ಉತ್ತರಕಾಂಡ ಚಿತ್ರದ ಮುಹೂರ್ತ ಸಮಾರಂಭದಲ್ಲಿ ವಿಜಯ್ ಕಿರಗಂದೂರು, ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಚಿತ್ರ ತಂಡ. 
ಸಿನಿಮಾ ಸುದ್ದಿ

'ಉತ್ತರಕಾಂಡ' ಚಿತ್ರದಲ್ಲಿನ ಪಾತ್ರಕ್ಕೆ ರಮ್ಯಾ ಅವರೇ ಸೂಕ್ತ ನಟಿ: ನಿರ್ದೇಶಕ ರೋಹಿತ್ ಪದಕಿ

ಇತ್ತೀಚೆಗಷ್ಟೆ ತಮ್ಮದೇ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆಹನಿಯೇ’ ಚಿತ್ರದ ನಾಯಕಿ ಪಾತ್ರದಿಂದ ಹಿಂದೆ ಸರಿದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದ. ಸ್ಯಾಂಡಲ್‌ವುಡ್‌ನ ಮೋಹಕತಾರೆ ರಮ್ಯಾ ಅವರು ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದು, ಡಾಲಿ ಧನಂಜಯ್‌ ಅಭಿನಯದ ‘ಉತ್ತರಕಾಂಡ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಬೆಂಗಳೂರು: ಇತ್ತೀಚೆಗಷ್ಟೆ ತಮ್ಮದೇ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆಹನಿಯೇ’ ಚಿತ್ರದ ನಾಯಕಿ ಪಾತ್ರದಿಂದ ಹಿಂದೆ ಸರಿದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದ. ಸ್ಯಾಂಡಲ್‌ವುಡ್‌ನ ಮೋಹಕತಾರೆ ರಮ್ಯಾ ಅವರು ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದು, ಡಾಲಿ ಧನಂಜಯ್‌ ಅಭಿನಯದ ‘ಉತ್ತರಕಾಂಡ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರದ ಕುರಿತು ಮಾತನಾಡಿರುವ ನಿರ್ದೇಶಕ ರೋಹಿತ್ ಪದಕಿಯವರು, ಚಿತ್ರದ ನಾಯಕಿ ಪಾತ್ರಕ್ಕೆ ಹುಡುಕಾಟ ಆರಂಭಿಸಿದ್ದೆವು. ಚಿತ್ರದಲ್ಲಿ ನಾಯಕಿ ಪಾತ್ರ ಬಲವಾಗಿದ್ದು, ಪಾತ್ರಕ್ಕೆ ರಮ್ಯಾ ಅವರು ಅತ್ಯುತ್ತಮ ಆಯ್ಕೆಯಾಗಿದ್ದರು. ರತ್ನನ್‌ ಪ್ರಪಂಚ ಚಿತ್ರದಲ್ಲೂ ನಟಿಸಲು ರಮ್ಯಾ ಅವರನ್ನು ಸಂಪರ್ಕಿಸಲಾಗಿತ್ತು. ಆದರೆ, ಅವರು ತಿರಸ್ಕರಿಸಿದ್ದರು. ಈ ಬಾರಿ ಉತ್ತರಕಾಂಡ ಚಿತ್ರಕ್ಕೆ ಒಪ್ಪಿಕೊಂಡಿದ್ದಾರೆಂದು ಹೇಳಿದ್ದಾರೆ.

ಗ್ಯಾಂಗ್‌ಸ್ಟರ್ ಡ್ರಾಮಾ ಚಿತ್ರವೊಂದರಲ್ಲಿ ರಮ್ಯಾ ಅವರು ಮೊದಲ ಬಾರಿಗೆ ನಟಿಸುತ್ತಿದ್ದು, ಚಿತ್ರದಲ್ಲಿ 30ರ ದಶಕದ ಆರಂಭದಲ್ಲಿ ಗ್ರಾಮೀಣ ಮಹಿಳೆ ಪಾತ್ರದಲ್ಲಿ ರಮ್ಯಾ ನಟಿಸುತ್ತಿದ್ದಾರೆ. 'ಉತ್ತರಕಾಂಡ' ಮಾಸ್ ಎಂಟರ್‌ಟೈನರ್ ಆಗಿ ಮೂಡಿಬರುತ್ತಿದ್ದು, ಚಿತ್ರ ಸಂಪೂರ್ಣ ಉತ್ತರಕರ್ನಾಟಕದ ಸೊಗಡಲ್ಲಿ, ಭಾಷೆಯಲ್ಲಿ ಇರುತ್ತದೆ ಹಾಗೂ ಅಲ್ಲಿಯೇ ಚಿತ್ರೀಕರಣವಾಗಲಿದೆ. ‘ಈ ಚಿತ್ರ ಮನುಷ್ಯನ ವಿಲಕ್ಷಣ ಮನಸ್ಸಿನ ಹೋರಾಟವನ್ನ ಬಿಂಬಿಸುತ್ತದೆ. ಸರಿ ತಪ್ಪುಗಳ ಸಿದ್ದಾಂತ, ಅಹಂಕಾರಗಳ ಗುದ್ದಾಟ. ಉತ್ತರಕರ್ನಾಟಕದ ಅದ್ಬುತ ಬದುಕಿನ ನಡುವೆ ನಡೆಯುವ ಕಥೆ ಹೇಳುತ್ತಿರುವುದು ನನಗೆ ದೊಡ್ಡ ಸವಾಲು ಮತ್ತು ಜವಾಬ್ದಾರಿ’ ಎಂದು ತಿಳಿಸಿದ್ದಾರೆ.

ರಮ್ಯಾ, ಧನಂಜಯ್

ರಮ್ಯಾ ಮತ್ತು ಧನಂಜಯ್ ಅವರನ್ನು ಹೊರತುಪಡಿಸಿ ದೊಡ್ಡ ತಾರಾಬಳಗವನ್ನು ಚಿತ್ರದಲ್ಲಿ ತರಲು ನಿರ್ದೇಶಕರು ಯೋಜಿಸುತ್ತಿದ್ದು, ಹಲವು ಕಲಾವಿದರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಇಂತಹ ಉತ್ತಮ ಚಿತ್ರತಂಡದೊಂದಿಗೆ ಬೆಳ್ಳಿತೆರೆಗೆ ಮರಳುತ್ತಿರುವುದು ಸಂತಸ ತಂದಿದೆ: ರಮ್ಯಾ

ತಮ್ಮ ಕಮ್ ಬ್ಯಾಕ್ ಚಿತ್ರ 'ಉತ್ತರಕಾಂಡ' ಕುರಿತು ಮಾತನಾಡಿದ ನಟಿ ರಮ್ಯಾ ಅವರು, ‘ರತ್ನನ್ ಪ್ರಪಂಚ’ ಚಿತ್ರಕ್ಕೆ ನಾಯಕಿಯ ಪಾತ್ರವನ್ನು ನನಗೆ ಕೇಳಿದಾಗ ಕಾರಣಾಂತರಗಳಿಂದ ಅದನ್ನು ಒಪ್ಪಿಕೊಳ್ಳಲಾಗಿರಲಿಲ್ಲ. ನನಗೆ ಅತ್ಯಂತ ಆಪ್ತವಾದ ಸಿನಿಮಾ ರತ್ನನ್ ಪ್ರಪಂಚ. ಅಂತಹ ಒಳ್ಳೆಯ ತಂಡದ ಜೊತೆ ಕೈ ಜೋಡಿಸಲು ಖುಷಿಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ತಂಡದ ಜೊತೆಗಿನ ಒಡನಾಟ ಮತ್ತು ತಂಡದವರೆಲ್ಲರೂ ನನ್ನ ಮೇಲೆ ತೋರುತ್ತಿರುವ ಅಭಿಮಾನ ಒಳ್ಳೆಯ ಜಾಗದಲ್ಲಿರುವೆ ಎಂಬ ಭಾವನೆ ನೀಡುತ್ತಿದೆ ಎಂದು ರಮ್ಯಾ ಹೇಳಿದ್ದಾರೆ.

ಸ್ಯಾಂಡಲ್‌ವುಡ್ ಕ್ವೀನ್ ಜೊತೆ ತೆರೆ ಹಂಚಿಕೊಳ್ಳುವ ಕನಸು ನನಸಾಗುತ್ತಿದೆ: ಧನಂಜಯ್
"ಉತ್ತರಕಾಂಡ'ದಲ್ಲಿ ನಾನು ಮಾಡಿದ ಕಠಿಣ ಪಾತ್ರಗಳಲ್ಲಿ ಒಂದಾಗಿದೆ, "ಸಮಾನ ಮನಸ್ಸಿನವರು ಒಟ್ಟಾಗಿ ಸೇರಿದಾಗ ಮತ್ತು ಅವರು ನಿಸ್ವಾರ್ಥವಾಗಿ ಚಿತ್ರರಂಗಕ್ಕೆ ಕೊಡುಗೆ ನೀಡಿದಾಗ ಪವಾಡಗಳು ಸಂಭವಿಸುತ್ತವೆ ಎಂಬುದನ್ನು ನಾನು ನಂಬುತ್ತೇನೆ. ನಿರ್ದೇಶಕ ರೋಹಿತ್ ಪದಕಿ ಅವರೊಂದಿಗೆ ನಾನು ಮಾಡುತ್ತಿರುವ ಎರಡನೇ ಚಿತ್ರ ಇದಾಗಿದೆ. ನಿರ್ಮಾಪಕರಾದ ಕಾರ್ತಿಕ್ ಮತ್ತು ಯೋಗಿ ಅವರೊಂದಿಗೆ ಹ್ಯಾಟ್ರಿಕ್ ಚಿತ್ರವಾಗಲಿದೆ. 'ಉತ್ತರಕಾಂಡ' ಮತ್ತೊಂದು ದಿಟ್ಟ ಹೆಜ್ಜೆಯಾಗಿದ್ದು,  ಮತ್ತೊಂದು ಮೈಲಿಗಲ್ಲಿನತ್ತ ಸಾಗುವ ಭರವಸೆಯಲ್ಲಿದ್ದೇನೆ. ನಮ್ಮ ಸ್ಯಾಂಡಲ್ ವುಡ್ ಕ್ವೀನ್ ಜೊತೆ ತೆರೆ ಹಂಚಿಕೊಳ್ಳುವ ಕನಸು ಈ ಸಿನಿಮಾದ ಮೂಲಕ ನನಸಾಗುತ್ತಿದೆ ಎಂದು ಡಾಲಿ ಧನಂಜಯ್ ಅವರು ಹೇಳಿದ್ದಾರೆ.

‘ಉತ್ತರಕಾಂಡ’ ಸಿನಿಮಾವನ್ನು ವಿಜಯ್ ಕಿರಗಂದೂರು ಅರ್ಪಿಸುತ್ತಿದ್ದು, ವಿಜಯ್ ಕಿರಗಂದೂರು ಹೊಂಬಾಳೆಯ ಅಂಗಸಂಸ್ಥೆ ಕೆ.ಆರ್.ಜಿ. ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಚಿತ್ರವನ್ನು ರೋಹಿತ್ ಪದಕಿ ನಿರ್ದೇಶಿಸುತ್ತಿದ್ದಾರೆ. 2023ರಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗುತ್ತಿದ್ದು, ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT