ಸಿನಿಮಾ ಸುದ್ದಿ

ಪ್ರಕೃತಿ ಮಾತೆಗೆ ಸಲ್ಲಿಸುವ ಗೌರವ "ಗಂಧದ ಗುಡಿ"

Srinivas Rao BV

ಗಂಧದ ಗುಡಿ ಅ.28 ರಂದು ತೆರೆ ಕಾಣಲಿದ್ದು, ಈ ಡಾಕ್ಯುಮೆಂಟರಿ ಸಿನಿಮಾ ಮೂಲಕ ಪುನೀತ್ ರಾಜ್ ಕುಮಾರ್ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಅ.09 ರಂದು ಸಾಹಸಗಳನ್ನೊಳಗೊಂಡ ಸಿನಿಮಾ ಬಿಡುಗಡೆಯಾಗಲಿದ್ದು, ಕರ್ನಾಟಕದ ರೋಮಾಂಚಕ ದೃಶ್ಯಗಳನ್ನು ಪವರ್ ಸ್ಟಾರ್ ಪುನೀತ್ ಹಾಗೂ ನಿರ್ದೇಶಕ ಜೆಎಸ್ ಅಮೋಘವರ್ಷ ತೆರೆ ಮೇಲೆ ತಂದಿದ್ದಾರೆ. ಟ್ರೈಲರ್ ನಲ್ಲಿ ಪುನೀತ್ ರಾಜ್ ಕುಮಾರ್ ಕಠಿಣ ಭೂಪ್ರದೇಶಗಳು ಮತ್ತು ಸವಾಲುಗಳಿಂದ ಕೂಡಿರುವ ಪ್ರದೇಶಗಳಲ್ಲಿ ಹಾದುಹೋಗುವ ದೃಶ್ಯಗಳು ಇದ್ದು ಎಲ್ಲರ ಗಮನ ಸೆಳೆಯುತ್ತಿದೆ.

ಕರ್ನಾಟಕದ ಸೆಲೆಬ್ರಿಟಿಗಳು ಹಾಗೂ ಪ್ರಧಾನಿ ಮೋದಿ ಸೇರಿದಂತೆ ಹಲವು ನೇತಾರರು ಗಂಧದ ಗುಡಿಯ ಟ್ರೈಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಪ್ಪು ಜಗತ್ತಿನಾದ್ಯಂತ ಲಕ್ಷಾಂತರ ಮಂದಿಯ ಹೃದಯದಲ್ಲಿ ಜೀವಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

ಪ್ರಧಾನಿ ಅವರಿಂದ ಮೆಚ್ಚುಗೆ ಪಡೆದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೋಘವರ್ಷ ಅದನ್ನು ರಾಷ್ಟ್ರೀಯ ಹೆಮ್ಮೆ ಎಂದು ಬಣ್ಣಿಸಿದ್ದಾರೆ. 1.3 ಬಿಲಿಯನ್ ಮಂದಿ ಇರುವ ದೇಶದಲ್ಲಿ ಇಂದಿಗೂ ಆನೆ, ಹುಲಿಗಳು ನೋಡಸಿಗುತ್ತಿವೆ ಈ ವಿಷಯದಲ್ಲಿ ಬೇರೆ ಯಾವ ದೇಶಕ್ಕೂ ಅವಕಾಶವಿಲ್ಲದ ಹೆಮ್ಮೆ ನಮ್ಮದಾಗಿದೆ ಎಂದು ಹೇಳಿದ್ದಾರೆ.
 
ನಾವು ಒಳ್ಳೆಯ ಸಂಗತಿಗಳನ್ನು ಸಂಭ್ರಮಿಸಿ ಹೆಮ್ಮೆ ಪಡಬೇಕು, ಈ ಸಂದರ್ಭದಲ್ಲಿ ಭರವಸೆಯ ಸಂದೇಶ ಬಹಳ ಮುಖ್ಯವಾಗುತ್ತದೆ. ಗಂಧದ ಗುಡಿಯಲ್ಲಿ ಪುನೀತ್ ಸ್ವತಃ ಇದ್ದು, ಇದೇ ಕಾರಣದಿಂದ ಸಿನಿಮಾ ವಿಶಿಷ್ಟವಾಗಿರಲಿದೆ ಎಂದು ನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆ. ಇದು ಪುನೀತ್ ಅವರು ಕ್ಯಾಮರಾ ಮುಂದೆ ಬಂದಂಥಹ ಇತ್ತೀಚಿನ ದೃಶ್ಯಗಳಾಗಿದ್ದು, ನಮಗಾಗಿ ಅವರು ಬಿಟ್ಟು ಹೋದಂತಹ ಪರಂಪರೆಯಾಗಿದೆ ಎನ್ನುತ್ತಾರೆ ಅಮೋಘವರ್ಷ. 

SCROLL FOR NEXT