ಸುದೀಪ್-ದರ್ಶನ್ ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

ಬೆನ್ನಿಗೆ ನಿಂತ ಕಿಚ್ಚನಿಗೆ ಧನ್ಯವಾದ ಹೇಳಿದ ದಚ್ಚು, ಫ್ಯಾನ್ಸ್ ಫುಲ್ ಖುಷ್

ಕಳೆದ ಮೂರು ದಿನಗಳಿಂದ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್. ತಮ್ಮ ಮುಂಬರುವ ಕ್ರಾಂತಿ ಚಿತ್ರದ ಹಾಡಿನ ಪ್ರೊಮೋಷನ್ ಗೆ ಬಳ್ಳಾರಿಯ ಹೊಸಪೇಟೆಗೆ ಹೋಗಿದ್ದ ದರ್ಶನ್ ಮೇಲೆ ಕಿಡಿಗೇಡಿಗಳು ಚಪ್ಪಲಿ ಎಸೆದ ಘಟನೆ ನಡೆದಿತ್ತು.

ಬೆಂಗಳೂರು: ಕಳೆದ ಮೂರು ದಿನಗಳಿಂದ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್. ತಮ್ಮ ಮುಂಬರುವ ಕ್ರಾಂತಿ ಚಿತ್ರದ ಹಾಡಿನ ಪ್ರೊಮೋಷನ್ ಗೆ ಬಳ್ಳಾರಿಯ ಹೊಸಪೇಟೆಗೆ ಹೋಗಿದ್ದ ದರ್ಶನ್ ಮೇಲೆ ಕಿಡಿಗೇಡಿಗಳು ಚಪ್ಪಲಿ ಎಸೆದ ಘಟನೆ ನಡೆದಿತ್ತು.

ಈ ಘಟನೆಯನ್ನು ಖಂಡಿಸಿ ಈಗಾಗಲೇ ಕನ್ನಡ ಚಿತ್ರರಂಗದ ಕಲಾವಿದರು, ರಾಜಕೀಯ ನಾಯಕರು ದರ್ಶನ್ ಗೆ ಬೆಂಬಲ ಸೂಚಿಸಿದ್ದಾರೆ. ಹಿಂದೆ ಕುಚ್ಚಿಕು ಗೆಳೆಯರಂತಿದ್ದು ಬಳಿಕ ಹಲವು ವೈಯಕ್ತಿಕ ಕಾರಣಗಳಿಗೆ ದೂರಾದ ಕಿಚ್ಚ ಸುದೀಪ್ ಹೊಸಪೇಟೆ ಘಟನೆಯನ್ನು ಬಲವಾಗಿ ಖಂಡಿಸಿ ಸುದೀರ್ಘ ಪತ್ರ ಬರೆದಿದ್ದರು. ವೈಷಮ್ಯವನ್ನು ಮರೆತು ಈ ಸಂದರ್ಭದಲ್ಲಿ ಕಿಚ್ಚ ಒಳ್ಳೆಯ ಮಾತುಗಳನ್ನಾಡಿದ್ದು ಹಲವರಿಗೆ ಖುಷಿ ಕೊಟ್ಟಿತು. ಅಷ್ಟೇ ಅಲ್ಲ ದರ್ಶನ್ ಮತ್ತು ಸುದೀಪ್ ಒಂದಾಗಬೇಕು, ಚಂದನವನ ಬೆಳಗಬೇಕು ಎಂದು ಆಶಿಸಿದರು.

ಒಂದು ಕಾಲದ ಗೆಳೆಯ ಈ ಕಷ್ಟದ ಸಂದರ್ಭದಲ್ಲಿ ತನ್ನ ಪರವಾಗಿ ನಿಂತಿದ್ದಕ್ಕೆ, ನಾಲ್ಕು ಒಳ್ಳೆಯ ಮಾತುಗಳನ್ನಾಡಿದ್ದಕ್ಕೆ ದರ್ಶನ್ ಧನ್ಯವಾದಗಳನ್ನು ಹೇಳಿದ್ದಾರೆ. ಇದು ಕಿಚ್ಚ ಮತ್ತು ದಚ್ಚು ಫ್ಯಾನ್ಸ್ ಗಳಿಗೆ ಬಹಳ ಖುಷಿ ಕೊಟ್ಟಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅನ್ಯ ಉದ್ದೇಶಕ್ಕೆ ಕುಡಿಯುವ ನೀರು ಬಳಕೆ ನಿಷೇಧ; ಬೇಸಿಗೆಯಲ್ಲಿ ತೆಗೆದುಕೊಳ್ಳುವ ಕ್ರಮಗಳನ್ನು ಮಳೆಗಾಲದಲ್ಲೇ ಜಾರಿಗೊಳಿಸಿದ BWSSB!

ಮೆಲ್ಬೋರ್ನ್ ಭೇಟಿಗೂ ಮುನ್ನ ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ; ಆಸ್ಟ್ರೇಲಿಯಾದಿಂದ ತನಿಖೆ

Cricket: ಸಚಿನ್ ಅಲ್ಲ.. ಸೂರ್ಯವಂಶಿ ಅಲ್ಲವೇ ಅಲ್ಲ.. ಐತಿಹಾಸಿಕ ಪದಾರ್ಪಣೆ ಹೊರತಾಗಿಯೂ ಈ ಆಟಗಾರನ ದಾಖಲೆ ಮುರಿಯುವಲ್ಲಿ ವಿಫಲ!

2nd T20I: Debut ಪಂದ್ಯದಲ್ಲೇ Vaibhav Sooryavanshi ಝಲಕ್, ಇಂಗ್ಲೆಂಡ್ ಗೆ ಗೆಲ್ಲಲು 191 ರನ್ ಸವಾಲಿನ ಗುರಿ ನೀಡಿದ ಭಾರತ!

ವೈಭವ್ ಸೂರ್ಯವಂಶಿ ಎಡವಟ್ಟು: ಪಾದಾರ್ಪಣೆ ಪಂದ್ಯದಲ್ಲಿ 2 ಅದ್ಭುತ ಸಿಕ್ಸರ್ ಬಾರಿಸಿ, ಸ್ಟಂಪ್ ಔಟ್‌ಗೆ ಬಲಿ; video