ವೈಷ್ಣವಿ ಗೌಡ ನಿಶ್ಚಿತಾರ್ಥ 
ಸಿನಿಮಾ ಸುದ್ದಿ

ನಾವು ನಿಶ್ಚಿತಾರ್ಥ ಮುರಿದುಕೊಳ್ಳುತ್ತಿದ್ದೇವೆ, ಇದನ್ನು ಮತ್ತಷ್ಟು ಎಳೆಯಬೇಡಿ: ಸಂಬಂಧಕ್ಕೆ ಅಂತ್ಯವಾಡಿದ ವೈಷ್ಣವಿ ಗೌಡ

ನಿಶ್ಚಿತಾರ್ಥದ ಬಗ್ಗೆ ಇಬ್ಬರು ಹುಡುಗಿಯರು ಮಾತನಾಡಿರುವ ಆಡಿಯೋ ವೈರಲ್​ ಆದ ಬೆನ್ನಲ್ಲೇ ವೈಷ್ಣವಿ ಗೌಡ ನಿಶ್ಚಿತಾರ್ಥ ಮುರಿದುಕೊಂಡಿರುವುದಾಗಿ ಇನ್​ಸ್ಟಾಗ್ರಾಂ ಸ್ಟೋರಿ ಮೂಲಕ ಖಚಿತಪಡಿಸಿದ್ದಾರೆ.

ಬೆಂಗಳೂರು: ನಿಶ್ಚಿತಾರ್ಥದ ಬಗ್ಗೆ ಇಬ್ಬರು ಹುಡುಗಿಯರು ಮಾತನಾಡಿರುವ ಆಡಿಯೋ ವೈರಲ್​ ಆದ ಬೆನ್ನಲ್ಲೇ ವೈಷ್ಣವಿ ಗೌಡ ನಿಶ್ಚಿತಾರ್ಥ ಮುರಿದುಕೊಂಡಿರುವುದಾಗಿ ಇನ್​ಸ್ಟಾಗ್ರಾಂ ಸ್ಟೋರಿ ಮೂಲಕ ಖಚಿತಪಡಿಸಿದ್ದಾರೆ.

ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿರುವ ವಿರಾಜ್​ ಸಿನಿಮಾದ ನಟ ವಿದ್ಯಾಭರಣ್​ ಸರಿಯಿಲ್ಲ ಎಂದು ಇಬ್ಬರು ಹುಡುಗಿಯರು ಮಾತನಾಡಿರುವ ಆಡಿಯೋ ವೈರಲ್​ ಆದ ಬೆನ್ನಲ್ಲೇ ಮಾಧ್ಯಮಗಳಲ್ಲಿ ಆರೋಪ-ಪ್ರತ್ಯಾರೋಪ ಚರ್ಚೆಯಾಗುತ್ತಿದ್ದು, ಇದರಿಂದ ಮನನೊಂದಿರುವ ವೈಷ್ಣವಿ ಗೌಡ ಇನ್​ಸ್ಟಾಗ್ರಾಂ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ನಾವು ಇದನ್ನು ಇಲ್ಲಿಗೆ ಕೈಬಿಡುತ್ತಿದ್ದೇವೆ. ಈ ವಿಷಯವನ್ನು ಮತ್ತೆ ಎಳೆಯಬೇಡಿ, ಇಲ್ಲಿಗೆ ಬಿಡಿ ಎಂದು ಎಲ್ಲರ ಬಳಿ ಮನವಿ ಮಾಡುತ್ತಿದ್ದೇನೆ. ಎಲ್ಲರ ಶುಭಹಾರೈಕೆಗೆ ಧನ್ಯವಾದಗಳು" ಎಂದು ವೈಷ್ಣವಿ ಗೌಡ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.

ನಾನು, ವಿದ್ಯಾಭರಣ್ ನಿಶ್ಚಿತಾರ್ಥ ಮಾಡಿಕೊಂಡಿಲ್ಲ. ಎರಡು ಕುಟುಂಬದವರು ಮಾತನಾಡಿಕೊಂಡಿದ್ದೆವು ಅಷ್ಟೇ. ಮದುವೆ ಬಗ್ಗೆ ನಾವಿನ್ನೂ ಯಾವ ನಿರ್ಧಾರವನ್ನು ತೆಗೆದುಕೊಂಡಿರಲಿಲ್ಲ. ಈಗಲೇ ಎಲ್ಲ ವಿಷಯ ತಿಳಿದಿದ್ದು ಗೊತ್ತಾಗಿದೆ. ಹಾಗಾಗಿ ನಾನು ಈ ಬಗ್ಗೆ ಮುಂದೆ ಹೆಜ್ಜೆ ಇಡೋದಿಲ್ಲ" ಎಂದು ವೈಷ್ಣವಿ ಗೌಡ ಅವರು ಮಾಧ್ಯಮದ ಜೊತೆ ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಪ್ರೇಮದ ಊರಲಿ’ ಭರ್ಜರಿ ಕಲೆಕ್ಷನ್: ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 39 ಕೋಟಿ ರೂ. ಗಳಿಕೆ!

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ನವೆಂಬರ್‌ನಲ್ಲಿ ಕರ್ನಾಟಕ ಬಿಜೆಪಿಗೆ ಮೇಜರ್ ಸರ್ಜರಿ: ಬಿವೈ ವಿಜಯೇಂದ್ರ, ಆರ್ ಅಶೋಕಗೆ ಗೇಟ್ ಪಾಸ್?; ಹೊಸ ಮುಖಗಳಿಗೆ ಮಣೆ!