ಸಿನಿಮಾ ಸುದ್ದಿ

‘ರಾಮಾಚಾರಿ 2.0' ವೈಜ್ಞಾನಿಕ- ಕಾಲ್ಪನಿಕ ಚಿತ್ರ ಎನ್ನುತ್ತಾರೆ ರಿವೈಂಡ್ ಸಿನಿಮಾ ಖ್ಯಾತಿಯ ನಟ ತೇಜ್

Ramyashree GN

ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ತೇಜ್, ಆನಂತರ ಕನ್ನಡ, ತಮಿಳಿನ ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ರಿವೈಂಡ್‌ ಸಿನಿಮಾವನ್ನು ನಿರ್ದೇಶಿಸಿ, ನಟಿಸಿದ್ದರು. ಇದೀಗ ತಮ್ಮ ಎರಡನೇ ಚಿತ್ರ 'ರಾಮಾಚಾರಿ 2.0' ನೊಂದಿಗೆ ಮರಳಿದ್ದಾರೆ. ತಮ್ಮ ಮುಂದಿನ ಚಿತ್ರದ ಬಗ್ಗೆ ಕೆಲವು ವಿವರಗಳನ್ನು ಹಂಚಿಕೊಂಡಿದ್ದಾರೆ. ಚಿತ್ರ ಏಪ್ರಿಲ್ 7 ರಂದು ತೆರೆಗೆ ಬರಲಿದೆ.

ಕನ್ನಡ ಚಿತ್ರರಂಗದಲ್ಲಿ ರಾಮಾಚಾರಿ ಎನ್ನುವ ಹೆಸರಿಗೆ ವಿಶೇಷ ಸ್ಥಾನಮಾನವಿದೆ. ವಿಷ್ಣುವರ್ಧನ್ ಅಭಿನಯದ ನಾಗರಹಾವು ಚಿತ್ರದಲ್ಲಿನ ರಾಮಾಚಾರಿ ಪಾತ್ರದ ಹೆಸರನ್ನೇ ಶೀರ್ಷಿಕೆಯಾಗಿಸಿಕೊಂಡಿದ್ದ ಚಿತ್ರದಲಲ್ಲಿ ರವಿಚಂದ್ರನ್, ಯಶ್ ನಟಿಸಿದ್ದಾರೆ. ಇದೀಗ ಅದೇ ಹೆಸರಿನಲ್ಲಿ ಮತ್ತೊಂದು ಚಿತ್ರ ತೆರೆಗೆ ಬರಲು ಸಜ್ಜಾಗಿದೆ.

'ರಾಮಾಚಾರಿ 2.0 ಒಂದು ವೈಜ್ಞಾನಿಕ ಕಾಲ್ಪನಿಕ ಚಲನಚಿತ್ರವಾಗಿದ್ದು, ಈ ಶೀರ್ಷಿಕೆಯು ಚಿತ್ರದುರ್ಗದ ರಾಮಾಚಾರಿ ಎಂಬ ಜನಪ್ರಿಯ ವ್ಯಕ್ತಿತ್ವದ ಮೊಮ್ಮಗನಾದ ಬುದ್ದಿವಂತ ವ್ಯಕ್ತಿಯ ಪಾತ್ರವನ್ನು ಬಿಂಬಿಸುತ್ತದೆ. ಕಿರಿಯ ರಾಮಾಚಾರಿ ತನ್ನ ರಕ್ತಸಂಬಂಧವನ್ನು ಹೇಗೆ ಕಂಡುಹಿಡಿಯುತ್ತಾನೆ ಮತ್ತು ವಂಶಾವಳಿ ಮತ್ತು ಕರ್ಮದ ನಿಯಮವನ್ನು ಬಳಸಿಕೊಂಡು ಭವಿಷ್ಯವನ್ನು ಹೇಗೆ ನಿಯಂತ್ರಿಸುತ್ತಾನೆ ಎಂಬುದು ಈ ಚಿತ್ರದ ತಿರುಳು' ಎಂದು ಈ ಚಿತ್ರದಲ್ಲಿ ರಾಮಾಚಾರಿಯಾಗಿ ನಟಿಸುತ್ತಿರುವ ತೇಜ್ ಹೇಳುತ್ತಾರೆ.

ಕೌಸ್ತುಭ ಮಣಿ ನಾಯಕಿಯಾಗಿ ನಟಿಸಿರುವ ರಾಮಾಚಾರಿ 2.0 ನಲ್ಲಿ ರಾಘವೇಂದ್ರ ರಾಜ್‌ಕುಮಾರ್, ವಿಜಯ್ ಚೆಂಡೂರ್, ಸ್ಪರ್ಶ ರೇಖಾ ಮತ್ತು ಚಂದನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತೇಜ್ ಸಹ ನಿರ್ಮಾಪಕರ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಚಿತ್ರಕ್ಕೆ ಪ್ರದ್ಯೋತ್ ಸಂಗೀತ ನೀಡಿದ್ದಾರೆ.

SCROLL FOR NEXT