 2022ರ ದೇಶದ ಅತ್ಯುತ್ತಮ ವಿಡಿಯೋ ಹಾಗೂ ಯೂಟ್ಯೂಬ್ ಚಾನಲ್ ಪಟ್ಟಿಯನ್ನು ಬಹಿರಂಗಪಡಿಸಿದ್ದು ಪುಷ್ಪಾ ಚಿತ್ರದ 'ಶ್ರೀವಲ್ಲಿ' ಟಾಪ್ ಮ್ಯೂಸಿಕ್ ವೀಡಿಯೊ ಆಗಿದ್ದರೆ, ಹಾಸ್ಯ ವಿಡಿಯೋ ತಯಾರಕ 'ಶಾರ್ಟ್ಸ್ ಬ್ರೇಕ್' ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಯೂಟ್ಯೂಬ್ 2022ರ ದೇಶದ ಅತ್ಯುತ್ತಮ ವಿಡಿಯೋ ಹಾಗೂ ಯೂಟ್ಯೂಬ್ ಚಾನಲ್ ಪಟ್ಟಿಯನ್ನು ಬಹಿರಂಗಪಡಿಸಿದ್ದು ಪುಷ್ಪಾ ಚಿತ್ರದ 'ಶ್ರೀವಲ್ಲಿ' ಟಾಪ್ ಮ್ಯೂಸಿಕ್ ವೀಡಿಯೊ ಆಗಿದ್ದರೆ, ಹಾಸ್ಯ ವಿಡಿಯೋ ತಯಾರಕ 'ಶಾರ್ಟ್ಸ್ ಬ್ರೇಕ್' ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

2022ರ ಟಾಪ್ ಟ್ರೆಂಡಿಂಗ್ ವೀಡಿಯೊಗಳು, ಟಾಪ್ ಮ್ಯೂಸಿಕ್ ವೀಡಿಯೊಗಳು, ಟಾಪ್ ಶಾರ್ಟ್ಸ್, ಟಾಪ್ 20 ಬ್ರೇಕ್‌ಔಟ್ ನಿರ್ಮಾಪಕರು, ಟಾಪ್ ಬ್ರೇಕ್‌ಔಟ್ ಮಹಿಳಾ ನಿರ್ಮಾಪಕರು ಮತ್ತು ಟಾಪ್ ನಿರ್ಮಾಪಕರ ಪಟ್ಟಿಯನ್ನು ಯೂಟ್ಯೂಬ್ ಅನಾವರಣಗೊಳಿಸಿದೆ.

"ವಿಡಿಯೋ ಆನ್ ಡಿಮ್ಯಾಂಡ್, ಶಾರ್ಟ್ ಫಾರ್ಮ್ ಕಂಟೆಂಟ್ ಮತ್ತು ಲೈವ್ ಸ್ಟ್ರೀಮ್‌ಗಳ ನಡುವಿನ ಇಂಟರ್‌ಪ್ಲೇ ಯೂಟ್ಯೂಬ್‌ನಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ವಾರ್ಷಿಕ ಪಟ್ಟಿಗಳಲ್ಲಿ ಇದು ಬಹಿರಂಗಗೊಳ್ಳುತ್ತದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ನೀರಿನ ಕೊರತೆಯನ್ನು ವಿಡಂಬನಾತ್ಮಕವಾಗಿ ವಿವರಿಸುವ Round2Hell ನ 'ಏಜ್ ಆಫ್ ವಾಟರ್' ವೀಡಿಯೊ ಮತ್ತು ವ್ಯಾಪಾರ ಹೂಡಿಕೆ ಟಿವಿ ಕಾರ್ಯಕ್ರಮದ ಹಾಸ್ಯಮಯ ರಿಮೇಕ್ ಆದ ಆಶಿಶ್ ಚಂಚಲಾನಿ ಅವರ 'ಚೀಪ್ ಶಾರ್ಕ್ ಟ್ಯಾಂಕ್' ಟಾಪ್ 10 ವೀಡಿಯೊಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಸನ್ ಪಿಕ್ಚರ್ಸ್‌ನ ದಳಪತಿ ವಿಜಯ್ ಅವರ ಬೀಸ್ಟ್‌ನ 'ಅರಬಿ ಕೂತು', ಅಧಿಕೃತ ಲಿರಿಕಲ್ ವೀಡಿಯೊ ಮತ್ತು ಪುಷ್ಪಾ ಚಿತ್ರದ 'ಸಾಮಿ ಸಾಮಿ', 'ಶ್ರೀವಲ್ಲಿ' ನಂತರದ ಪ್ರಮುಖ ಸಂಗೀತ ವೀಡಿಯೊಗಳಾಗಿವೆ.

ಕಿರು-ವಿಡಿಯೊ ಸೃಷ್ಟಿಕರ್ತ ಜಾನ್ವಿ ಪಟೇಲ್ ರ ಮಹಿಳಾ ಬ್ರೇಕ್‌ಔಟ್ ಕ್ರಿಯೆಟಿವ್ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಜೊತೆಗೆ, ಸ್ಕ್ರಿಪ್ಟೆಡ್ ಕಂಟೆಂಟ್ ಕ್ರಿಯೇಟರ್‌ಗಳಾದ ಅಕ್ಷಯ್ ನಗ್ವಾಡಿಯಾ ಮತ್ತು ಗುಲ್ಶನ್ ಕಲ್ರಾ ಅವರು 'ಶಾರ್ಟ್ಸ್ ಬ್ರೇಕ್' ನಂತರ ಟಾಪ್ ಕ್ರಿಯೇಟರ್‌ಗಳಾಗಿ ಪಟ್ಟಿಯಲ್ಲಿದ್ದಾರೆ ಎಂದು ಯೂಟ್ಯೂಬ್ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅನ್ಯ ಉದ್ದೇಶಕ್ಕೆ ಕುಡಿಯುವ ನೀರು ಬಳಕೆ ನಿಷೇಧ; ಬೇಸಿಗೆಯಲ್ಲಿ ತೆಗೆದುಕೊಳ್ಳುವ ಕ್ರಮಗಳನ್ನು ಮಳೆಗಾಲದಲ್ಲೇ ಜಾರಿಗೊಳಿಸಿದ BWSSB!

ಮೆಲ್ಬೋರ್ನ್ ಭೇಟಿಗೂ ಮುನ್ನ ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ; ಆಸ್ಟ್ರೇಲಿಯಾದಿಂದ ತನಿಖೆ

Cricket: ಸಚಿನ್ ಅಲ್ಲ.. ಸೂರ್ಯವಂಶಿ ಅಲ್ಲವೇ ಅಲ್ಲ.. ಐತಿಹಾಸಿಕ ಪದಾರ್ಪಣೆ ಹೊರತಾಗಿಯೂ ಈ ಆಟಗಾರನ ದಾಖಲೆ ಮುರಿಯುವಲ್ಲಿ ವಿಫಲ!

2nd T20I: Debut ಪಂದ್ಯದಲ್ಲೇ Vaibhav Sooryavanshi ಝಲಕ್, ಇಂಗ್ಲೆಂಡ್ ಗೆ ಗೆಲ್ಲಲು 191 ರನ್ ಸವಾಲಿನ ಗುರಿ ನೀಡಿದ ಭಾರತ!

ವೈಭವ್ ಸೂರ್ಯವಂಶಿ ಎಡವಟ್ಟು: ಪಾದಾರ್ಪಣೆ ಪಂದ್ಯದಲ್ಲಿ 2 ಅದ್ಭುತ ಸಿಕ್ಸರ್ ಬಾರಿಸಿ, ಸ್ಟಂಪ್ ಔಟ್‌ಗೆ ಬಲಿ; video