ಪವನ್ ಕಲ್ಯಾಣ್-ಪ್ರಭಾಸ್ 
ಸಿನಿಮಾ ಸುದ್ದಿ

ವಾಟ್ಸಾಪ್ ಸ್ಟೇಟಸ್ ವಿಚಾರ: ಪ್ರಭಾಸ್ ಅಭಿಮಾನಿಯಿಂದ ಪವನ್ ಕಲ್ಯಾಣ್ ಅಭಿಮಾನಿಯ ಬರ್ಬರ ಹತ್ಯೆ

ಆಂಧ್ರಪ್ರದೇಶ ರಾಜ್ಯದಲ್ಲಿ ಅಭಿಮಾನಿಗಳ ಕಾಳಗದಲ್ಲಿ ಅಮಾಯಕ ಯುವಕನೊಬ್ಬ ಸಾವನ್ನಪ್ಪಿದ್ದು, ಇದು ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ವಾಟ್ಸಾಪ್ ಸ್ಟೇಟಸ್ ವಿಚಾರವಾಗಿ ಸಣ್ಣ ಭಿನ್ನಾಭಿಪ್ರಾಯ ವಿಕೋಪಕ್ಕೆ ತಿರುಗಿದೆ.

ಆಂಧ್ರಪ್ರದೇಶ ರಾಜ್ಯದಲ್ಲಿ ಅಭಿಮಾನಿಗಳ ಕಾಳಗದಲ್ಲಿ ಅಮಾಯಕ ಯುವಕನೊಬ್ಬ ಸಾವನ್ನಪ್ಪಿದ್ದು, ಇದು ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ವಾಟ್ಸಾಪ್ ಸ್ಟೇಟಸ್ ವಿಚಾರವಾಗಿ ಸಣ್ಣ ಭಿನ್ನಾಭಿಪ್ರಾಯ ವಿಕೋಪಕ್ಕೆ ತಿರುಗಿದ್ದು ಪ್ರಭಾಸ್ ಅಭಿಮಾನಿಯೊಬ್ಬ ಪವನ್ ಕಲ್ಯಾಣ್ ಅಭಿಮಾನಿಯನ್ನು ಹತ್ಯೆ ಮಾಡಿದ್ದಾನೆ.

ಕಿಶೋರ್ ಮತ್ತು ಹರಿ ಕುಮಾರ್ ಎಂಬ ಇಬ್ಬರು ಯುವ ಉದ್ಯೋಗಿಗಳು ಮನೆಗೆ ಪೇಂಟಿಂಗ್ ಕೆಲಸಕ್ಕಾಗಿ ಅಟ್ಟಿಲಿಗೆ ತೆರಳಿದ್ದರು. ಕಿಶೋರ್ ಪವನ್ ಕಲ್ಯಾಣ್‌ ವಾಟ್ಸಾಪ್ ಸ್ಟೇಟಸ್ ಹಾಕಿದ್ದರು. ಅದನ್ನು ಹರಿಕುಮಾರ್ ಪ್ರಭಾಸ್ ಫೋಟೋದೊಂದಿಗೆ ಬದಲಾಯಿಸುವಂತೆ ಒತ್ತಾಯಿಸಿದರು.

ಈ ಬಗ್ಗೆ ಲಘುವಾದ ಚರ್ಚೆಯು ಗಂಭೀರ ಸ್ವರೂಪಕ್ಕೆ ತಿರುಗಿದೆ. ನಂತರ ಆಕ್ರೋಶಗೊಂಡ ಪ್ರಭಾಸ್ ಅಭಿಮಾನಿ ಹರಿ ಕುಮಾರ್ ತನ್ನ ತಾಳ್ಮೆ ಕಳೆದುಕೊಂಡು ನೆಲದಿಂದ ರಾಡ್ ತಂದು ಕಿಶೋರ್ ತಲೆಗೆ ಅನೇಕ ಬಾರಿ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಕಿಶೋರ್ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ.

ಇಂತಹ ಘಟನೆ ನಡೆದಿರುವುದು ಇದೇ ಮೊದಲಲ್ಲ, ಈ ಹಿಂದೆ 2020ರ ಏಪ್ರಿಲ್ 24 ರಂದು ವಿಲ್ಲುಪುರಂನಲ್ಲಿ ರಜನಿಕಾಂತ್ ಅಭಿಮಾನಿಯೊಬ್ಬರು ಕೊರೊನಾವೈರಸ್‌ಗೆ ಹೆಚ್ಚು ಕೊಡುಗೆ ನೀಡಿದವರ ಬಗ್ಗೆ ವಿಜಯ್ ಅಭಿಮಾನಿಯೊಂದಿಗೆ ಜಗಳವಾಡಿದರು. ಇದರಿಂದ ಕುಪಿತಗೊಂಡ ರಜನಿಕಾಂತ್ ಅಭಿಮಾನಿ ವಿಜಯ್ ಬೆಂಬಲಿಗನನ್ನು ತಳ್ಳಿ, ಆತನನ್ನು ಸಾಯಿಸುವ ಹಂತಕ್ಕೆ ಪರಿಸ್ಥಿತಿ ಉಲ್ಬಣಿಸಿತು.

ತೆಲುಗು ಭಾಷಿಕ ಪ್ರೇಕ್ಷಕರು ದೊಡ್ಡ ಚಿತ್ರಪ್ರೇಮಿಗಳು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ನಾಯಕನ ಆರಾಧನೆ ಇದೆ, ಮತ್ತು ಬೆಂಬಲಿಗರು ತಮ್ಮ ನೆಚ್ಚಿನ ನಾಯಕ ಮುಖ್ಯಾಂಶಗಳಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಲು ಯಾವುದೇ ಹಂತಕ್ಕೂ ಹೋಗುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT