ಸಿನಿಮಾ ಸುದ್ದಿ

ಅವಳಿ ಗಂಡು ಮಕ್ಕಳಿಗೆ ಪೋಷಕರಾದ ನಯನತಾರಾ, ವಿಘ್ನೇಶ್‌ ದಂಪತಿಗೆ ಸಂಕಷ್ಟ: ತನಿಖೆ ನಡೆಸಲು ಮುಂದಾದ ತಮಿಳುನಾಡು ಸರ್ಕಾರ!

Shilpa D

ಚನ್ನೈ: ದಕ್ಷಿಣ ಭಾರತದ ಪ್ರಸಿದ್ಧ ನಟಿ ನಯನತಾರಾ, ವಿಘ್ನೇಶ್‌ ದಂಪತಿ ನಾಲ್ಕು ತಿಂಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟು, ಇದೀಗ ತಾವು ಅವಳಿ ಗಂಡು ಮಕ್ಕಳಿಗೆ ಪೋಷಕರಾಗಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಬಾಡಿಗೆ ತಾಯಿ ಮೂಲಕ ಜೋಡಿಯು ಮಕ್ಕಳನ್ನು ಪಡೆದಿರುವುದಾಗಿ ವರದಿಯಾಗಿದೆ. ಆದರೆ ಭಾರತದಲ್ಲಿ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯುವುದಕ್ಕೆ ಹಲವು ನಿರ್ಬಂಧವಿದ್ದು, ಅವುಗಳನ್ನು ಪಾಲಿಸಿ ಈ ಜೋಡಿ ಮಕ್ಕಳನ್ನು ಪಡೆದಿದೆಯೇ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಈ ಬಗ್ಗೆ ವಿಚಾರಣೆ ನಡೆಸುವುದಾಗಿ ತಮಿಳುನಾಡು ಸರ್ಕಾರ ತಿಳಿಸಿದೆ. “ನಯನತಾರಾ ದಂಪತಿಯ ಬಾಡಿಗೆ ತಾಯ್ತದ ವಿಚಾರವಾಗಿ ತನಿಖೆ ನಡೆಸುವುದಕ್ಕೆ ವೈದ್ಯಕೀಯ ಸೇವೆಗಳ ನಿರ್ದೇಶನಾಲಯಕ್ಕೆ ನಿರ್ದೇಶಿಸುವೆ’ ಎಂದು ರಾಜ್ಯ ಆರೋಗ್ಯ ಸಚಿವ ಮ ಸುಬ್ರಮಣಿಯಂ ತಿಳಿಸಿದ್ದಾರೆ.

ಬಾಡಿಗೆ ತಾಯ್ತನಕ್ಕೆ ಸಂಬಂಧಿಸಿದಂತೆ ಅವರು ನಿಗದಿತ ನಿಯಮಗಳನ್ನು ಅನುಸರಿಸಿದ್ದಾರೆಯೇ ಎಂಬುದನ್ನು ತಿಳಿಯಲು ವೈದ್ಯಕೀಯ ಸೇವೆಗಳ ನಿರ್ದೇಶನಾಲಯವು (ಡಿಎಂಎಸ್) ನಯನತಾರಾ ಮತ್ತು ಶಿವನ್ ಅವರಿಂದ ವಿವರಣೆಯನ್ನು ಪಡೆಯಲಿದೆ ಎಂದು ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಹೇಳಿದ್ದಾರೆ.

ಡಿಸೆಂಬರ್ 2021ರಿಂದ ಭಾರತದಲ್ಲಿ ಬಾಡಿಗೆ ತಾಯ್ತನವನ್ನು ನಿಷೇಧಿಸಲಾಗಿರುವುದರಿಂದ ದಂಪತಿ ನಿಯಮಗಳನ್ನು ಅನುಸರಿಸಿದ್ದಾರೆಯೇ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ, ನಯನತಾರಾ ಮತ್ತು ಶಿವನ್ ದಂಪತಿ ಈ ಬಗ್ಗೆ ಇನ್ನೂ ಹೇಳಿಕೆ ನೀಡಿಲ್ಲ.

SCROLL FOR NEXT