ನಟ ವಿರಾಟ್ - ಜಯಣ್ಣ - ನಿರ್ದೇಶಕ ಸೂರಿ 
ಸಿನಿಮಾ ಸುದ್ದಿ

ಇದೇ ಮೊದಲ ಬಾರಿಗೆ ಜಯಣ್ಣ ಫಿಲಂಸ್ ಜೊತೆ ಕೈಜೋಡಿಸಲಿದ್ದಾರೆ ನಿರ್ದೇಶಕ ಸೂರಿ

ಬಹಳ ದಿನಗಳ ನಂತರ ನಿರ್ದೇಶಕ ಸೂರಿ ಮತ್ತು ನಿರ್ಮಾಪಕರಾದ ಜಯಣ್ಣ ಹಾಗೂ ಬೋಗೇಂದ್ರ ಹೊಸ ಸಿನಿಮಾವೊಂದಕ್ಕೆ ಕೆಲಸ ಮಾಡುತ್ತಿದ್ದಾರೆ. ಕಿಸ್ ಸಿನಿಮಾ ಖ್ಯಾತಿಯ ನಟ ವಿರಾಟ್ ನಟನೆಯ ಚಿತ್ರಕ್ಕಾಗಿ ಟಗರು ನಿರ್ದೇಶಕ ಸೂರಿ ಮತ್ತು ಜಯಣ್ಣ ಫಿಲಂಸ್ ಕೈಜೋಡಿಸಲಿದ್ದಾರೆ.

ಬಹಳ ದಿನಗಳ ನಂತರ ನಿರ್ದೇಶಕ ಸೂರಿ ಮತ್ತು ನಿರ್ಮಾಪಕರಾದ ಜಯಣ್ಣ ಹಾಗೂ ಬೋಗೇಂದ್ರ ಹೊಸ ಸಿನಿಮಾವೊಂದಕ್ಕೆ ಕೆಲಸ ಮಾಡುತ್ತಿದ್ದಾರೆ. ಕಿಸ್ ಸಿನಿಮಾ ಖ್ಯಾತಿಯ ನಟ ವಿರಾಟ್ ನಟನೆಯ ಚಿತ್ರಕ್ಕಾಗಿ ಟಗರು ನಿರ್ದೇಶಕ ಸೂರಿ ಮತ್ತು ಜಯಣ್ಣ ಫಿಲಂಸ್ ಕೈಜೋಡಿಸಲಿದ್ದಾರೆ.

ಇದೇ ನಿರ್ಮಾಣ ಸಂಸ್ಥೆಯೊಂದಿಗೆ ಬಹು ಚಿತ್ರಗಳ ಒಪ್ಪಂದಕ್ಕೆ ಸಹಿ ಹಾಕಿರುವ ವಿರಾಟ್, ಚಿತ್ರೀಕರಣದ ಕೊನೆಯ ಹಂತದಲ್ಲಿರುವ ದಿನಕರ್ ತೂಗುದೀಪ ಅವರ ರಾಯಲ್ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ನಂತರ, ಸೂರಿ ನಿರ್ದೇಶನದಲ್ಲಿ ವಿರಾಟ್ ನಟಿಸಲಿದ್ದಾರೆ. 

ಸಿನಿಮಾ ಎಕ್ಸ್‌ಪ್ರೆಸ್ ಜೊತೆ ಮಾತನಾಡಿರುವ ಸೂರಿ, ತಮ್ಮ ಚೊಚ್ಚಲ ನಿರ್ದೇಶನದ ದುನಿಯಾ ಚಿತ್ರದಿಂದಲೂ ನಿರ್ಮಾಪಕ ಜಯಣ್ಣ ಅವರೊಂದಿಗೆ ಸುದೀರ್ಘ ಒಡನಾಟವಿದೆ. ವಾಸ್ತವವಾಗಿ, ಜಯಣ್ಣ ಅವರ ಬೆಂಬಲವಿಲ್ಲದೆ ದುನಿಯಾ ಚಿತ್ರಮಂದಿರಗಳಿಗೆ ಬರುತ್ತಿರಲಿಲ್ಲ. ಅವರು ಸಿನಿಮಾವನ್ನು ದೊಡ್ಡ ಪರದೆಯ ಮೇಲೆ ತರಲು ನನಗೆ ಸಹಾಯ ಮಾಡಿದರು. ಅಂದಿನಿಂದ, ನಾವು ವಿವಿಧ ಸ್ತರಗಳಲ್ಲಿ ಸಂಬಂಧ ಹೊಂದಿದ್ದೇವೆ. ಅವರು ನನ್ನ ಬೆರಳೆಣಿಕೆಯಷ್ಟು ಚಿತ್ರಗಳಿಗೆ ವಿತರಕರಾಗಿದ್ದಾರೆ ಮತ್ತು ನನ್ನ ಯೋಜನೆಗಳಿಗೆ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ ಎನ್ನುತ್ತಾರೆ. 

ನಿಜವಾಗಿ ಹೇಳಬೇಕೆಂದರೆ, ಬ್ಯಾಡ್ ಮ್ಯಾನರ್ಸ್ ನಿರ್ಮಾಪಕ ಸುಧೀರ್ ಅವರ ಉತ್ತಮ ಸ್ನೇಹಿತರಾಗಿರುವ ಜಯಣ್ಣ ಅವರು ಆ ಚಿತ್ರದ ಥಿಯೇಟರ್ ರಿಲೀಸ್ ಅನ್ನು ಸಹ ನೋಡಿಕೊಳ್ಳುತ್ತಿದ್ದಾರೆ. ನಾವು ನಿರ್ದೇಶಕ ಮತ್ತು ನಿರ್ಮಾಪಕರಾಗಿ ಕೆಲಸ ಮಾಡುವ ಬಗ್ಗೆ ಆಗಾಗ್ಗೆ ಚರ್ಚಿಸುತ್ತಲೇ ಇರುತ್ತೇವೆ. ಇದೀಗ ಅದು ಅಂತಿಮವಾಗಿ ನಡೆಯುತ್ತಿದೆ. ಅಂತಹ ದೊಡ್ಡ ಬ್ಯಾನರ್‌ನಡಿಯಲ್ಲಿ ಚಲನಚಿತ್ರವನ್ನು ನಿರ್ದೇಶಿಸುವುದು ನನ್ನ ಹೋಮ್ ಪ್ರೊಡಕ್ಷನ್‌ನಂತೆಯೇ ಇದ್ದು, ನಾನು ಉತ್ಸುಕನಾಗಿದ್ದೇನೆ ಎನ್ನುತ್ತಾರೆ ಸೂರಿ.

ವಿರಾಟ್ ಪಾತ್ರವನ್ನು ಆಯ್ಕೆ ಮಾಡಿದ ಬಗ್ಗೆ ಮಾತನಾಡಿದ ಅವರು, 'ವಿರಾಟ್ ಪ್ರತಿಭೆಯ ಮೂಟೆ. ಅವರೊಳಗೊಂದು ಬೆಂಕಿಯಿದೆ ಮತ್ತು ನಾವೀಗ ಉತ್ತಮ ಸಿನಿಮಾವೊಂದಕ್ಕೆ ಸಜ್ಜಾಗುತ್ತಿದ್ದೇವೆ. ಬರಹಗಾರ ಸುರೇಂದ್ರ ನಾಥ್ ಮತ್ತು ಅಮ್ರಿ ತಂಡದೊಂದಿಗೆ ಸ್ಕ್ರಿಪ್ಟ್ ಕೆಲಸ ಮಾಡುತ್ತಿದ್ದಾರೆ. ಇದೀಗ ಬ್ಯಾಡ್ ಮ್ಯಾನರ್ಸ್ ರಿಲೀಸ್‌ಗೆ ರೆಡಿಯಾಗುತ್ತಿದ್ದು, ಅದರ ನಂತರ ಪಕ್ಕಾ ಮಾಸ್ ಎಂಟರ್‌ಟೈನರ್ ಆಗಿರುವ ವಿರಾಟ್ ಸಿನಿಮಾ ಶುರು ಮಾಡಲಿದ್ದೇವೆ' ಎನ್ನುತ್ತಾರೆ.

ಚಿತ್ರದ ಬಗ್ಗೆ ಮಾತನಾಡಿದ ಜಯಣ್ಣ, ಸೂರಿ ಅವರಂತಹ ನಿರ್ದೇಶಕರ ಜೊತೆ ಕೆಲಸ ಮಾಡಬೇಕೆಂಬುದು ನನ್ನ ಬಹುದಿನಗಳ ಕನಸು. ಅಲ್ಲದೆ, ರಾಯಲ್‌ ಸಿನಿಮಾ ಮೂಲಕ ಈಗಾಗಲೇ ವಿರಾಟ್ ಜೊತೆಗೆ ಕೆಲಸ ಮಾಡುತ್ತಿದ್ದು, ಇದೀಗ ಸೂರಿ ಅವರ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾದಲ್ಲಿ ವಿರಾಟ್ ಜೊತೆ ಕೆಲಸ ಮಾಡಲಿದ್ದೇವೆ ಎನ್ನುತ್ತಾರೆ. 

ನನ್ನ ಅಚ್ಚುಮೆಚ್ಚಿನ ನಿರ್ದೇಶಕರೊಬ್ಬರ ಜೊತೆ ಕೆಲಸ ಮಾಡುವ ಕನಸು ನನಸಾಗಿದೆ: ವಿರಾಟ್

ಕನ್ನಡ ಚಿತ್ರರಂಗದಲ್ಲಿ ಹಂತ ಹಂತವಾಗಿ ತಮ್ಮದೇ ಆದ ಛಾಪು ಮೂಡಿಸುತ್ತಿರುವ ನಟ ವಿರಾಟ್, ಸೂರಿ ಅವರ ನಿರ್ದೇಶನದಲ್ಲಿ ಕೆಲಸ ಮಾಡುತ್ತಿರುವುದು ನನ್ನ ಕನಸು ನನಸಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. 

'ನನ್ನ ಕಾಲೇಜು ದಿನಗಳಲ್ಲಿ ಸೂರಿ ಅವರ ಚಿತ್ರಗಳನ್ನು ನೋಡುತ್ತಾ ಕಳೆದಿದ್ದೆ. ನಾನು ಪುನೀತ್ ರಾಜ್‌ಕುಮಾರ್ ಅಭಿನಯದ ಅವರ ಜಾಕಿ ಚಿತ್ರದ ಹಾಡಿನಲ್ಲಿ ನಾನು ಕೂಡ ಅಭಿನಯಿಸಿದ್ದೇನೆ. ನಾನು ಅವರ ದುನಿಯಾವನ್ನು ಹಲವಾರು ಬಾರಿ ನೋಡಿದ್ದೇನೆ ಮತ್ತು ಇಂದು ನನಗೆ ನನ್ನ ನೆಚ್ಚಿನ ನಿರ್ದೇಶಕರೊಬ್ಬರೊಂದಿಗೆ ಕೆಲಸ ಮಾಡುವ ಅವಕಾಶ ಸಿಗುತ್ತಿದೆ. ನನ್ನ ವೃತ್ತಿಜೀವನದ ಬೆನ್ನೆಲುಬಾಗಿರುವ ಜಯಣ್ಣ ಅವರ ಬೆಂಬಲವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ' ಎಂದು ಅವರು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು; Video!

SCROLL FOR NEXT