ದರ್ಶನ್ 
ಸಿನಿಮಾ ಸುದ್ದಿ

'ಕ್ರಾಂತಿ' ಸಿನಿಮಾದ ಚೊಚ್ಚಲ ಸಾಂಗ್ ರಿಲೀಸ್ ಮಾಡಲಿದ್ದಾರೆ ನನ್ನ 'ಸೆಲೆಬ್ರಿಟಿಗಳು': ನಟ ದರ್ಶನ್

ಕ್ರಾಂತಿ ಸಿನಿಮಾದ ಮೊದಲ ಹಾಡು ಡಿಸೆಂಬರ್ 10 ರಂದು ಮೈಸೂರಿನ ವಿಜಯ ಟೆಂಟ್ ಹೌಸ್ ನಲ್ಲಿ ನಡೆಯುವ ಸಮಾರಂಭದಲ್ಲಿ ರಿಲೀಸ್ ಮಾಡಲಾಗುತ್ತಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ. ಹರಿಕೃಷ್ಣ ಕಾಂಬಿನೇಷನ್‌ ಆಲ್ಬಮ್‌ಗಳೆಲ್ಲಾ ಸೂಪರ್ ಹಿಟ್ ಆಗಿದೆ. ಹಾಗಾಗಿ ಸಹಜವಾಗಿಯೇ 'ಕ್ರಾಂತಿ' ಸಾಂಗ್ಸ್ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ ಚಿತ್ರತಂಡ ಸಿನಿಮಾ ಪ್ರಚಾರಕ್ಕೆ ಚಾಲನೆ ನೀಡಿದೆ. ಇದೀಗ ಫಸ್ಟ್ ಲಿರಿಕಲ್ ಸಾಂಗ್ ಮೂಲಕ ಮತ್ತಷ್ಟು ಹೈಪ್ ಕ್ರಿಯೇಟ್ ಮಾಡುವ ಲೆಕ್ಕಾಚಾರದಲ್ಲಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಭಿಮಾನಿಗಳ ಸಮ್ಮುಖದಲ್ಲೇ 'ಕ್ರಾಂತಿ' ಚಿತ್ರದ ಹಾಡುಗಳನ್ನು ರಿಲೀಸ್ ಮಾಡಲು ಚಿತ್ರತಂಡ ತೀರ್ಮಾನಿಸಿದೆ.

ಸಿನಿಮಾ ರಿಲೀಸ್ ಮಾಡಲು ಇನ್ನೂ ಒಂದು ತಿಂಗಳಿಗೂ ಹೆಚ್ಚು ಸಮಯಾವಕಾಶವಿದೆ, ಆದರೂ ಸಿನಿಮಾ ತಂಡ ಎಲ್ಲಾ ರೀತಿಯ ಪ್ರಚಾರ ಕೈಗೊಂಡಿದೆ. ಸಿನಿಮಾ ನಿರ್ಮಾಣ ಸಂಸ್ಥೆ ಮೀಡಿಯಾ ಹೌಸ್ ಸ್ಟುಡಿಯೋ ಕ್ರಾಂತಿ ಸಿನಿಮಾ ಪ್ರಚಾರಕ್ಕಾಗಿ ವಿವಿಧ ಮಾರ್ಗಗಳನ್ನು ಅನುಸರಿಸುತ್ತಿದೆ.

ಕ್ರಾಂತಿ ಸಿನಿಮಾದ ಮೊದಲ ಹಾಡು ಡಿಸೆಂಬರ್ 10 ರಂದು ಮೈಸೂರಿನ ವಿಜಯ ಟೆಂಟ್ ಹೌಸ್ ನಲ್ಲಿ ನಡೆಯುವ ಸಮಾರಂಭದಲ್ಲಿ ರಿಲೀಸ್ ಮಾಡಲಾಗುತ್ತಿದೆ.

10ನೇ ತಾರೀಖು ನಾವು ಮೈಸೂರಿಗೆ ಬರ್ತೀವಿ. ನಮ್ಮ ಇಡೀ ಚಿತ್ರತಂಡ ಜೊತೆಗೆ ಇರುತ್ತದೆ. ಆದರೆ ಒಂದು ವಿಶೇಷ ಏನಂದರೆ ನಾನು ಅಂದು ನಾಯಕ ನಟನಾಗಿ ನಿಮ್ಮ ಮುಂದೆ ಬರುವುದಿಲ್ಲ. ಒಬ್ಬ ನಿರೂಪಕನಾಗಿ ಬರ್ತೀನಿ. ನೀವು ಬನ್ನಿ ನಿಮ್ಮ 'ಕ್ರಾಂತಿ' ಚಿತ್ರದ ಮೊದಲ ಹಾಡನ್ನು ನೀವೇ ಬಿಡುಗಡೆ ಮಾಡಿ" ಎಂದು ದರ್ಶನ್ ಮನವಿ ಮಾಡಿದ್ದಾರೆ.

ದರ್ಶನ್

ಇನ್ನು ಸಾಂಗ್ ಪ್ರೋಮೊ ಜೊತೆಗೆ ದರ್ಶನ್ ತಮ್ಮ ಸೆಲೆಬ್ರೆಟಿಗಳಲ್ಲಿ ವಿಶೇಷ ಮನವಿ ಮಾಡಿದ್ದಾರೆ. ಸಾಂಗ್ ರಿಲೀಸ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ. "ಕರ್ನಾಟಕದ ಎಲ್ಲಾ ಚಿತ್ರಪ್ರೇಮಿಗಳಿಗೆ ಹಾಗೂ ನನ್ನ ಸೆಲೆಬ್ರೆಟಿಗಳಿಗೆ ಸಿಹಿಸುದ್ದಿ. ನಿಮ್ಮ 'ಕ್ರಾಂತಿ', ನಮ್ಮದಲ್ಲ 'ನಿಮ್ಮ ಕ್ರಾಂತಿ' ಚಿತ್ರದ ಮೊದಲ ಹಾಡನ್ನು ಮೈಸೂರಿನ ಇಣಕಲ್ ರಸ್ತೆಯಲ್ಲಿರುವ ವಿಜಯಾ ಥಿಯೇಟರ್ ಮುಂದೆ ಬಿಡುಗಡೆ ಮಾಡುತ್ತಿದ್ದೇವೆ. ಅದು ಕೂಡ ನಿಮ್ಮ ಸಮ್ಮುಖದಲ್ಲಿ. ನೀವೆಲ್ಲಾ ಅಲ್ಲಿ ಬಂದು ನಿಮ್ಮ ಸಿನಿಮಾ ಬಗ್ಗೆ ನಿಮಗೇನು ಎನ್ನಿಸುತ್ತದೆ ಹೇಳಿ" ಎಂದಿದ್ದಾರೆ.

ದರ್ಶನ್ ಮತ್ತು ಹರಿಕೃಷ್ಣ ಜೋಡಿಯು ಹಲವಾರು ಹಿಟ್ ಆಲ್ಬಂಗಳನ್ನು ನೀಡಿದ್ದು, ಕ್ರಾಂತಿ ಅವರ 27 ನೇ ಚಿತ್ರವಾಗಿದೆ. ಧರಣಿ ಒಂದು ಥೀಮ್ ಸಾಂಗ್ ಎಂದು ಬಿಂಬಿಸಲಾಗಿದ್ದು, ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವನ್ನು ಸುಂದರವಾಗಿ ಬರೆದಿದ್ದಾರೆ.

"ಧರಣಿಯು ಬಹಳಷ್ಟು ಭಾವನೆಗಳನ್ನು ಸೆಳೆಯುತ್ತದೆ, ಮತ್ತು ಇದು ಕನ್ನಡದ ಕೆಲವು ಹಾಡುಗಳಲ್ಲಿ ಒಂದಾಗಿ ಪ್ರತ್ಯೇಕವಾಗಿ ನಿಲ್ಲುತ್ತದೆ. ಕನ್ನಡ ಮಾತನಾಡುವ ಜನರ ಹೃದಯದಲ್ಲಿ ಉಳಿಯುತ್ತದೆ ಎಂದು 8 ಗಾಯಕರನ್ನು ಒಟ್ಟುಗೂಡಿಸಿರುವ  ಸಂಗೀತ ನಿರ್ದೇಶತ ವಿ ಹರಿಕೃಷ್ಣ ಹೇಳಿದ್ದಾರೆ.

ಪಂಚಮ್ ಜೀವ, ಸಂತೋಷ್ ವೆಂಕಿ, ಅನಿರುದ್ಧ ಶಾಸ್ತ್ರಿ, ಮಧ್ವೇಶ್ ಬಾರದ್ವಾಜ್, ವಿಹಾನ್, ಖುಸಾಲ, ಲಕ್ಷ್ಮಿ ವಿಜಯ್, ಮೇಘನಾ ಕುಲಕರ್ಣಿ, ಪೂಜಾ ರಾವ್, ಅರ್ಚನಾ ಮತ್ತು ಪ್ರಾರ್ಥನಾ ದನಿಗೂಡಿಸಿದ್ದಾರೆ.

ಡಿಬೀಟ್ಸ್ ಆಡಿಯೊ ಲೇಬಲ್‌ನಲ್ಲಿ ಹೊರತರಲಿರುವ ಲಿರಿಕ್ ವೀಡಿಯೊದ ಬಗ್ಗೆ ಮಾತನಾಡಿದ ಹರಿಕೃಷ್ಣ, ವೀಡಿಯೊವು ವಿಶೇಷ ಅನುಕ್ರಮಗಳು ಮತ್ತು ಮಾಂಟೇಜ್‌ಗಳಿಂದ ತುಂಬಿದ್ದರೂ, ಈವೆಂಟ್‌ನಲ್ಲಿ ತೋರಿಸಲಾಗುವ ಮೂಲ ಹಾಡಿಗಿಂತ ಇದು ವಿಭಿನ್ನವಾಗಿರುತ್ತದೆ ಎಂದು ಹೇಳಿದರು.

ಶೈಲಜಾ ನಾಗ್ ಮತ್ತು ಬಿ ಸುರೇಶ ನಿರ್ಮಿಸಿರುವ ಕ್ರಾಂತಿ ಚಿತ್ರದಲ್ಲಿ ರಚಿತಾ ರಾಮ್, ಸುಮಲತಾ ಅಂಬರೀಶ್, ರವಿಚಂದ್ರನ್, ಉಮಾಶ್ರೀ, ಸಂಯುಕ್ತ ಹೊರ್ನಾಡ್ ಮತ್ತು ವೈನಿಧಿ ಜಗದೀಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.  ಚಿತ್ರಕ್ಕೆ ಕರುಣಾಕರ್ ಛಾಯಾಗ್ರಹಣವಿದ್ದರೆ, ಶಶಿಧರ್ ಅಡಪ ಕಲಾಕೃತಿಯನ್ನು ನಿಭಾಯಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT