ಕೊಳ್ಳೆಗಾಲದಲ್ಲಿ ವೇದ ಚಿತ್ರದ ಪ್ರಚಾರ ಸಂದರ್ಭದಲ್ಲಿ ಅಭಿಮಾನಿಗಳ ಮುಂದೆ ಸೆಲ್ಫಿ ತೆಗೆದುಕೊಂಡ ಶಿವರಾಜ್ ಕುಮಾರ್ 
ಸಿನಿಮಾ ಸುದ್ದಿ

'ಏಕೆ ಬಾಸ್ ಬಾಸ್ ಅಂತಾ ಒದ್ದಾಡ್ತೀರಾ, ಎಲ್ಲರಿಗೂ ಬಾಸ್ ಒಬ್ಬರೇ ಅದು ದೇವರು': ಶಿವರಾಜ್ ಕುಮಾರ್

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟರ ಅಭಿಮಾನಿಗಳು ಆಗಾಗ ಬಾಸ್ ವಿಚಾರದಲ್ಲಿ ಕಿತ್ತಾಡಿಕೊಳ್ಳುತ್ತಿರುತ್ತಾರೆ. ಸ್ಯಾಂಡಲ್ ವುಡ್ ನ ಬಾಸ್ ಯಾರು ಎಂಬ ವಿಷಯದಲ್ಲಿ ಆಗಾಗ ಫ್ಯಾನ್ಸ್ ವಾರ್ ನಡೆಯುತ್ತಿರುತ್ತದೆ. ಬಾಸ್ ಬಿರುದಿಗಾಗಿ ಅಭಿಮಾನಿಗಳ ಮಧ್ಯೆ ಕಿತ್ತಾಟ ನಡೆದೇ ಇದೆ. 

ಮೈಸೂರು: ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟರ ಅಭಿಮಾನಿಗಳು ಆಗಾಗ ಬಾಸ್ ವಿಚಾರದಲ್ಲಿ ಕಿತ್ತಾಡಿಕೊಳ್ಳುತ್ತಿರುತ್ತಾರೆ. ಸ್ಯಾಂಡಲ್ ವುಡ್ ನ ಬಾಸ್ ಯಾರು ಎಂಬ ವಿಷಯದಲ್ಲಿ ಆಗಾಗ ಫ್ಯಾನ್ಸ್ ವಾರ್ ನಡೆಯುತ್ತಿರುತ್ತದೆ. ಬಾಸ್ ಬಿರುದಿಗಾಗಿ ಅಭಿಮಾನಿಗಳ ಮಧ್ಯೆ ಕಿತ್ತಾಟ ನಡೆದೇ ಇದೆ. 

ಇದಕ್ಕೆ ನಿನ್ನೆ ಮೈಸೂರಿನಲ್ಲಿ ನಟ ಶಿವರಾಜ್​ಕುಮಾರ್ (Shivarajkumar) ನೇರವಾಗಿ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಈ ವಿಚಾರದಲ್ಲಿ ಜಗಳ ಮಾಡಿಕೊಳ್ಳುವ ಅಭಿಮಾನಿಗಳಿಗೆ ಶಿವರಾಜ್​ ಕುಮಾರ್ ಬುದ್ದಿವಾದ ಹೇಳಿದಂತಿದೆ ಅವರ ಮಾತುಗಳು. 

ಮೈಸೂರಿನ ಇಟ್ಟಿಗೆಗೂಡು ಬಡಾವಣೆಯಲ್ಲಿ ನಿನ್ನೆ ಡಾ. ರಾಜ್​ಕುಮಾರ್ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಅವರು ಬಾಸ್ ಶಬ್ದ ಪ್ರಸ್ತಾಪವಾಯಿತು. ‘ಎಲ್ಲರಿಗೂ ಬಾಸ್ ಒಬ್ಬರೇ ಅದು ದೇವರು. ಏಕೆ ಬಾಸ್ ಬಾಸ್ ಅಂತಾ ಒದ್ದಾಡ್ತೀರಾ? ಎಲ್ಲರ ಮನೆಯಲ್ಲೂ ಒಬ್ಬೊಬ್ಬ ಬಾಸ್ ಇರುತ್ತಾನೆ. ಎಲ್ಲರ ಹೃದಯದಲ್ಲೂ ಒಬ್ಬ ಬಾಸ್ ಇರ್ತಾನೆ. ಮನೆಗೆ ಅವನೇ ಬಾಸ್. ನಾನೊಬ್ಬನೇ ಬಾಸ್ ಅಲ್ಲ’ ಎಂದಿದ್ದಾರೆ.

ಮೈಸೂರಿನ ರಿಫ್ರೆಶ್​​ಮೆಂಟ್ ಮಾಲೀಕ ವಿಶ್ವ ಎಂಬುವವರು ಈ ಕಾರ್ಯಕ್ರಮ ಆಯೋಜಿಸಿದ್ದರು. ಅಲ್ಲಿದ್ದ ಯುವಕನೋರ್ವ ‘ವಿಶ್ವ ಅವರನ್ನು ನಮ್ಮ ಬಾಸ್’ ಎಂದರು. ಯುವಕನಿಗೆ ಬಾಸ್ ಬಗ್ಗೆ ಶಿವಣ್ಣ ವಿವರಣೆ ನೀಡಿದ್ದಾರೆ. ಶಿವರಾಜ್​ಕುಮಾರ್ ಮಾತಿಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಕಳೆದ ವಾರವಷ್ಟೇ ತೆರೆಕಂಡ ಶಿವರಾಜ್​ಕುಮಾರ್ ಅವರ ‘ವೇದ’ ಸಿನಿಮಾ ಗೆದ್ದು ವಿಮರ್ಶಕರ, ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್-ಅಮೆರಿಕವನ್ನ ಕ್ಷಮಿಸೋ ಮಾತೇ ಇಲ್ಲ.. ಆದರೆ...': ನೆರೆಹೊರೆ ರಾಷ್ಟ್ರಗಳ ಕ್ಷಮೆ ಕೋರಿದ Iran

ಆಸ್ಟ್ರೇಲಿಯಾದಂತೆ ಭಾರತೀಯ ಅಭಿಮಾನಿಗಳ ಬಾಯಿ ಮುಚ್ಚಿಸುತ್ತೇವೆ: ಫೈನಲ್ ಪಂದ್ಯಕ್ಕೂ ಮುನ್ನ ಪ್ಯಾಟ್ ಕಮ್ಮಿನ್ಸ್ ಧಮ್ಕಿ!

ನೇಪಾಳ ಚುನಾವಣೆ: ಪ್ರಚಂಡ ಗೆಲುವಿನತ್ತ RSP; ಬೆಂಗಳೂರಿನಲ್ಲಿ ಪದವಿ ಪಡೆದಿದ್ದ ಬಲೇನ್ ಶಾ, 35 ವರ್ಷಕ್ಕೆ ಪ್ರಧಾನಿ ಪಟ್ಟ!

'ಅದು ಮಾನವೀಯ ಕೆಲಸ.. ನಾವು ಸರಿಯಾದ್ದನ್ನೇ ಮಾಡಿದ್ದೆವು': Iran ನೌಕೆಗೆ ಪ್ರವೇಶ ನೀಡಿದ ಕುರಿತು EAM Jaishankar ಹೇಳಿಕೆ!

ಗುಜರಾತ್‌ನಲ್ಲಿ ಘೋರ ದುರಂತ: ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದ ಮೂವರು ಕಾರ್ಮಿಕರು ಸಾವು, ಒಬ್ಬನ ಸ್ಥಿತಿ ಗಂಭೀರ!

SCROLL FOR NEXT