ಸಪ್ತಮಿ ಗೌಡ 
ಸಿನಿಮಾ ಸುದ್ದಿ

ಕಾಂತಾರ ಯಶಸ್ಸು: ತಡವಾದರೂ ಉತ್ತಮ ಚಿತ್ರಗಳ ಆಯ್ಕೆಗೆ ಸಪ್ತಮಿ ಗೌಡ ನಿರ್ಧಾರ

ರಿಷಬ್​ ಶೆಟ್ಟಿ ನಿರ್ದೇಶನದ ‘ಕಾಂತಾರ’ ಸಿನಿಮಾ ಎಲ್ಲೆಡೆ ಭಾರೀ ಹವಾ ಸೃಷ್ಟಿ ಮಾಡಿದ್ದು, ಈ ಚಿತ್ರದಲ್ಲಿ ನಟಿಸಿದ ಎಲ್ಲ ಕಲಾವಿದರೂ ಖ್ಯಾತಿ ಪಡೆದುಕೊಳ್ಳುತ್ತಿದ್ದಾರೆ. ರಿಷಬ್​ ಶೆಟ್ಟಿಗೆ ಜೋಡಿಯಾಗಿ ಸಪ್ತಮಿ ಗೌಡ ಅವರಿಗೂ ಸಖತ್ ಡಿಮ್ಯಾಂಡ್ ಸೃಷ್ಟಿಯಾಗಿದೆ. ಆದರೆ, ನಟಿ ಮಾಡ್ರ ತಡವಾದರೂ ಉತ್ತಮ ಚಿತ್ರಗಳ ಆಯ್ಕೆಗೆ ನಿರ್ಧರಿಸಿದ್ದಾರೆ.

ರಿಷಬ್​ ಶೆಟ್ಟಿ ನಿರ್ದೇಶನದ ‘ಕಾಂತಾರ’ ಸಿನಿಮಾ ಎಲ್ಲೆಡೆ ಭಾರೀ ಹವಾ ಸೃಷ್ಟಿ ಮಾಡಿದ್ದು, ಈ ಚಿತ್ರದಲ್ಲಿ ನಟಿಸಿದ ಎಲ್ಲ ಕಲಾವಿದರೂ ಖ್ಯಾತಿ ಪಡೆದುಕೊಳ್ಳುತ್ತಿದ್ದಾರೆ. ರಿಷಬ್​ ಶೆಟ್ಟಿಗೆ ಜೋಡಿಯಾಗಿ ಸಪ್ತಮಿ ಗೌಡ ಅವರಿಗೂ ಸಖತ್ ಡಿಮ್ಯಾಂಡ್ ಸೃಷ್ಟಿಯಾಗಿದೆ. ಆದರೆ, ನಟಿ ಮಾಡ್ರ ತಡವಾದರೂ ಉತ್ತಮ ಚಿತ್ರಗಳ ಆಯ್ಕೆಗೆ ನಿರ್ಧರಿಸಿದ್ದಾರೆ. 

ಸಪ್ತಮಿ ಗೌಡ ಅವರು ಬರಹಗಾರ-ನಿರ್ದೇಶಕ ರಿಷಬ್ ಶೆಟ್ಟಿ ಜೊತೆಗೆ ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದು, ಜನರ ಪ್ರಶಂಸೆಗಳಿಗೆ ಸಪ್ತಮಿ ಗೌಡ ಸಂತಸ ವ್ಯಕ್ತಪಡಿಸಿದ್ದಾರೆ. 

ಎಲ್ಲದಕ್ಕೂ ಪ್ರೊಡಕ್ಷನ್ ಹೌಸ್ ಮತ್ತು ನಿರ್ದೇಶಕರಿಗೆ ಋಣಿಯಾಗಿದ್ದೇನೆ. ಅವರಿಂದಲೇ ನಾನು ಇತರೆ ರಾಜ್ಯಗಳ ಜನರ ಮನಸ್ಸು ಗೆಲ್ಲಲು ಸಾಧ್ಯವಾಗಿದೆ. ಚಿತ್ರ ಪ್ರಚಾರಕ್ಕೆ ರಿಷಬ್ ಶೆಟ್ಟಿಯವರು ಎಲ್ಲೆಡೆ ಹೋಗುತ್ತಿದ್ದಾರೆ. ಅವರೊಂದಿಗೆ ವೇದಿಕೆ ಹಂಚಿಕೊಳ್ಳಲು ಚಿತ್ರತಂಡ ನನಗೆ ಅವಕಾಶ ನೀಡಿದ್ದು ಬಹಳ ಸಂತಸ ತಂದಿದೆ. ಇದು ನನ್ನನ್ನು ಬಹಳಷ್ಟೂ ದೂರ ಕೊಂಡೊಯ್ಯುತ್ತದೆ ಎಂಬ ಭರವಸೆ ನನಗಿದೆ ಎಂದು ಸಪ್ತಮಿ ಗೌಡ ಹೇಳಿದ್ದಾರೆ. 

ಸಪ್ತಮಿ ಗೌಡ

ವೀಕ್ಷಕರು ಲೀಲಾ ಬಗ್ಗೆ ತಮ್ಮ ಅಮೂಲ್ಯವಾದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಶಿವನೊಂದಿಗಿನ ಅವಳ ಸಂಬಂಧ. ಬಾಕ್ಸ್ ಆಫೀಸ್ ನಲ್ಲಿ ಕಾಂತಾರ ಭಾರೀ ಹಿಟ್ ಆಗಿದೆ. ಉತ್ತಮ ಚಿತ್ರ ಗೆದ್ದಾಗಲೆಲ್ಲಾ ನಟ-ನಟಿಯರು ಉತ್ತಮ ಹೆಸರು ಗಳಿಸುತ್ತಾರೆ. ಚಿತ್ರದಲ್ಲಿ ನಟಸಿರುವ ಪ್ರತಿಯೊಬ್ಬರೂ ಮನ್ನಣೆ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು. 

ಚಿತ್ರದ ಯಶಸ್ಸನ್ನು ಯಾವ ರೀತಿ ಬಳಸಿಕೊಳ್ಳುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಸಪ್ತಮಿ ಗೌಡ, “ಬಹಳಷ್ಟು ಜನರು, ವಿಶೇಷವಾಗಿ ನನ್ನ ಆಪ್ತ ವಲಯದಲ್ಲಿರುವವರು, ನಿಧಾನವಾಗಿ ಹೋಗುವಂತೆ, ಸಾಕಷ್ಟು ಯೋಚಿಸಿ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಚಿತ್ರದಲ್ಲಿ ಕೇವಲ ನಾಯಕಿಯಾಗಿರುವುದಕ್ಕಿಂತ ಉತ್ತಮ ನಟಿಯಾಗಿ ನಟಿಯಾಗಿ ನಾನು ಮುಂದುವರೆಯಬಲ್ಲೆ ಎಂದು ಅವರು ಭಾವಿಸಿದ್ದಾರೆ. ಉತ್ತಮ ಆಯ್ಕೆಗಳು ಸಿನಿರಂಗದಲ್ಲಿ ಉತ್ತಮ ರೀತಿಯಲ್ಲಿ ಸಾಗಲು ಸಹಾಯ ಮಾಡುತ್ತದೆ. ಕಾಂತಾರಕ್ಕಾಗಿ ನಾನು ಒಂದೂವರೆ ವರ್ಷ ಕಾದಿದ್ದೆ. ಮುಂದಿನ ಆಯ್ಕೆಗೆ ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳುವುದು ಉತ್ತಮ ಎಂದು ನಾನು ಭಾವಿಸುತ್ತೇನೆಂದು ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT