ಕಂಬ್ಳಿಹುಳ ಚಿತ್ರದ ಸ್ಟಿಲ್. 
ಸಿನಿಮಾ ಸುದ್ದಿ

ಸ್ಯಾಂಡಲ್ ವುಡ್ ಗಮನ ಸೆಳೆದ 'ಕಂಬ್ಳಿಹುಳ'

ನವೆಂಬರ್ 4 ರಂದು ಬಿಡುಗಡೆಯಾದ ಕಂಬ್ಳಿಹುಳ ಚಿತ್ರ ನಿಧಾನಗತಿಯಲ್ಲಿ ಪ್ರೇಕ್ಷಕರು ಹಾಗೂ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳ ಗಮನ ಸೆಳೆಯುತ್ತಿದೆ.

ನವೆಂಬರ್ 4 ರಂದು ಬಿಡುಗಡೆಯಾದ ಕಂಬ್ಳಿಹುಳ ಚಿತ್ರ ನಿಧಾನಗತಿಯಲ್ಲಿ ಪ್ರೇಕ್ಷಕರು ಹಾಗೂ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳ ಗಮನ ಸೆಳೆಯುತ್ತಿದೆ.

ಚಿತ್ರಕ್ಕೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟರಾದ ಅಭಿಷೇಕ್ ಅಂಬರೀಶ್, ರತ್ನನ್ ಪ್ರಪಂಚ ಖ್ಯಾತಿಯ ಪ್ರಮೋದ್, ಸತೀಶ್ ನೀನಾಸಂ, ಅಯೋಗ್ಯ ನಿರ್ದೇಶಕ ಮಹೇಶ್ ಕುಮಾರ್ ಸೇರಿದಂತೆ ವಿವಿಧ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನವೀನ್ ಶ್ರೀನಿವಾಸ್ ಅವರು ನಿರ್ದೇಶಿಸಿರುವ ಮೊದಲ ಚಿತ್ರ ಕಂಬ್ಳಿಹುಳ ಆಗಿದ್ದು, ಮೊದಲ ಚಿತ್ರದಲ್ಲಿಯೇ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಹಲವು ಗಣ್ಯರು ಚಿತ್ರ ಪ್ರೇಕ್ಷಕರ ಸ್ನೇಹಿಯಾಗಿದ್ದು, ಇದು ನಿಜವಾದ ಪ್ರಯತ್ನ ಎಂದು ಶ್ಲಾಘಿಸಿದ್ದಾರೆ.

ಹದಿಹರೆಯದ ಪ್ರಣಯ ಹಾಗೂ ಮಲೆನಾಡು ಹಿನ್ನೆಲೆಯುಳ್ಳ ಈ ಚಿತ್ರಕ್ಕೆ ಅಂಜನ್ ನಾಗೇಂದ್ರ ಮತ್ತು ಅಶ್ವಿತಾ ಹೆಗ್ಡೆ ನಾಯಕ ಹಾಗೂ ನಾಯಕಿಯಾಗಿ ನಟಿಸಿದ್ದಾರೆ.

ಚಿತ್ರಕ್ಕೆ ನಿರ್ದೇಶಕ ನವೀನ್ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದು, ಚಿತ್ರದಲ್ಲಿ ರೋಹಿತ್ ಕುಮಾರ್, ದೀಪಕ್ ರೈ ಪಣಜಿ ಮತ್ತು ಸಂಧ್ಯಾ ನಿನಾಸಂ ಪೋಷಕ ಪಾತ್ರಗಳನ್ನು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಶಿವಪ್ರಸಾದ್ ಸಂಗೀತ ಸಂಯೋಜಿಸಿದ್ದು, ಸತೀಶ್ ರಾಜೇಂದ್ರ ಛಾಯಾಗ್ರಾಹಣ, ರಾಘವೇಂದ್ರ ಟಿ.ಕೆ. ಸಂಕಲನ ಸಿನಿಮಾಕ್ಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran war: ಬುಶೆಹರ್ ಅಣುಸ್ಥಾವರದ ಮೇಲೆ ಅಮೆರಿಕ-ಇಸ್ರೇಲ್ ಕ್ಷಿಪಣಿ ದಾಳಿ, ಓರ್ವ ಸಾವು

ಇರಾನ್-ಇಸ್ರೇಲ್ ಯುದ್ಧದ ನಡುವೆ ಭಾರತದ ರಕ್ಷಣಾ ರಫ್ತು ಇತಿಹಾಸದಲ್ಲೇ ದಾಖಲೆಯ ಏರಿಕೆ!, ಖರೀದಿದಾರರು ಯಾರು?

ಭಾರತದತ್ತ ಹೊರಟಿದ್ದ ಇರಾನ್ ತೈಲ ಹೊತ್ತ ಹಡಗು ಏಕಾಏಕಿ ಚೀನಾಗೆ ರೀ-ರೂಟ್; ಕೇಂದ್ರ ಹೇಳಿದ್ದೇನು?

Iran war ನಡುವೆಯೂ ಭಾರತ ದೇಶೀಯ ಮತ್ತು ಬಾಹ್ಯ ಸವಾಲುಗಳ ಯಶಸ್ವಿಯಾಗಿ ನಿರ್ವಹಿಸಿದೆ: EAM Jaishankar

'ನಾನು ಸಂಸತ್ತಿಗೆ ಹೋಗುವುದು ಗದ್ದಲ ಸೃಷ್ಟಿಸಲು ಅಲ್ಲ': AAP ಆರೋಪಗಳನ್ನು ತಳ್ಳಿಹಾಕಿದ ರಾಘವ್ ಚಡ್ಡಾ

SCROLL FOR NEXT