ಸಿನಿಮಾ ಸುದ್ದಿ

ಸಿಎಂ ಸಿದ್ದರಾಮಯ್ಯ ಬಯೋಪಿಕ್ 'ಲೀಡರ್ ರಾಮಯ್ಯ': ವಿಜಯ್ ಸೇತುಪತಿ ಡೇಟ್ಸ್ ಗಾಗಿ ಕಾಯುತ್ತಿದೆ ಚಿತ್ರತಂಡ!

Shilpa D

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನಾಧಾರಿತ ಚಿತ್ರದ ಕಥೆಯನ್ನು ಕಳೆದ ಏಳು ತಿಂಗಳಿನಿಂದ ಸಿದ್ದಪಡಿಸಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರ ಬಯೋಪಿಕ್‌ಗೆ 'ಲೀಡರ್ ರಾಮಯ್ಯ' ಎಂದು ಟೈಟಲ್ ಇಡಲಾಗಿದೆ. ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಗೆ ತರಲು ಪ್ಲ್ಯಾನ್ ಕೂಡ ಮಾಡಿಕೊಳ್ಳಲಾಗಿದೆ.

ಲೀಡರ್ ರಾಮಯ್ಯ ಟೈಟಲ್ ಜೊತೆಗೆ  ಎ ಕಿಂಗ್ ರೈಸ್ಡ್ ಬೈ ದಿ ಪೀಪಲ್ ಎಂಬ ಟ್ಯಾಗ್ ಲೈನ್ ಒಳಗೊಂಡಿದೆ. ರಾಜ್ಯದ 24 ನೇ ಮುಖ್ಯಮಂತ್ರಿಯ ಜೀವನದ ಸುತ್ತ ಈ ಕತೆ ಸುತ್ತುತ್ತದೆ. ಸತ್ಯರತ್ನಂ ನಿರ್ದೇಶನದ ಈ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ ಎಂಬುದು ಲೇಟೆಸ್ಟ್ ಡೆವಲಪ್ ಮೆಂಟ್.

ಆಗಸ್ಟ್‌ನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಲು ನಿರ್ದೇಶಕರು ಸಿದ್ಧತೆಯಲ್ಲಿದ್ದಾರೆ. ತಮಿಳು ನಟ ವಿಜಯ್ ಸೇತುಪತಿಯನ್ನು ಕರೆತರಲು ಬಹಳ ಉತ್ಸುಕರಾಗಿರುವ ಚಿತ್ರದ ನಿರ್ಮಾಪಕರು ಅವರನ್ನು ಈಗಾಗಲೇ ಸಂಪರ್ಕಿಸಿದ್ದಾರೆ.

ತಂಡದ ಮಾಹಿತಿ ಪ್ರಕಾರ, ವಿಜಯ್ ಸೇತುಪತಿ ಈ ಚಿತ್ರದಲ್ಲಿ ನಟಿಸಲು ಹಸಿರು ನಿಶಾನೆ ತೋರಿಸಿದ್ದಾರೆ, ಸೇತು ಪತಿ ಅವರ ಡೇಟ್ಸ್ ಗಾಗಿ ಕಾಯಲು ಪ್ರೊಡಕ್ಷನ್ ಹೌಸ್ ಸಿದ್ಧವಾಗಿದೆ. ಸಿದ್ದರಾಮಯ್ಯನವರ ಪಾತ್ರದಲ್ಲಿ ವಿಜಯ್ ಸೇತುಪತಿ ನಟಿಸಲಿದ್ದು, ವಕೀಲರಾಗಿ ವೃತ್ತಿ ಪ್ರಯಾಣ ಆರಂಭಿಸಿದಾಗಿನಿಂದ ಕಥೆ ಪ್ರಾರಂಭವಾಗಲಿದೆ. ಈ ಬಯೋಪಿಕ್ಸ್ ನಲ್ಲಿ 20 ರಿಂದ 30 ನಿಮಿಷಗಳಲ್ಲಿ ಸಿಎಂ ಸಿದ್ದರಾಮಯ್ಯ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

ಬಯೋಪಿಕ್ ನ ಮೊದಲು ಭಾಗ 1 ರಲ್ಲಿ ಸಿದ್ಧರಾಮಯ್ಯನ ಬೆಳವಣಿಗೆಯ ಬಾಲ್ಯದ ದಿನಗಳು ಮತ್ತು ಪ್ರೌಢಾವಸ್ಥೆಯ ಪ್ರಯಾಣ ತಿಳಿಸುತ್ತದೆ. ಸಿದ್ಧರಾಮಯ್ಯನ ಕಿರಿಯ ಆವೃತ್ತಿಯನ್ನು ನಿರ್ವಹಿಸುವ ಯುವ ನಟನ ಹುಡುಕಾಟದಲ್ಲಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರು ಇರುತ್ತಾರೆ. 

ಶಶಾಂಕ್ ಶೇಷಗಿರಿ, ಹರಿಚರಣ್ ಮತ್ತು ಸತ್ಯರತ್ನ

ನಾಯಕಿಯರ ಫೈನಲ್ ಆದಾಗ ಉಳಿದ ಕಲಾವಿದರ ಘೋಷಣೆ ಮಾಡಲಾಗುತ್ತದೆ. ಪ್ರಾಜೆಕ್ಟ್ ನ ಭಾಗವಾಗಿ ಕನ್ನಡದಿಂದ ಕೆಲವು ಸೂಪರ್‌ಸ್ಟಾರ್‌ಗಳನ್ನು ಕರೆತರಲು ನಿರ್ದೇಶಕರು ಚಿಂತಿಸುತ್ತಿದ್ದು, ಈ ಸಂಬಂಧ ಈಗಾಗಲೇ ಹಲವು ನಟರ ಜೊತೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಲೀಡರ್ ರಾಮಯ್ಯ ಸಿನಿಮಾಗೆ ಶಶಾಂಕ್ ಶೇಷಗಿರಿ ಸಂಗೀತ ನೀಡಲಿದ್ದಾರೆ. ಸಿನಿಮಾದ ಮೊದಲ ಭಾಗದಲ್ಲಿ 3 ರಿಂದ 4 ಹಾಡುಗಳನ್ನು ಹೊರತರಲು ಗಾಯಕ-ಸಂಗೀತ ನಿರ್ದೇಶಕರು ಕೆಲಸ ಮಾಡುತ್ತಿದ್ದಾರೆ. ಅವರು ಈಗಾಗಲೇ ಗಾಯಕ ಹರಿಚರಣ್ ಅವರಿಂದ ಒಂದು ಹಾಡನ್ನು ರೆಕಾರ್ಡ್ ಮಾಡಿಸಿದ್ದಾರೆ.

ಇದು ಶಶಾಂಕ್ ಅವರ ನಾಲ್ಕನೇ ಪ್ರಾಜೆಕ್ಟ್ ಆಗಿದ್ದು, ಅವರು ಈ ಹಿಂದೆ ಉಪ್ಪು ಹುಳಿ ಖಾರ, ರಾಂಧವ ಮತ್ತು ಗೌಳಿಯಲ್ಲಿ ಕೆಲಸ ಮಾಡಿದ್ದಾರೆ. ಹಯತ್ ಪೀರಾ ಮತ್ತು ಚನ್ನಪ್ಪ ಹಾಲಳ್ಳಿ ಜಂಟಿಯಾಗಿ ಸಿನಿಮಾ ನಿರ್ಮಿಸಿದ್ದಾರೆ. ಉದಯ್ ಲೀಲಾ ಚಿತ್ರದ ಛಾಯಾಗ್ರಾಹಕರಾಗಿದ್ದಾರೆ.

SCROLL FOR NEXT