ಪುನೀತ್ ರಾಜ್ ಕುಮಾರ್ 
ಸಿನಿಮಾ ಸುದ್ದಿ

ಅಪ್ಪು ಕನಸಿನ ಕೂಸು, ಕೊನೆ ಚಿತ್ರ 'ಗಂಧದ ಗುಡಿ' ಬಿಡುಗಡೆ ದಿನಾಂಕ ಘೋಷಣೆ, ಮೊದಲ ಪುಣ್ಯತಿಥಿಗೆ ಅಭಿಮಾನಿಗಳಿಗೆ ಸ್ಮರಣೆ

ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power star Puneet Rajkumar) ನಿಧನರಾಗಿ ಬರುವ ಅಕ್ಟೋಬರ್ 29ಕ್ಕೆ ಒಂದು ವರ್ಷವಾಗುತ್ತದೆ.

ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power star Puneet Rajkumar) ನಿಧನರಾಗಿ ಬರುವ ಅಕ್ಟೋಬರ್ 29ಕ್ಕೆ ಒಂದು ವರ್ಷವಾಗುತ್ತದೆ. ಅವರು ನಿಧನರಾಗುವುದಕ್ಕೆ ಮುನ್ನ ನೈಜವಾಗಿ, ಸಹಜವಾಗಿ ಪ್ರೀತಿಯಿಂದ ಅಭಿನಯಿಸಿದ ಕೊನೆಯ ಚಿತ್ರ ಗಂಧದ ಗುಡಿ (Gandhada Gudi). ಕರ್ನಾಟಕದ ವಿಶೇಷತೆ, ಇಲ್ಲಿನ ಅದ್ಭುತಗಳನ್ನು ರಾಜ್ಯದ ಜನತೆಗೆ ತೋರಿಸಬೇಕೆಂದು ಬಹಳ ಪ್ರೀತಿ, ಶ್ರದ್ಧೆಯಿಂದ ಅವರು ಮಾಡಿದ್ದ ಚಿತ್ರದ ಮೇಲೆ ಅಪಾರ ವಿಶ್ವಾಸವನ್ನು ಅಪ್ಪು ಇರಿಸಿಕೊಂಡಿದ್ದರು.

ಕಳೆದ ನವೆಂಬರ್ 1 ಕರ್ನಾಟಕ ರಾಜ್ಯೋತ್ಸವದಂದು ಗಂಧದ ಗುಡಿ ಚಿತ್ರದ ಟೀಸರ್ ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಕೈಯಲ್ಲಿ ಬಿಡುಗಡೆ ಮಾಡಿಸಬೇಕೆಂದು ಬಯಸಿದ್ದ ಅಪ್ಪು ನಿಧನ ಹೊಂದುವುದಕ್ಕೆ ಕೆಲವೇ ದಿನಗಳ ಮೊದಲು ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಹೇಳಿಕೊಂಡಿದ್ದರಂತೆ.

ಪುನೀತ್ ಅವರು ನಿರ್ದೇಶಕ ಅಮೋಘವರ್ಷ ಜೊತೆ ಇದಕ್ಕಾಗಿ ಗಂಧದ ನಾಡಿನ ಕಾಡುಮೇಡು, ಗುಡ್ಡಬೆಟ್ಟಗಳಲ್ಲಿ ಅಲೆದಾಡಿದ್ದರು, ಸುತ್ತಾಡಿದ್ದರು. ಇದೀಗ ಅವರ ಕನಸಿನ ಕೂಸು ಯಾವಾಗ ತೆರೆಗೆ ಬರಲಿದೆ ಎಂದು ಘೋಷಣೆಯಾಗಿದೆ. ಈ ಮೂಲಕ ಅಪ್ಪು ಅಭಿಮಾನಿಗಳಿಗೆ ಖುಷಿಯ ಸುದ್ದಿ ಸಿಕ್ಕಿದೆ. ಗಂಧದ ಗುಡಿ ಚಿತ್ರ ಅಕ್ಟೋಬರ್ 28ರಂದು ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚುನಾವಣಾ ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!