ಯೆಲ್ಲೋ ಗ್ಯಾಂಗ್ ಸಿನಿಮಾ ತಾರಾಬಳಗ 
ಸಿನಿಮಾ ಸುದ್ದಿ

ನವೆಂಬರ್ 11 ಕ್ಕೆ 'ಯೆಲ್ಲೋ ಗ್ಯಾಂಗ್' ರಿಲೀಸ್

ವಿಭಿನ್ನ ಸ್ಟುಡಿಯೋಸ್‌’ ಬ್ಯಾನರ್‌ನಲ್ಲಿ ಮನೋಜ್‌ ಕುಮಾರ್‌ ನಿರ್ಮಿಸುತ್ತಿರುವ “ಯಲ್ಲೋ ಗ್ಯಾಂಗ್ಸ್‌ ‘ ಚಿತ್ರಕ್ಕೆ ರವೀಂದ್ರ ಪರಮೇಶ್ವರಪ್ಪ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರತಂಡ ಇತ್ತೀಚಿಗೆ ಟ್ರೇಲರ್‌ ರಿಲೀಸ್‌ ಮಾಡಿದೆ.

ಕ್ರೈಂ ಜಗತ್ತಿನ ಕಥೆಯನ್ನು ಹೇಳಹೊರಟಿರುವ “ಯೆಲ್ಲೋ ಗ್ಯಾಂಗ್‌’ ಚಿತ್ರ ನ.11ರಂದು ತೆರೆಕಾಣುತ್ತಿದೆ. “ವಿಭಿನ್ನ ಸ್ಟುಡಿಯೋಸ್‌’ ಬ್ಯಾನರ್‌ನಲ್ಲಿ ಮನೋಜ್‌ ಕುಮಾರ್‌ ನಿರ್ಮಿಸುತ್ತಿರುವ “ಯಲ್ಲೋ ಗ್ಯಾಂಗ್ಸ್‌‘ ಚಿತ್ರಕ್ಕೆ ರವೀಂದ್ರ ಪರಮೇಶ್ವರಪ್ಪ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರತಂಡ ಇತ್ತೀಚಿಗೆ ಟ್ರೇಲರ್‌ ರಿಲೀಸ್‌ ಮಾಡಿದೆ.

ಯಲ್ಲೋ ಗ್ಯಾಂಗ್ಸ್‌’ ಒಂದು ಕ್ರೈಂ ಥ್ರಿಲ್ಲರ್‌ ಜಾನರ್‌ನ ಚಿತ್ರ. 35 ದಿನಗಳಲ್ಲಿ ಶೂಟಿಂಗ್‌ ಮುಗಿಸಿದ್ದೇವೆ. ಚಿತ್ರದ ಕಥೆ ಹೆಣೆಯುವಲ್ಲಿ ವಿಭಿನ್ನತೆ ಕಾಯ್ದುಕೊಂಡಿದ್ದು, ಪಾತ್ರಗಳಿಗೆ ಮಹತ್ವ ನೀಡಿದ್ದೇವೆ. ಡರ್ಟಿ ಮನಿ ಎನ್ನುವುದು ಚಿತ್ರದ ಮುಖ್ಯ ಕಥೆಯಾಗಿ ಸಾಗುತ್ತದೆ. ಗುರುತು ಪರಿಚಯವಿಲ್ಲದವರು ಕಾರಣಾಂತರಗಳಿಂದ ಮುಖಾಮುಖೀಯಾಗುವ ಸನ್ನಿವೇಶ ಎದುರಾಗುತ್ತದೆ. ಅಂತಹ ಅಂಶವನ್ನು ಇಲ್ಲಿ ಪ್ರಸ್ತುತ ಪಡಿಸಿದ್ದೇವೆ. ಚಿತ್ರದಲ್ಲಿ ಹಾಡುಗಳಿಲ್ಲ. ಇಡೀ ಸಿನಿಮಾವನ್ನು ಕ್ರೇನ್‌, ಗಿಂಬಲ್‌ ಬಳಸದೇ ಚಿತ್ರೀಕರಿಸಿದ್ದೇವೆ’ ಎಂದು ಚಿತ್ರ ನಿರ್ದೇಶಕ ರವೀಂದ್ರ ಪರಮೇಶ್ವರಪ್ಪ ತಿಳಿಸಿದ್ದಾರೆ.

ಚಿತ್ರ ನಿರ್ಮಾಪಕ ಮನೋಜ್‌ ಕುಮಾರ್‌ ಮಾತನಾಡಿ, “ರವೀಂದ್ರ ಅವರು ಬಂದು ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ಚಿತ್ರವನ್ನು ಪ್ರಾರಂಭಿಸೋಣ ಎಂದೆ. ಕಥೆ ಚೆನ್ನಾಗಿದೆ. ಪಾತ್ರಕ್ಕೆ ತಕ್ಕ ಕಲಾವಿದರು ಸಿಕ್ಕಿದ್ದಾರೆ. ಚಿತ್ರ ಉತ್ತಮವಾಗಿ ಮೂಡಿಬಂದಿದೆ. ನಮ್ಮ ಬ್ಯಾನರ್‌ನ ಚೊಚ್ಚಲ ಚಿತ್ರ. ಎಲ್ಲರೂ ಚಿತ್ರಮಂದಿರಗಳಿಗೆ ಬಂದು ಚಿತ್ರ ನೋಡಿ ಸಹಕರಿಸಿ’ ಎಂದರು.

ಇನ್ನು ಚಿತ್ರದ ಕಲಾವಿದರುಗಳಾದ, ದೇವ ದೇವಯ್ಯ, ಅರ್ಚನಾ ಕೊಟ್ಟಿಗೆ, ಸತ್ಯ ಪಿ ಜಿ, ಅರುಣ್‌, ನಾಟ್ಯರಂಗ, ಹರ್ಷ ಚಿತ್ರದಲ್ಲಿನ ತಮ್ಮ ಪಾತ್ರಗಳ ಕುರಿತು ಮಾಹಿತಿ ಹಂಚಿಕೊಂಡರು.

ವಿಭಿನ್ನ ಸ್ಟುಡಿಯೋಸ್‌’ ಅಡಿಯಲ್ಲಿ ಮನೋಜ್‌ ಕುಮಾರ್‌ ಜೊತೆಗೂಡಿ ಡಿ ಎಸ್‌ ಪ್ರವೀಣ್‌, ಜೆ ಎನ್‌ ವಿ ಎಂಟರ್‌ಟೇನರ್ ಜಿ.ಎಂ.ಆರ್‌ ಕುಮಾರ್‌ ಬಂಡವಾಳ ಹೂಡಿದ್ದಾರೆ. ಚಿತ್ರದ ನಾಯಕನಾಗಿ ದೇವ್‌ ದೇವಯ್ಯ , ನಾಯಕಿಯಾಗಿ ಅರ್ಚನಾ ಕೊಟ್ಟಿಗೆ ಅಭಿನಯಿಸಿದ್ದು, ಪ್ರದೀಪ್‌ ಪೂಜಾರಿ, ಸತ್ಯ ಪಿ ಜಿ, ಅರುಣ್‌, ನಾಟ್ಯರಂಗ, ವಿನೀತ್‌ ಸೇರಿದಂತೆ 20ಕ್ಕೂ ಅಧಿಕ ಕಲಾವಿದರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT