ಶ್ರೇಯಸ್ ಮಂಜು 
ಸಿನಿಮಾ ಸುದ್ದಿ

ಶ್ರೇಯಸ್ ಮಂಜು ಒಂದು ಹಿತವಾದ ಆರೋಗ್ಯಕರ ಪ್ಯಾಕೇಜ್: ನಿರ್ದೇಶಕ ನಂದ ಕಿಶೋರ್

ದೊಡ್ಡ ಸ್ಟಾರ್‌ಗಳು ಮತ್ತು ಹೊಸ ಪ್ರತಿಭೆಗಳನ್ನು ಬಳಸಿಕೊಂಡು ನಿರ್ದೇಶನದ ನಡುವೆ ಸಮತೋಲನ ಸಾಧಿಸಿದ ಕೆಲವೇ ಕೆಲವು ನಿರ್ದೇಶಕರ ಪೈಕಿ ನಂದ ಕಿಶೋರ್ ಒಬ್ಬರು. ಅವರ ಮುಂಬರುವ ಚಿತ್ರವಾದ ರಾಣಾ ಸಿನಿಮಾದಲ್ಲಿ ನಾಯಕನಾಗಿ ಶ್ರೇಯಸ್ ಮಂಜು ಕಾಣಿಸಿಕೊಳ್ಳಲಿದ್ದಾರೆ.

ದೊಡ್ಡ ಸ್ಟಾರ್‌ಗಳು ಮತ್ತು ಹೊಸ ಪ್ರತಿಭೆಗಳನ್ನು ಬಳಸಿಕೊಂಡು ನಿರ್ದೇಶನದ ನಡುವೆ ಸಮತೋಲನ ಸಾಧಿಸಿದ ಕೆಲವೇ ಕೆಲವು ನಿರ್ದೇಶಕರ ಪೈಕಿ ನಂದ ಕಿಶೋರ್ ಒಬ್ಬರು. ಶರಣ್ ಅಭಿನಯದ ಅಧ್ಯಕ್ಷ ಚಿತ್ರದ ಮೂಲಕ ಪದಾರ್ಪಣೆ ಮಾಡಿದ ನಿರ್ದೇಶಕರು, ರನ್ನ ಸಿನಿಮಾದಲ್ಲಿ ಸುದೀಪ್, ಮುಕುಂದ ಮುರಾರಿಯಲ್ಲಿ ಉಪೇಂದ್ರ, ಪೊಗರು ಚಿತ್ರದಲ್ಲಿ ಧ್ರುವ ಸರ್ಜಾ, ಟೈಗರ್‌ನಲ್ಲಿ ಪ್ರದೀಪ್ ಬಾಗೋಡಿಯಾ, ಬೃಹಸ್ಪತಿಯಲ್ಲಿ ಮನುರಂಜನ್ ರವಿಚಂದ್ರನ್ ಅವರೊಂದಿಗೆ ಸಿನಿಮಾಗಳನ್ನು ಮಾಡಿದ್ದಾರೆ.

ಅವರ ಮುಂಬರುವ ಚಿತ್ರವಾದ ರಾಣಾ ಸಿನಿಮಾದಲ್ಲಿ ನಾಯಕನಾಗಿ ಶ್ರೇಯಸ್ ಮಂಜು ಕಾಣಿಸಿಕೊಳ್ಳಲಿದ್ದಾರೆ. 'ಸ್ಟಾರ್‌ಗಳನ್ನು ನಿಭಾಯಿಸುವುದು ತುಂಬಾ ಸುಲಭ ಏಕೆಂದರೆ, ನೀವು ಅವರನ್ನು ಪಾತ್ರಕ್ಕೆ ಹೊಂದಿಸಿಕೊಳ್ಳಬಹುದು. ಆದರೆ, ಪ್ರೇಕ್ಷಕರು ಆ ಪಾತ್ರದೊಂದಿಗೆ ಸಂಪರ್ಕ ಹೊಂದುವಂತೆ ಮಾಡುವಲ್ಲಿ ತೊಂದರೆ ಇರುತ್ತದೆ. ಅದೇ ರೀತಿ ಹೊಸಬರು ವಿಶಿಷ್ಟ ಪಾತ್ರಗಳಿಗೆ ಹೊಂದಿಕೊಳ್ಳುವುದು ಕಷ್ಟವಾದರೂ, ಪ್ರೇಕ್ಷಕರ ಮನಗೆಲ್ಲುವುದು ತುಂಬಾ ಸುಲಭ ಎನ್ನುತ್ತಾರೆ ನಂದ ಕಿಶೋರ್.

'ಇದು ನಾನು ವರ್ಷಗಳಿಂದ ನಾನು ಕಂಡುಕೊಂಡ ವಿಚಾರ. ಇಂದಿನ ಪ್ರೇಕ್ಷಕರು ಬುದ್ಧಿವಂತರಾಗಿದ್ದಾರೆ. ಅದರರ್ಥ ಪ್ರೇಕ್ಷಕರು ಸಿನಿಮಾವನ್ನು ಬೌದ್ಧಿಕವಾಗಿ ಅನುಭವಿಸಲು ನಿರ್ದೇಶಕರು ಅವರ ಕೆಲಸವನ್ನು ಬೆವರು ಸುರಿಸಿ ಮಾಡಬೇಕು ಎಂದರ್ಥವಲ್ಲ. ನಿರ್ದೇಶಕರಾಗಿ, ನಾವು ಮನರಂಜನೆಯ ಮೂಲಭೂತ ಅಂಶಗಳಿಗೆ ಅಂಟಿಕೊಳ್ಳಬೇಕು ಮತ್ತು ಅದನ್ನು ವಾಸ್ತವವಾಗಿ ಇಟ್ಟುಕೊಳ್ಳಬೇಕು' ಎಂದು ಅವರು ಹೇಳುತ್ತಾರೆ.

ರಾಣಾ ಸಿನಿಮಾ ಬಗ್ಗೆ ಮಾತನಾಡುವ ನಂದ ಕಿಶೋರ್, ನಾನು ಕಥೆಯನ್ನು ಬರೆದಿಲ್ಲ. ಬದಲಿಗೆ ನಿರ್ಮಾಪಕ ಕೆ. ಮಂಜು ಆಯ್ಕೆ ಮಾಡಿದ ಸ್ಕ್ರಿಪ್ಟ್‌ನೊಂದಿಗೆ ನಾನು ಮುಂದುವರಿಯುತ್ತಿದ್ದೇನೆ. ಚಿತ್ರದಲ್ಲಿ ಅವರ ಮಗ ಶ್ರೇಯಸ್ ಮಂಜು ನಟಿಸುತ್ತಿದ್ದಾರೆ. ರಾಣಾ ಸಿನಿಮಾವು ಊಹಿಸಲು ಅಸಾಧ್ಯವಾದ ಗುರಿಗಳನ್ನು ಹೊಂದಿರುವ ಯುವಕನ ಸರಳ ಕಥೆಯಾಗಿದೆ. ಆ ಗುರಿಗಳನ್ನು ಆತ ಹೇಗೆ ತಲುಪುತ್ತಾನೆ ಎಂಬುದೇ ಚಿತ್ರದ ಎಳೆ ಎಂದು ಅವರು ಹೇಳುತ್ತಾರೆ.

ಶ್ರೇಯಸ್ ಮಂಜು ಓರ್ವ ನಟನಾಗಿ, ಸಾಕಷ್ಟು ಸಾಮರ್ಥ್ಯವನ್ನು ಹೊಂದಿದ್ದಾರೆ ಮತ್ತು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾರೆ. ಶ್ರೇಯಸ್ ಮಂಜು ಒಂದು ಆರೋಗ್ಯಕರ ಪ್ಯಾಕೇಜ್. ಅವರು ಉತ್ತಮ ವ್ಯಕ್ತಿತ್ವವುಳ್ಳ ನಟ, ಉತ್ತಮ ನೃತ್ಯಗಾರ, ಸ್ಟಂಟ್‌ಗಳಲ್ಲಿ ಉತ್ತಮರು ಮತ್ತು ಉತ್ತಮ ಲುಕ್ ಅನ್ನು ಕೂಡ ಹೊಂದಿದ್ದಾರೆ. ಅವರು ಸಮರ್ಪಿತ ಮತ್ತು ಮಹತ್ವಾಕಾಂಕ್ಷೆಯುಳ್ಳವರು ಎನ್ನುತ್ತಾರೆ ನಂದ ಕಿಶೋರ್.

ಕೆ ಮಂಜು ಅವರ ಬ್ಯಾನರ್ ಅಡಿಯಲ್ಲಿ ಗುಜ್ಜಲ್ ಪುರುಷೋತ್ತಮ್ ನಿರ್ಮಿಸಿರುವ ಈ ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ ಮತ್ತು ರಜಿನಿ ಭಾರದ್ವಾಜ್, ರಘು ಮತ್ತು ಮೋಹನ್ ಧನರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ಮತ್ತು ಶೇಖರ್ ಚಂದ್ರ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT