ರಶ್ಮಿಕಾ ಮಂದಣ್ಣ 
ಸಿನಿಮಾ ಸುದ್ದಿ

'ಹೃದಯ ಚೂರಾಗಿ ಹೋಗುತ್ತದೆ, ಇಷ್ಟು ದಿನ ಎಲ್ಲವನ್ನೂ ಮೌನವಾಗಿ ಸಹಿಸಿಕೊಂಡೆ': ರಶ್ಮಿಕಾ ಮಂದಣ್ಣ ಹೀಗೆ ಹೇಳಿದ್ದೇಕೆ?

'ಕಾಂತಾರ' ಚಿತ್ರದ(Kantara film) ಯಶಸ್ವಿ ನಿರ್ದೇಶನ, ನಟನೆ ಮೂಲಕ ಇಡೀ ಭಾರತದಲ್ಲಿ ಮಾತ್ರವೇಕೆ ವಿದೇಶದಲ್ಲಿಯೂ ಹೆಸರುಗಳಿಸಿರುವ ರಿಷಬ್ ಶೆಟ್ಟಿಯವರ(Rishab Shetty) ಕಿರಿಕ್ ಪಾರ್ಟಿ(Kirik party) ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದವರು ಕೊಡಗು ಮೂಲದ ಕನ್ನಡತಿ ರಶ್ಮಿಕಾ ಮಂದಣ್ಣ.

'ಕಾಂತಾರ' ಚಿತ್ರದ(Kantara film) ಯಶಸ್ವಿ ನಿರ್ದೇಶನ, ನಟನೆ ಮೂಲಕ ಇಡೀ ಭಾರತದಲ್ಲಿ ಮಾತ್ರವೇಕೆ ವಿದೇಶದಲ್ಲಿಯೂ ಹೆಸರುಗಳಿಸಿರುವ ರಿಷಬ್ ಶೆಟ್ಟಿಯವರ(Rishab Shetty) ಕಿರಿಕ್ ಪಾರ್ಟಿ(Kirik party) ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದವರು ಕೊಡಗು ಮೂಲದ ಕನ್ನಡತಿ ರಶ್ಮಿಕಾ ಮಂದಣ್ಣ.

2016ರಲ್ಲಿ ಬಿಡುಗಡೆಯಾದ ಕಿರಿಕ್ ಪಾರ್ಟಿ ಚಿತ್ರ ಭಾರೀ ಯಶಸ್ಸನ್ನು ಗಳಿಸಿ ಅದರಲ್ಲಿ ನಟಿಸಿದ ನಾಯಕ ರಕ್ಷಿತ್ ಶೆಟ್ಟಿ ಮತ್ತು ನಾಯಕಿ ರಶ್ಮಿಕಾ ಮಂದಣ್ಣ(Rashmika Mandanna) ಅವರಿಗೆ ನಿಜ ಜೀವನದಲ್ಲಿ ಪ್ರೀತಿ ಹುಟ್ಟಿ ಜೋಡಿಯು ಅದ್ದೂರಿಯಾಗಿ ನಿಶ್ಚಿತಾರ್ಥ ಕೂಡ ಮಾಡಿಕೊಂಡಿತ್ತು.

ಎಲ್ಲವೂ ಚೆನ್ನಾಗಿ ಸಾಗುತ್ತಿದೆ, ಇನ್ನು ಕೆಲವು ವರ್ಷಗಳಲ್ಲಿ ಈ ಜೋಡಿ ವಿವಾಹ ಬಂಧನಕ್ಕೆ ಒಳಗಾಗಲಿದೆ ಎಂದು ಅಭಿಮಾನಿಗಳು ಖುಷಿಯಲ್ಲಿದ್ದಾಗಲೇ ಹೃದಯ ಚೂರು ಮಾಡುವಂಥ ಸುದ್ಧಿ ಹೊರಬಂತು, ಅದು ಬ್ರೇಕಪ್, ಎಷ್ಟು ಬೇಗನೆ ನಿಶ್ಚಿತಾರ್ಥ ಮಾಡಿಕೊಂಡಿತೋ ಅಷ್ಟೇ ಸುಲಭವಾಗಿ ಈ ಜೋಡಿ ದೂರವಾದರು.

ರಶ್ಮಿಕಾ ಮಂದಣ್ಣಗೆ ತೆಲುಗಿನಿಂದ ದೊಡ್ಡ ಆಫರ್ ಗಳು ಬರಲಾರಂಭಿಸಿದರು. ವಿಜಯ್ ದೇವರಕೊಂಡ ಜೊತೆ ಮಾಡಿದ ಚಿತ್ರಗಳು ಹಿಟ್ ಆದವು, ಅಲ್ಲಿಯೇ ಬ್ಯುಸಿಯಾಗಿಬಿಟ್ಟು ಕನ್ನಡ, ಸ್ಯಾಂಡಲ್ ವುಡ್ ಗೆ ದೂರವಾದರು. ರಕ್ಷಿತ್ ಶೆಟ್ಟಿ ಜೊತೆಗೆ ಬ್ರೇಕಪ್ ಯಾವಾಗ ಆಯಿತೋ ಅಲ್ಲಿಂದ ರಕ್ಷಿತ್ ಅಭಿಮಾನಿಗಳು, ಕನ್ನಡಿಗರು ಅವರನ್ನು ಬೈಯುತ್ತಾ, ಇಂಟರ್ನೆಟ್, ಸೋಷಿಯಲ್ ಮೀಡಿಯಾದಲ್ಲಿ ದ್ವೇಷದ ರೀತಿ ಕಮೆಂಟ್ ಗಳನ್ನು ಮಾಡುತ್ತಾ ಬಂದರು.

ಒಂದಿಲ್ಲೊಂದು ಕಾರಣಕ್ಕೆ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್​ ಆಗುತ್ತಲೇ ಇರುತ್ತಾರೆ. ಸೋಶಿಯಲ್​ ಮೀಡಿಯಾದಲ್ಲಿ ಒಂದು ವರ್ಗದ ಜನರು ಯಾವಾಗಲೂ ಅವರನ್ನು ಟಾರ್ಗೆಟ್​ ಮಾಡುತ್ತಾ ನೆಗೆಟಿವ್ ಕಮೆಂಟ್ ಗಳನ್ನು ಮಾಡುತ್ತಲೇ ಇರುತ್ತಾರೆ. 

ರಶ್ಮಿಕಾ ಮಂದಣ್ಣ ಕೈಯಲ್ಲಿ ಸಾಕಷ್ಟು ಸಿನಿಮಾಗಳಿದ್ದರೂ, ಬಾಲಿವುಡ್ ನಲ್ಲಿ ಅಮಿತಾಬ್ ಬಚ್ಚನ್ ಎದುರು ನಟಿಸಿದರೂ ಅವರನ್ನು ಹೇಟ್ ಮಾಡುವವರು, ಕೆಟ್ಟದಾಗಿ ಕಮೆಂಟ್ ಮಾಡುವವರ ಸಂಖ್ಯೆಗೇನೂ ಕೊರತೆಯಿಲ್ಲ. ಎಷ್ಟೇ ದೊಡ್ಡ ಅವಕಾಶ ಪಡೆದುಕೊಂಡರೂ ಬೆನ್ನು ತಟ್ಟುವ ಬದಲು ಕೆಲವರು ದ್ವೇಷಿಸುವ ಕಾಯಕವನ್ನೇ ಮಾಡಿಕೊಂಡು ಬರುತ್ತಿದ್ದಾರೆ. ತೀರಾ ಇತ್ತೀಚೆಗೆ ಕಾಂತಾರ ಸಿನಿಮಾ ನೋಡಿದ್ದೀರಾ ಎಂದು ಏರ್ ಪೋರ್ಟ್ ನಲ್ಲಿ ಪತ್ರಕರ್ತರು ಕೇಳಿದಾಗ ಅವರು ಕೊಟ್ಟ ಉತ್ತರ ಕೂಡ ಟ್ರೋಲ್ ಆಗಿತ್ತು. ಏನೇ ಹೇಳಿದರೂ ನಕ್ಕು ಅಥವಾ ನಿರ್ಲಕ್ಷ್ಯ ಮಾಡಿ ಸುಮ್ಮನಾಗುತ್ತಿದ್ದ ಈ ನ್ಯಾಷನಲ್ ಕ್ರಷ್ ಇದೀಗ ಕೊನೆಗೂ ನೊಂದು ಬಹಿರಂಗವಾಗಿ ಬರೆದಿದ್ದಾರೆ. ತಮಗಾಗುತ್ತಿರುವ ನೋವಿನ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ತೋಡಿಕೊಂಡಿದ್ದಾರೆ. 

ಇತ್ತೀಚಿನ ವರ್ಷಗಳಲ್ಲಿ ನನಗೆ ಕೆಲವು ವಿಚಾರಗಳು ಸಾಕಷ್ಟು ತೊಂದರೆ ನೀಡಿವೆ. ಈ ಬಗ್ಗೆ ನಾನು ಮೊದಲೇ ಮಾತನಾಡಬೇಕಿತ್ತು ಎಂದು ಬರಹ ಆರಂಭಿಸಿದ್ದಾರೆ. ‘ವೃತ್ತಿ ಜೀವನ ಆರಂಭ ಆದಾಗಿನಿಂದಲೂ ನನ್ನನ್ನು ದ್ವೇಷಿಸಲಾಗುತ್ತಿದೆ. ಟ್ರೋಲ್​ ಮತ್ತು ನೆಗೆಟಿವಿಟಿಗೆ ನಾನು ಪಂಜಿಂಗ್​ ಬ್ಯಾಗ್​ ರೀತಿ ಆಗಿದ್ದೇನೆ. ನಾನು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರ ಹಾಗಿದೆ. ಎಲ್ಲರೂ ನನ್ನನ್ನು ಪ್ರೀತಿಸಲೇಬೇಕು ಅಂತೇನಿಲ್ಲ. ನನ್ನ ಬಗ್ಗೆ ನಿಮಗೆ ಸಹಮತ ಇಲ್ಲ ಎಂದ ಮಾತ್ರಕ್ಕೆ ನೀವು ನೆಗೆಟಿವಿಟಿ ಹಬ್ಬಿಸಬಹುದು ಅಂತ ಅರ್ಥವಲ್ಲ.

‘ನಿಮ್ಮೆಲ್ಲರನ್ನು ರಂಜಿಸಲು ನಾನು ಸತತ ಶ್ರಮಪಡುತ್ತಿದ್ದೇನೆ. ಆ ಕೆಲಸದ ಬಗ್ಗೆ ನಾನು ಹೆಚ್ಚು ಯೋಚಿಸುತ್ತೇನೆ. ನಾನು ಮತ್ತು ನೀವು ಇಬ್ಬರೂ ಹೆಮ್ಮೆ ಪಡುವಂತಹ ಕೆಲಸ ಮಾಡಲು ನಾನು ಪ್ರಯತ್ನಿಸುತ್ತಿದ್ದೇನೆ. ನಾನು ಹೇಳಿಲ್ಲದೇ ಇರುವ ವಿಚಾರಕ್ಕೆ ನನ್ನನ್ನು ಟ್ರೋಲ್​ ಮಾಡುತ್ತಿರುವುದು ನಿಜಕ್ಕೂ ನೋವಿನ ಸಂಗತಿ ಎಂದು ಬೇಸರ ತೋಡಿಕೊಂಡಿದ್ದಾರೆ.

‘ಸಂದರ್ಶನಗಳಲ್ಲಿ ನಾನು ಹೇಳಿದ್ದನ್ನು ನನ್ನ ವಿರುದ್ಧವೇ ತಿರುಗಿಸಲಾಗಿದೆ. ನನಗೆ ಮತ್ತು ನನ್ನ ಸಂಬಂಧಗಳಿಗೆ ಹಾನಿ ಆಗುವಂತಹ ತಪ್ಪು ಕಥೆಗಳನ್ನು ಇಂಟರ್​ನೆಟ್​ನಲ್ಲಿ ಹರಡಿಸಲಾಗಿದೆ. ಒಳ್ಳೆಯ ಟೀಕೆಯನ್ನು ನಾನು ಸ್ವಾಗತಿಸುತ್ತೇನೆ. ಅದರಿಂದ ಬೆಳವಣಿಗೆ ಸಾಧ್ಯ. ಆದರೆ ನೆಗೆಟಿವಿಟಿ ಮತ್ತು ದ್ವೇಷದಿಂದ ಏನು ಸಾಧ್ಯ’ ಎಂದು ರಶ್ಮಿಕಾ ಪ್ರಶ್ನಿಸಿದ್ದಾರೆ.

ನನ್ನ ಸುತ್ತಲಿರುವ ಎಲ್ಲರಿಗೂ, ನಾನು ಇಲ್ಲಿಯವರೆಗೆ ಕೆಲಸ ಮಾಡಿದ ಜನರ ಮೇಲೆ ನನಗೆ ಪ್ರೀತಿ ಇದೆ, ಅವರೆಲ್ಲರನ್ನೂ ನಾನು ಯಾವಾಗಲೂ ಮೆಚ್ಚುತ್ತೇನೆ. ನಾನು ಕಷ್ಟಪಟ್ಟು ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ. ನಿಮಗಾಗಿ ಉತ್ತಮವಾಗಿ ಮಾಡುತ್ತೇನೆ. ಏಕೆಂದರೆ ನಾನು ಹೇಳಿದಂತೆ ನಿಮ್ಮನ್ನು ಸಂತೋಷಪಡಿಸುವುದು - ನನಗೆ ಸಂತೋಷವನ್ನು ನೀಡುತ್ತದೆ. ಎಲ್ಲರೂ ದಯೆಯಿಂದಿರಿ. ನಾವೆಲ್ಲರೂ ನಮ್ಮ ಕೈಲಾದದ್ದನ್ನು ಮಾಡಲು ಪ್ರಯತ್ನಿಸೋಣ ಎಂದು ಹೇಳಿ ಮುಗಿಸಿದ್ದಾರೆ ರಶ್ಮಿಕಾ.

ರಶ್ಮಿಕಾ ಮಂದಣ್ಣ ಅವರ ಈ ಬರಹ ವೈರಲ್​ ಆಗಿದೆ. ದುಲ್ಕರ್​ ಸಲ್ಮಾನ್​, ತಾನ್ಯಾ ಹೋಪ್​ ಮುಂತಾದ ಸೆಲೆಬ್ರಿಟಿಗಳು ಇದಕ್ಕೆ ಕಮೆಂಟ್​ ಮಾಡಿದ್ದಾರೆ. ಆ ಮೂಲಕ ರಶ್ಮಿಕಾಗೆ ಬೆಂಬಲ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT