ಸಿನಿಮಾ ಸುದ್ದಿ

ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ 'ಹಿಟ್ಲರ್ ಕಲ್ಯಾಣ' ಖ್ಯಾತಿಯ ಮಲೈಕಾ ವಸುಪಾಲ್!

Shilpa D
ಮಲೈಕಾ ವಸುಪಾಲ್
<strong>ಮಲೈಕಾ ವಸುಪಾಲ್</strong>

ರಾಧಿಕಾ ಪಂಡಿತ್, ರಚಿತಾ ರಾಮ್ ಹಾಗೂ ಅದಿತಿ ಪ್ರಭುದೇವ ಅವರಂತೆ ಮತ್ತೊಬ್ಬ ಧಾರಾವಾಹಿ ನಟಿ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.

ಹಿಟ್ಲರ್ ಕಲ್ಯಾಣ ಧಾರಾವಾಹಿ ಮೂಲಕ ಮನೆ ಮಾತಾಗಿರುವ ಮಲೈಕಾ ವಸುಪಾಲ್ ಸಿನಿಮಾಗೆ ಎಂಟ್ರಿ ನೀಡುತ್ತಿದ್ದಾರೆ. ಅನಿಲ್ ಕುಮಾರ್ ನಿರ್ದೇಶನದ ಉಪಾಧ್ಯಕ್ಷ ಸಿನಿಮಾದಲ್ಲಿ ಹಾಸ್ಯನಟ ಚಿಕ್ಕಣ್ಣ ಅವರ ಜೊತೆ ಅಭಿನಯಿಸಲಿದ್ದಾರೆ.

ಈ ಸಿನಿಮಾದಲ್ಲಿ ರವಿಶಂಕರ್, ವೀಣಾ ಸುಂದರ್ ಮತ್ತು ಸಾಧು ಕೋಕಿಲಾ ಕೂಡ ನಟಿಸಿದ್ದಾರೆ. ಧಾರಾವಾಹಿ ಮತ್ತು ಈ ಚಿತ್ರದ ನಡುವೆ ಜಗ್ಗಾಟ ನಡೆಸಲಿರುವ ಮಲೈಕಾ, ಮೈಸೂರಿನಲ್ಲಿ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

SCROLL FOR NEXT