ಆರ್ಕೆಸ್ಟ್ರಾ ಮೈಸೂರು ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

'ಹಾಡಬೇಕೆಂಬ ಯುವಕನ ಮಹತ್ವಕಾಂಕ್ಷೆಯ ಕಥೆಯುಳ್ಳ ಸಿನಿಮಾವೇ ಆರ್ಕೆಸ್ಟ್ರಾ ಮೈಸೂರು'

ಟ್ರೈಲರ್ ಮೈಸೂರಿನ ಆರ್ಕೆಸ್ಟ್ರಾ ಸಂಸ್ಕೃತಿಯ ಒಂದು ನೋಟವನ್ನು ಬಿಂಬಿಸುತ್ತದೆ. ಆರ್ಕೆಸ್ಟ್ರಾದಲ್ಲಿ ಹಾಡಲು ಕನಸು ಕಾಣುವ ಮಹತ್ವಾಕಾಂಕ್ಷಿ ಯುವಕನ ಕುರಿತಾದ ಕಥೆ ಈ ಸಿನಿಮಾದ್ದಾಗಿದೆ.

ಸುನೀಲ್ ಮೈಸೂರು ಅವರ ನಿರ್ದೇಶನದ ಆರ್ಕೆಸ್ಟ್ರಾ ಸಿನಿಮಾವನ್ನು ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಅವರ ಕೆಆರ್‌ಜಿ ಸ್ಟುಡಿಯೋಸ್ ಮತ್ತು ಧನಂಜಯ್ ಅವರ ಡಾಲಿ ಪಿಕ್ಚರ್ಸ್ ಪ್ರಸ್ತುತಪಡಿಸಲಿದೆ.

ಮಂಗಳವಾರದ ಟ್ರೇಲರ್ ಬಿಡುಗಡೆಯಾಗಿದೆ.  ಸ್ಯಾಂಡಲ್ ವುಡ್ ತಾರೆ ರಮ್ಯಾ ಟ್ರೈಲರ್ ಅನಾವರಣ ಮಾಡಿದರು. ಟ್ರೈಲರ್ ಮೈಸೂರಿನ ಆರ್ಕೆಸ್ಟ್ರಾ ಸಂಸ್ಕೃತಿಯ ಒಂದು ನೋಟವನ್ನು ಬಿಂಬಿಸುತ್ತದೆ. ಆರ್ಕೆಸ್ಟ್ರಾದಲ್ಲಿ ಹಾಡಲು ಕನಸು ಕಾಣುವ ಮಹತ್ವಾಕಾಂಕ್ಷಿ ಯುವಕನ ಕುರಿತಾದ ಕಥೆ ಈ ಸಿನಿಮಾದ್ದಾಗಿದೆ.

ಮ್ಯೂಸಿಕಲ್ ಡ್ರಾಮಾ ಆರ್ಕೆಸ್ಟ್ರಾ ಮೈಸೂರು ಚಿತ್ರದಲ್ಲಿ ಪೂರ್ಣಚಂದ್ರ ಮೈಸೂರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸುನೀಲ್ ಮೈಸೂರು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಅಶ್ವಿನ್ ವಿಜಯಕುಮಾರ್ ಮತ್ತು ರಘು ದೀಕ್ಷೀತ್ ಬಂಡವಾಳ ಹೂಡಿದ್ದಾರೆ. ರಘು ದೀಕ್ಷೀತ್ ನಿರ್ಮಾಣ ಮಾತ್ರವಲ್ಲದೇ ಸಂಗೀತ ನೀಡಿ, ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಾಲಿ ಧನಂಜಯ್ ಚಿತ್ರಕ್ಕೆ ಗೀತೆಯೊಂದನ್ನು ಬರೆದು ಚಿತ್ರದ ಗೀತೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರಕ್ಕೆ ಸುನಿಲ್ ಮತ್ತು ಗಾಯಕ ನವೀನ್ ಸಜ್ಜು ಕಥೆ ಬರೆದಿದ್ದಾರೆ. ಇದರಲ್ಲಿ ರಾಜಲಕ್ಷ್ಮಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮಹೇಶ್ ಕುಮಾರ್, ರವಿ ಹುಣಸೂರು, ಸಚ್ಚು, ರಾಜೇಶ್ ಬಸವಣ್ಣ, ಲಿಂಗರಾಜು, ಮಹದೇವ ಪ್ರಸಾದ್ ಮುಂತಾದವರು ತಾರಾಗಣದಲ್ಲಿದ್ದಾರೆ. ಜೋಸೆಫ್ ಕೆ ರಾಜಾ ಚಿತ್ರದ ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ ಮತ್ತು ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ಸಹ ನಿರ್ವಹಿಸಿದ್ದಾರೆ. ಚಿತ್ರತಂಡ ಇನ್ನೂ ಬಿಡುಗಡೆ ದಿನಾಂಕವನ್ನು ನಿಗದಿ ಮಾಡಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT