ನಟ ರಮೇಶ್ ಅರವಿಂದ್ 
ಸಿನಿಮಾ ಸುದ್ದಿ

ರಮೇಶ್ ಅರವಿಂದ್ ಅಭಿನಯದ 'ಶಿವಾಜಿ ಸುರತ್ಕಲ್-2 ಹೊಸ ಫೋಸ್ಟರ್ ಬಿಡುಗಡೆ

ನಟ ರಮೇಶ್ ಅರವಿಂದ್ ನಟನೆಯ' ಶಿವಾಜಿ ಸುರತ್ಕಲ್' ಚಿತ್ರದ ಎರಡನೇ ಭಾಗದ ಹೊಸ ಫೋಸ್ಟರ್ ಬಿಡುಗಡೆಯಾಗಿದೆ. 21 ದಿನಗಳ ಚಿತ್ರೀಕರಣದ ನಂತರ ಮಹಾಶಿವರಾತ್ರಿ ದಿನವಾದ ಇಂದು ಸಿನಿಮಾದ ಎರಡನೇ ಪೋಸ್ಟರ್ ನ್ನು ಚಿತ್ರ ತಂಡ ಬಿಡುಗಡೆ ಮಾಡಿದೆ.

ಬೆಂಗಳೂರು: ನಟ ರಮೇಶ್ ಅರವಿಂದ್ ನಟನೆಯ' ಶಿವಾಜಿ ಸುರತ್ಕಲ್' ಚಿತ್ರದ ಎರಡನೇ ಭಾಗದ ಹೊಸ ಫೋಸ್ಟರ್ ಬಿಡುಗಡೆಯಾಗಿದೆ. 21 ದಿನಗಳ ಚಿತ್ರೀಕರಣದ ನಂತರ ಮಹಾಶಿವರಾತ್ರಿ ದಿನವಾದ ಇಂದು ಸಿನಿಮಾದ ಎರಡನೇ ಪೋಸ್ಟರ್ ನ್ನು ಚಿತ್ರ ತಂಡ ಬಿಡುಗಡೆ ಮಾಡಿದೆ. ಕಳೆದ ಎರಡು ವರ್ಷಗಳ ಹಿಂದೆ 2020ರಲ್ಲಿ ಶಿವಾಜಿ ಸುರತ್ಕಲ್ ಸಿನಿಮಾದ ಮೊದಲ ಭಾಗ ಮಹಾಶಿವರಾತ್ರಿಯಂದೇ ತೆರೆ ಕಂಡಿತ್ತು. 

ಆಕಾಶ್ ಶ್ರೀವತ್ಸ ನಿರ್ದೇಶನದ ಶಿವಾಜಿ ಸುರತ್ಕಲ್ ಎರಡನೇ ಭಾಗದಲ್ಲೂ ರಮೇಶ್ ಅರವಿಂದ್ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶಿವಾಜಿಯ ವೈಯಕ್ತಿಕ ಜೀವನವನ್ನು ಸಹ ಹೇಳಲಾಗುತ್ತಿದೆ. ಈ ಬಾರಿ 'ದಿ ಮಿಸ್ಟೀರಿಸ್ ಕೇಸ್ ಆಫ್ ಮಾಯಾವಿ' ಭೇದಿಸಲು ಸಜ್ಜಾಗಿದ್ದಾರೆ. ನಾಸೀರ್ ಶಿವಾಜಿ ತಂದೆ ವಿಜಯೇಂದ್ರ ಸುರತ್ಕಲ್ ಪಾತ್ರವನ್ನು ನಿಭಾಯಿಸುತ್ತಿದ್ದು, ರಮೇಶ್ ಅರವಿಂದ್ ಅವರೊಂದಿಗೆ ಪ್ರಥಮ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಎಂದು ಆಕಾಶ್ ತಿಳಿಸಿದ್ದಾರೆ. 

ಶಿವಾಜಿ ಮಗಳಾದ ಸಿರಿ ಸುರತ್ಕಲ್ ಕೂಡಾ ಕಾಣಿಸಿಕೊಳ್ಳಲಿದ್ದಾರೆ. ತನ್ನ ಮುದ್ದಿನ ಮಗಳನ್ನು ಚುಕ್ಕಿ ಎಂದು ಶಿವಾಜಿ ಕರೆಯುತ್ತಾರೆ. ಅಲ್ಲಿ ಶಿವಾಜಿಗೆ ಸಿಕ್ಕಿದ್ದೆಲ್ಲಿ ಎಂಬ ಪ್ರಶ್ನೆಗೂ ಈ ಚಿತ್ರದಲ್ಲಿ ಉತ್ತರ ಸಿಗಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.  ಸುರತ್ಕಲ್, ಮಲ್ಫೆ ಬೀಚ್, ಕಾಪು ಬೀಚ್, ಮರವಂತೆ, ಮುರ್ಡೇಶ್ವರ ಮತ್ತಿತರ ಕಡೆಗಳಲ್ಲಿ ಈಗಾಗಲೇ ಚಿತ್ರೀಕರಣ ಪೂರೈಸಲಾಗಿದೆ.

ಶಿವಾಜಿ ಸುರತ್ಕಲ್ ಎರಡನೇ ಭಾಗದಲ್ಲಿ ರಘು ರಾಮಣ್ಣಕೊಪ್ಪ, ರಾಧಿಕಾ ನಾರಾಯಣ್, ಮೇಘಾನ ಗಾಂವಕ್ಕರ್, ದೀಪಾ ಕಾಮತ್, ಶೋಭ್ ರಾಜ್ ಮತ್ತಿತರರು ನಟಿಸಿದ್ದಾರೆ.  ಈ ಚಿತ್ರಕ್ಕೆ ದರ್ಶನ್ ಅಂಬಾಟ್ ಅವರ ಛಾಯಾಗ್ರಹಣವಿದ್ದು, ನಕುಲ್  ಅಭಯಂಕರ್ ಸಂಗೀತ ಸಂಯೋಜಿಸಿದ್ದಾರೆ. ರೇಖಾ ಕೆ.ಎನ್. ಮತ್ತು ಅನುಫ್ ಗೌಡ ಅವರು ಅಂಜನಾದ್ರಿ ಸಿನಿ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT