ಸಿನಿಮಾ ಸುದ್ದಿ

ಹಿಂದೂ ಕ್ಯಾಲೆಂಡರ್ ಬಳಸಿ ಇಸ್ರೋದಿಂದ ರಾಕೆಟ್ ಉಡಾವಣೆ ಹೇಳಿಕೆ: ನಟ ಮಾಧವನ್ ಟ್ರೋಲ್ ಮಾಡಿದ ನೆಟ್ಟಿಗರು!

Vishwanath S

ಚೆನ್ನೈ: ನಟ ಆರ್ ಮಾಧವನ್ ತಮ್ಮ ನಿರ್ದೇಶನದ ಚೊಚ್ಚಲ ಚಿತ್ರ 'ರಾಕೆಟ್ರಿ: ದಿ ನಂಬಿ ಎಫೆಕ್ಟ್' ಪ್ರಚಾರದ ಸಂದರ್ಭದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಬಾಹ್ಯಾಕಾಶಕ್ಕೆ ರಾಕೆಟ್ ಉಡಾಯಿಸಲು ಮತ್ತು ಮಂಗಳನ ಕಕ್ಷೆಯನ್ನು ತಲುಪಲು ಪಂಚಾಂಗ ಅನ್ನು ಬಳಸಿದೆ ಎಂಬ ಹೇಳಿಕೆ ಇದೀಗ ಟ್ರೋಲ್ ಗೆ ಗುರಿಯಾಗಿದೆ. 

ನಟ-ಚಿತ್ರ ನಿರ್ಮಾಪಕರು ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಸರಿಯಾಗಿ ಅಧ್ಯಯನ ಮಾಡದೆ ಆಧಾರರಹಿತ ಹೇಳಿಕೆಗಳನ್ನು ನೀಡಿ ಟ್ರೋಲ್‌ಗಳಿಗೆ ಗುರಿಯಾಗಿದ್ದಾರೆ.

ಪ್ರಚಾರದ ವೇಳೆ 'ಇಸ್ರೋ ತನ್ನ ಮಂಗಳಯಾನದ ಸಮಯದಲ್ಲಿ ಪಿಎಸ್‌ಎಲ್‌ವಿ ಸಿ -25 ರಾಕೆಟ್ ಅನ್ನು ಉಡಾವಣೆ ಮಾಡಲು ಮತ್ತು ಮಂಗಳನ ಕಕ್ಷೆಗೆ ಸೇರಿಸಲು ಹಿಂದೂ ಕ್ಯಾಲೆಂಡರ್‌ ಪಂಚಾಂಗದ ಸಹಾಯವನ್ನು ತೆಗೆದುಕೊಂಡಿತ್ತು ಎಂದು ಹೇಳಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಇದನ್ನು ಗಮನಿಸಿದ ಸಂಗೀತ ಸಂಯೋಜಕ ಟಿಎಂ ಕೃಷ್ಣ ಇದಕ್ಕೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದು ಈ ವೀಡಿಯೊವನ್ನು ಇಸ್ರೋ ವೆಬ್‌ಸೈಟ್‌ಗೆ ಲಿಂಕ್ ಮಾಡಿ ನಮಗೆ ನಿರಾಸೆಯಾಗಿದೆ. ಇಸ್ರೋ ಈ ಪ್ರಮುಖ ಮಾಹಿತಿಯನ್ನು ತಮ್ಮ ವೆಬ್‌ಸೈಟ್‌ನಲ್ಲಿ ಯಾಕೆ ಪ್ರಕಟಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

ಪಂಚಾಂಗ ವಿವಿಧ ಗ್ರಹಗಳ ಮೇಲಿನ ಎಲ್ಲಾ ಮಾಹಿತಿಗಳನ್ನು ಹೊಂದಿದೆ. ಅವುಗಳ ಗುರುತ್ವಾಕರ್ಷಣೆ ಸೆಳೆತ, ಸೂರ್ಯನ ಜ್ವಾಲೆಗಳ ವಿಚಲನ ಇತ್ಯಾದಿ ಎಲ್ಲವನ್ನೂ 1,000 ವರ್ಷಗಳ ಹಿಂದೆ ನಿಖರವಾಗಿ ಲೆಕ್ಕಹಾಕಲಾಗಿದೆ. ಆದ್ದರಿಂದ ಉಡಾವಣೆಯ ಮೈಕ್ರೋ-ಸೆಕೆಂಡ್ ಅನ್ನು ಈ ಪಂಚಾಂಗ ಮಾಹಿತಿಯನ್ನು ಬಳಸಿ ಇಸ್ರೋ ಲೆಕ್ಕಹಾಕಿದೆ ಎಂದು ವಿಡಿಯೋದಲ್ಲಿ ಮಾಧವನ್ ಮಾತನಾಡಿರುವುದನ್ನು ಇಂಗ್ಲಿಷ್ ಗೆ ಟಿಎಂ ಕೃಷ್ಣ ಅನುವಾದಿಸಿದ್ದಾರೆ. 

52 ವರ್ಷದ ನಟ ಮಾಧವನ್ 'ರಾಕೆಟ್ರಿ' ಚಿತ್ರದ ಕಥೆ ಬರೆದು, ನಿರ್ಮಿಸಿ ಮತ್ತು ನಟಿಸಿದ್ದಾರೆ. ಇದು ಮಾಜಿ ವಿಜ್ಞಾನಿ ಮತ್ತು ಇಸ್ರೋದ ಏರೋಸ್ಪೇಸ್ ಇಂಜಿನಿಯರ್ ನಂಬಿ ನಾರಾಯಣನ್ ಅವರ ಜೀವನಚರಿತ್ರೆಯಾಗಿದ್ದು ಅವರು ಬೇಹುಗಾರಿಕೆಯ ಆರೋಪಕ್ಕೆ ಗುರಿಯಾಗಿದ್ದರು.

SCROLL FOR NEXT