ಪೆಪೆ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

ಫೈಟಿಂಗ್ ದೃಶ್ಯಗಳೊಂದಿಗೆ 'ಪೆಪೆ' ಕ್ಲೈಮ್ಯಾಕ್ಸ್ ಮುಗಿಸಿದ ವಿನಯ್ ರಾಜಕುಮಾರ್

ವಿನಯ್ ರಾಜ್‌ಕುಮಾರ್ ಹಲವು ಪ್ರಾಜೆಕ್ಟ್‌ಗಳ ನಡುವೆ ಜಗ್ಗಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಸಕಲೇಶಪುರದಲ್ಲಿ ಪೆಪೆ ಚಿತ್ರೀಕರಣವನ್ನು ಮುಗಿಸಿದ್ದಾರೆ.

ವಿನಯ್ ರಾಜ್‌ಕುಮಾರ್ ಹಲವು ಪ್ರಾಜೆಕ್ಟ್‌ಗಳ ನಡುವೆ ಜಗ್ಗಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಸಕಲೇಶಪುರದಲ್ಲಿ ಪೆಪೆ ಚಿತ್ರೀಕರಣವನ್ನು ಮುಗಿಸಿದ್ದಾರೆ. ನಿರ್ದೇಶಕ ಶ್ರೀಲೇಶ್ ನಾಯರ್ ಹಂಚಿಕೊಂಡ ಚಿತ್ರಗಳಲ್ಲಿ ವಿನಯ್ ಅವರ ತಂದೆ ರಾಘವೇಂದ್ರ ರಾಜ್‌ಕುಮಾರ್ ಮತ್ತು ಅವರ ಸಹೋದರ ಯುವರಾಜ್‌ಕುಮಾರ್ ಅವರು ಕುಟುಂಬದೊಂದಿಗೆ ಇದ್ದಾರೆ.

ಪೆಪೆ ಒಂದು ಗ್ಯಾಂಗ್ ಸ್ಟರ್ ಸಿನಿಮಾವಾಗಿದೆ, ಇದರಲ್ಲಿ ತೀವ್ರವಾದ ಫೈಟಿಂಗ್ ಸನ್ನಿವೇಶಗಳಿವೆ. ರವಿ ವರ್ಮಾ ಸಾಹಸ ನಿರ್ದೇಶನವಿದ್ದು, ಕ್ಲೈಮ್ಯಾಕ್ಸ್ ಫೈಟಿಂಗ್ ದೃಶ್ಯದಲ್ಲಿ 100 ಪೈಟರ್ ಗಳು ಭಾಗವಹಿಸಿದ್ದರು.

1970 ರಿಂದ 2020 ರ ಸಮಯದಲ್ಲಿ ಹೆಣೆಯಲಾದ ಕಥೆ ಇದಾಗಿದೆ,  ಕೂರ್ಗ್‌ನ ಹಿನ್ನೆಲೆಯಲ್ಲಿ ಹೆಣೆಯಲಾದ ಮನರಂಜನಾ ಚಿತ್ರವಾಗಿದೆ. ಪ್ರಮುಖ ಪಾತ್ರಗಳಲ್ಲಿ ಮೇದಿನಿ ಕೆಲ್ನೆ, ಯಶ್ ಶೆಟ್ಟಿ ಮತ್ತು ಕಾಜಲ್ ಕುಂದರ್‌ನಂತಹ ನಟರು ನಟಿಸಿದ್ದಾರೆ.

ಉದಯಶಂಕರ ಎಸ್ ಬಂಡವಾಳ ಹೂಡಿದ್ದು, ಪೆಪೆಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಮತ್ತು ಅಭಿಷೇಕ್ ಕಾಸರಗೋಡು ಛಾಯಾಗ್ರಹಣವಿದೆ. ವಿನಯ್  ರಾಜಕುಮಾರ್ ನಟನೆಯ ಕೀರ್ತಿ ನಿರ್ದೇಶನದ ಅಂದೊಂದಿತ್ತು ಕಾಲ ಬಿಡುಗಡೆಗೆ ಸಿದ್ಧವಾಗುತ್ತಿದೆ.

"ನನ್ನ ಎರಡೂ ಚಿತ್ರಗಳು 2023 ರ ಆರಂಭದಲ್ಲಿ ಬಿಡುಗಡೆಯಾಗಬೇಕು" ಎಂದು ವಿನಯ್ ಹೇಳುತ್ತಾರೆ, ಅವರು ಇನ್ನೂ ತಮ್ಮ ಮುಂದಿನ ಚಿತ್ರಕ್ಕೆ ಸಹಿ ಹಾಕಿಲ್ಲ. “ನಾನು ಆಕ್ಷನ್ ಚಿತ್ರಕ್ಕಾಗಿ ಹೋಗಬೇಕೇ ಅಥವಾ ಹೆಚ್ಚು ಮನರಂಜನಾ ಸಿನಿಮಾಗೆ ಸಹಿ  ಮಾಡಬೇಕೇ ಎಂದು ನನಗೆ ಖಚಿತವಿಲ್ಲ. ನಾನು ಅದನ್ನು ಲೆಕ್ಕಾಚಾರ ಮಾಡುತ್ತಿದ್ದೇನೆ . ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡು ಮುಂದಿನ ಸಿನಿಮಾ ಬಗ್ಗೆ ನಿರ್ಧರಿಸುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

ಕಾರುಗಳ ಬೆಲೆಯಲ್ಲಿ ಆಗಲಿದೆ ಭಾರಿ ಇಳಿಕೆ: GST ಪರಿಷ್ಕರಣೆಗಾಗಿ ಕಾದು ಕುಳಿತ ಗ್ರಾಹಕರು!

IADWS: ಭಾರತೀಯ ಸೇನೆ ಬತ್ತಳಿಕೆಗೆ 'ಲೇಸರ್ ನಿರ್ದೇಶಿತ ಹೊಸ ಅಸ್ತ್ರ': ದಂಗಾದ ಚೀನಾ, ಹೇಳಿದ್ದು ಏನು?

ಗೌರಿ-ಗಣೇಶ ಹಬ್ಬ: ಪರಿಸರ ಕಾಳಜಿ ಮರೆಯದಿರೋಣ, ಜನತೆಗೆ ಸಿಎಂ ಸಿದ್ದರಾಮಯ್ಯ ಕರೆ! Video

SCROLL FOR NEXT