ಯಶ್ ಶೆಟ್ಟಿ 
ಸಿನಿಮಾ ಸುದ್ದಿ

ನಾನೊಬ್ಬ ಕಲಾವಿದ, ನಾಯಕನಲ್ಲ: ನಟ ಪ್ರಕಾಶ್ ರಾಜ್ ನನಗೆ ಪ್ರೇರಣೆ- ಯಶ್ ಶೆಟ್ಟಿ

ಮೂಲತಃ  ಮೃದು ಸ್ವಭಾವದ ವ್ಯಕ್ತಿ, ಯಶ್  ಶೆಟ್ಟಿ ಜ್ವಲಂತಂನಲ್ಲಿ ಅಘೋರ ಪಾತ್ರದ ನಂತರ ಪ್ರಸಿದ್ಧಿಯಾದರು. ಅಂದಿನಿಂದ ಅವರು 30 ಕ್ಕೂ ಹೆಚ್ಚು ಚಿತ್ರಗಳಲ್ಲಿ ಹೆಚ್ಚಾಗಿ ನೆಗೆಟಿವ್ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಮೂಲತಃ  ಮೃದು ಸ್ವಭಾವದ ವ್ಯಕ್ತಿ, ಯಶ್  ಶೆಟ್ಟಿ ಜ್ವಲಂತಂನಲ್ಲಿ ಅಘೋರ ಪಾತ್ರದ ನಂತರ ಪ್ರಸಿದ್ಧಿಯಾದರು. ಅಂದಿನಿಂದ ಅವರು 30 ಕ್ಕೂ ಹೆಚ್ಚು ಚಿತ್ರಗಳಲ್ಲಿ ಹೆಚ್ಚಾಗಿ ನೆಗೆಟಿವ್ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಯಶ್ ಶೆಟ್ಟಿ ತಮ್ಮ ನಿಜ ಜೀವನದ ವ್ಯಕ್ತಿತ್ವಕ್ಕೆ ವ್ಯತಿರಿಕ್ತವಾಗಿ ಪಾತ್ರಗಳನ್ನು ಚಿತ್ರಿಸಲು ಇಷ್ಟಪಡುತ್ತಾರಂತೆ.

ಸೂಜಿದಾರ, ಮತ್ತು ಧರಣಿ ಮಂಡಲ ಮದ್ಯದೊಳಗೆ ಚಲನಚಿತ್ರಗಳಲ್ಲಿ ಪೋಷಕ ನಟನೆಗಳಿಗೆ ಹೆಸರುವಾಸಿಯಾಗಿದ್ದಾರೆ. ನಾನು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಓದಿದಾಗ ನೆಗೆಟಿವ್ ಪಾತ್ರಗಳತ್ತ ನನ್ನ ಒಲವು ಶುರುವಾಯಿತು.

ನಾಟಕಗಳಲ್ಲಿ ನಟಿಸುವಾಗ, ಸಕಾರಾತ್ಮಕ ಪಾತ್ರಗಳಿಗಿಂತ ಭಿನ್ನವಾಗಿ, ನಕಾರಾತ್ಮಕ ಪಾತ್ರಗಳು ವೈವಿಧ್ಯಮಯ ಭಾವನೆಗಳನ್ನು ಹೊರಹಾಕಲು ನಿಮಗೆ ಅನುವು ಮಾಡಿಕೊಡುತ್ತದೆ ಎಂದು ನಾನು ಭಾವಿಸಿದೆ ಎನ್ನುತ್ತಾರೆ ಯಶ್ ಶೆಟ್ಟಿ. ವಜ್ರಮುನಿ ಮತ್ತು ಪ್ರಕಾಶ್ ರಾಜ್ ಅವರಂತಹ ಬಹುಮುಖ ನಟರ ದೊಡ್ಡ ಅಭಿಮಾನಿ ಯಶ್ ಶೆಟ್ಟಿ.

ಕೆರಿಯರ್‌ನಲ್ಲಿ ನಾನು ಪ್ರಕಾಶ್ ರಾಜ್ ಅವರನ್ನು ಅನುಸರಿಸುತ್ತೇನೆ. ಅವರು ಕೇವಲ ಖಳನಾಯಕನ ಪಾತ್ರದಲ್ಲಿ ಪ್ರಸಿದ್ಧರಾಗಿರುವ ನಟನ ಅತ್ಯುತ್ತಮ ಉದಾಹರಣೆಯಾಗಿದ್ದಾರೆ, ಆದರೆ ಕುಟುಂಬದ ಸದಸ್ಯ ಮತ್ತು ಸ್ನೇಹಿತ ಕೂಡ ಹೌದು. ಅವರು ಯಾವುದೇ ಪಾತ್ರಕ್ಕೂ ಹೊಂದಿಕೊಳ್ಳುತ್ತಾರೆ, ನನ್ನ ಮನಸ್ಸಿನಲ್ಲಿ ನಾನು  ನಾಯಕನಲ್ಲ ಒಬ್ಬ ನಟ ಎಂಬ ಭಾವನೆ ಇರುವುದು ವಿಭಿನ್ನ ಪಾತ್ರಗಳನ್ನು ನಿರ್ವಹಿಸಲು ಅನುಕೂಲ ಮಾಡಿಕೊಡುತ್ತದೆ ಎಂದು ಯಶ್ ಶೆಟ್ಟಿ ತಿಳಿಸಿದ್ದಾರೆ.

ಕುಶಾಲ್ ಗೌಡ ನಿರ್ದೇಶನದ ಮುಂಬರುವ ಧನಂಜಯ್ ಅಭಿನಯದ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡದಲ್ಲಿ ಯಶ್ ಮತ್ತೊಮ್ಮೆ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾವು ನಕಾರಾತ್ಮಕ ಪಾತ್ರವನ್ನು ನಿರ್ವಹಿಸಿದಾಗ ನಮಗೆ ಅನೇಕ ಸವಾಲುಗಳು ಎದುರಾಗುತ್ತವೆ. ಜಮಾಲಿಗುಡ್ಡದಲ್ಲಿ ನನ್ನ ಪಾತ್ರವನ್ನು ಜನ ಮೆಚ್ಚುತ್ತಾರೆ’ ಎನ್ನುತ್ತಾರೆ ಯಶ್ ಶೆಟ್ಟಿ.

ನಾಯಕನಿಗೆ ಸರಿಯಾಗಿ ಖಳನಾಯಕನಿಗೂ ಪ್ರಾಮುಖ್ಯತೆ ನೀಡುವ ಕೆಲವೇ ಕೆಲವು ನಿರ್ದೇಶಕರು ನಮ್ಮಲ್ಲಿದ್ದಾರೆ. ನನ್ನ ಮುಂಬರುವ ಚಿತ್ರಗಳಾದ ಜಮಾಲಿಗುಡ್ಡ, ಗೌಳಿ, ಧೈರ್ಯಂ ಸರ್ವತ್ರ ಸಾಧನಂ ಮತ್ತು ಅಶೋಕ ಬ್ಲೇಡ್‌ನ ನಿರ್ದೇಶಕರು ಚಿತ್ರೀಕರಣಕ್ಕೆ ಎರಡು ತಿಂಗಳ ಮುಂಚೆಯೇ ನನಗೆ ಸ್ಕ್ರಿಪ್ಟ್‌ಗಳನ್ನು ಒದಗಿಸಿದರು. ಇದು ನನ್ನ ಪಾತ್ರದಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿತು.

ನಾನು ಸೆಟ್‌ಗಳಿಗೆ ಹೋಗುವಾಗ, 12 ದಿನಗಳವರೆಗೆ ಕೇವಲ ಸ್ಟಂಟ್‌ಗಳನ್ನು ಮಾಡುತ್ತೇನೆ ಮತ್ತು ಮನೆಗೆ ಹಿಂತಿರುಗುತ್ತೇನೆ. ನಾವು ಎಂದಿಗೂ ನಕಾರಾತ್ಮಕ ಪಾತ್ರಗಳ ಕೊರತೆಯನ್ನು ಹೊಂದಿರುವುದಿಲ್ಲ ಎಂಬುದಕ್ಕೆ ನನಗೆ ಸಂತೋಷವಾಗಿದೆ.  ನಮಗೆ ಯಾವುದು ಉತ್ತಮವಾಗಿ ಹೊಂದಿಕೊಳ್ಳುತ್ತದೆ ಎಂಬುದನ್ನು ನಾವು ಆಯ್ಕೆ ಮಾಡಬಹುದು ಎಂದು ಯಶ್ ಶೆಟ್ಟಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಪ್ರಕರಣ: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT