ದರ್ಶನ್ ಮತ್ತು ಜಗ್ಗೇಶ್ 
ಸಿನಿಮಾ ಸುದ್ದಿ

ಕಲಾವಿದರನ್ನ ಹೀಗೆ ಅಪಮಾನ ಮಾಡದಿರಿ: ಕಹಿ ಘಟನೆ ಮರೆತು ದರ್ಶನ್ ಪರ ನಿಂತ ನಟ ಜಗ್ಗೇಶ್!

ದರ್ಶನ್ ಮೇಲೆ ಚಪ್ಪಲಿ ಎಸೆದಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಸ್ಯಾಂಡಲ್‌ವುಡ್‌ನ ಹಲವು ನಟ-ನಟಿಯರು ಈ ಘಟನೆಯನ್ನು ಖಂಡಿಸಿದ್ದಾರೆ.

ದರ್ಶನ್ ಮೇಲೆ ಚಪ್ಪಲಿ ಎಸೆದಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಸ್ಯಾಂಡಲ್‌ವುಡ್‌ನ ಹಲವು ನಟ-ನಟಿಯರು ಈ ಘಟನೆಯನ್ನು ಖಂಡಿಸಿದ್ದಾರೆ.

ನಟ ಜಗ್ಗೇಶ್ ಸಹ ತಮ್ಮ ನಟ ಸಹೋದ್ಯೋಗಿಗೆ ಆಗಿರುವ ಅಪಮಾನವನ್ನು ಖಂಡಿಸಿ ಟ್ವೀಟ್ ಮಾಡಿದ್ದು, ಘಟನೆಯನ್ನು ಖಂಡಿಸಿದ್ದಾರೆ. ಹಾಗೂ ತಾವು ಕಲಾವಿದನಿಗೆ ಬೆಂಬಲವಾಗಿ ನಿಂತುಕೊಳ್ಳುವುದಾಗಿ ಹೇಳಿದ್ದಾರೆ.

ತಮ್ಮೊಂದಿಗೆ ನಡೆದ ಕಹಿ ಘಟನೆಯನ್ನು ಮರೆತು ಜಗ್ಗೇಶ್, ದರ್ಶನ್‌ಗೆ ಬೆಂಬಲ ನೀಡಿರುವುದು ಪ್ರಶಂಸೆಗೆ ಪಾತ್ರವಾಗಿದೆ. ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಇದೆ ದರ್ಶನ್‌ರ ಕೆಲವು ಅಭಿಮಾನಿಗಳು ಜಗ್ಗೇಶ್‌ ನಟಿಸುತ್ತಿದ್ದ 'ತೋತಾಪುರಿ' ಸಿನಿಮಾದ ಶೂಟಿಂಗ್‌ ಸೆಟ್‌ ಗೆ ತೆರಳಿ ಜಗ್ಗೇಶ್ ಅನ್ನು ಸುತ್ತುವರೆದು ಬೈದಿದ್ದರು.

ನಟ ಜಗ್ಗೇಶ್, ಅದ್ಯಾರೊಟ್ಟಿಗೊ ಮಾತನಾಡುವಾಗ ದರ್ಶನ್‌ರ ಅಭಿಮಾನಿಗಳ ಬಗ್ಗೆ ಮಾತಿನ ಭರದಲ್ಲಿ ಏನೋ ಹೇಳಿದ್ದಾರೆ ಎಂದು ಹಿರಿಯ ನಟ ಜಗ್ಗೇಶ್ ಅನ್ನು ಸುತ್ತುವರೆದು ಸಮಸ್ಯೆಕೊಟ್ಟಿದ್ದರು ದರ್ಶನ್ ಅಭಿಮಾನಿಗಳು. ತಾವು ಜಗ್ಗೇಶ್‌ ಮೇಲೆ ಮುತ್ತಿಗೆ ಹಾಕಿ, ಅವಾಚ್ಯವಾಗಿ ಮಾತನಾಡಿರುವುದರ ವಿಡಿಯೋ ಮಾಡಿ ಹಂಚಿಕೊಂಡಿದ್ದರು.

ನಟ ದರ್ಶನ್‌ಗೆ ಹೊಸಪೇಟೆಯಲ್ಲಿ ಅವಮಾನವಾದಾಗ ಅದನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ. ''ದರ್ಶನ್‌ ರ ಮೇಲೆ ನಿನ್ನೆ ನಡೆದ ಘಟನೆ ತಪ್ಪು ಹಾಗು ಖಂಡನೀಯ.. ದಯವಿಟ್ಟು ಕಲವಿದರನ್ನ ಹೀಗೆ ಅಪಮಾನ ಮಾಡದಿರಿ. ಕಲಾವಿದರಿಗೆ ಗೊತ್ತಿರುವುದು ಕಲಾಪ್ರೇಮಿಗಳ ಸಂತೋಷ ಪಡಿಸುವ ಕಾಯಕ ಮಾತ್ರ. ಎಲ್ಲಾ ಕಲಾವಿದರು ಶಾರದೆಯ ಮಕ್ಕಳು..ಅವರ ಮೇಲೆ ಪ್ರೀತಿ ಇರಲಿ ದ್ವೇಷ ಬೇಡ ನನ್ನ ವಿನಂತಿ. ದರ್ಶನ ಸ್ವಲ್ಪ ನೇರನುಡಿ ಮನಸ್ಸು ಮಗುವಂತೆ. ಧನ್ಯವಾದ'' ಎಂದಿದ್ದಾರೆ ಜಗ್ಗೇಶ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT