ಶರತ್ ಚಂದ್ರನ್ 
ಸಿನಿಮಾ ಸುದ್ದಿ

ಮಲೆಯಾಳಂ ನಟ ‘ಶರತ್ ಚಂದ್ರನ್’ ಶವವಾಗಿ ಪತ್ತೆ: 37 ನೇ ವರ್ಷಕ್ಕೆ ಬದುಕು ಮುಗಿಸಿದ ಯುವ ಕಲಾವಿದ!

ಮಲಯಾಳಂ ನಟ ಶರತ್ ಚಂದ್ರನ್ ಶವವಾಗಿ ಪತ್ತೆಯಾಗಿದ್ದು, ಅವರಿಗೆ 37 ವರ್ಷ ವಯಸ್ಸಾಗಿತ್ತು, ಆದರೆ ನಟನ ಸಾವಿಗೆ ನಿಖರ ಕಾರಣವಿನ್ನೂ ತಿಳಿದುಬಂದಿಲ್ಲ.

ಕೇರಳ: ಮಲಯಾಳಂ ನಟ ಶರತ್ ಚಂದ್ರನ್ ಶವವಾಗಿ ಪತ್ತೆಯಾಗಿದ್ದು, ಅವರಿಗೆ 37 ವರ್ಷ ವಯಸ್ಸಾಗಿತ್ತು, ಆದರೆ ನಟನ ಸಾವಿಗೆ ನಿಖರ ಕಾರಣವಿನ್ನೂ ತಿಳಿದುಬಂದಿಲ್ಲ.

ಶರತ್ ತಮ್ಮ ಚಿತ್ರ ಅಂಗಮಾಲಿ ಡೈರೀಸ್ ಮೂಲಕ ಪ್ರಸಿದ್ಧಿ ಪಡೆದಿದ್ದು, ಇತರ ಜನಪ್ರಿಯ ಚಿತ್ರಗಳಲ್ಲಿ ಕೂಡೆ, ಒರು ಮೆಕ್ಸಿಕನ್ ಅಪರಾತ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೊಚ್ಚಿ ಮೂಲದವರಾದ ಶರತ್, ಈ ಹಿಂದೆ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದರು. ಅವರು ಡಬ್ಬಿಂಗ್ ಕಲಾವಿದರಾಗಿ ಚಲನಚಿತ್ರದಲ್ಲಿಯೂ ಕೆಲಸ ಮಾಡಿದರು. ಅನೀಸ್ಯ ಚಿತ್ರದ ಮೂಲಕ ಚಂದ್ರನ್ ಮಲಯಾಳಂ ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದರು.

ಶರತ್ ಚಂದ್ರನ್ ಚಿತ್ರರಂಗಕ್ಕೆ ಬರುವುದಕ್ಕೂ ಮೊದಲು ಐಟಿ ಜಾಬ್ ಮಾಡುತ್ತಿದ್ದರು. ನಂತರ ನಟನೆ ಬಗ್ಗೆ ಆಸಕ್ತಿ ತೋರಿದರು. ‘ಅಂಗಮಾಲಿ ಡೈರೀಸ್​’ ಸಿನಿಮಾ ಮೂಲಕ ಶರತ್ ಜನಪ್ರಿಯತೆ ಹೆಚ್ಚಿತು. ಇದಲ್ಲದೆ ‘ಮೆಕ್ಸಿಕನ್​ ಅಪರಾತ’ (2017), ‘ಸಿಐಎ: ಕಾಮ್ರೇಡ್​ ಇನ್ ಅಮೆರಿಕ’ (2017), ‘ಕೂಡೆ’ (2018) ಮೊದಲಾದ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

ನಟ ಆ್ಯಂಟನಿ ಅವರು ಈ ವಿಚಾರವನ್ನು ಅಧಿಕೃತ ಮಾಡಿದ್ದಾರೆ. ಶರತ್ ಫೋಟೋ ಪೋಸ್ಟ್ ಮಾಡಿ ‘ರೆಸ್ಟ್ ಇನ್ ಪೀಸ್ ಬ್ರದರ್​​’ ಎಂದು ಅವರು ಬರೆದುಕೊಂಡಿದ್ದಾರೆ. ಅಂತ್ಯಕ್ರಿಯೆ ನಾಳೆ ನಡೆಯಲಿದೆ ಎಂದು ವರದಿಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಕೊಡಗು: 100 ಎಕರೆ ಅರಣ್ಯ ವಲಯದಲ್ಲಿ ಬೌದ್ಧಧರ್ಮ ಜೊತೆಗೆ ಪರಿಸರ ಸಂರಕ್ಷಣೆ ಮಾಡುತ್ತಿರುವ 'ಕರ್ಮ ಕರ್ಗ್ಯು ಮಠ!

SCROLL FOR NEXT