ಅಭಿಷೇಕ್ ಅಂಬರೀಷ್ ಜೊತೆಗೆ ನಟ ಧನ್ವೀರ್. 
ಸಿನಿಮಾ ಸುದ್ದಿ

ಸ್ಯಾಂಡಲ್‌ವುಡ್‌ನಲ್ಲಿ ಶುರುವಾಯ್ತು 'ವಾಮನ' ಅಬ್ಬರ: 'ಮುದ್ದು ರಾಕ್ಷಸಿ' ಹಾಡು ಬಿಡುಗಡೆ, ಸೆಪ್ಟೆಂಬರ್'ಗೆ ಚಿತ್ರ ತೆರೆಗೆ

ನಟ ಧನ್ವೀರ್​ ಮಾಸ್​ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಹುನಿರೀಕ್ಷಿತ 'ವಾಮನ' ಚಿತ್ರದ ವಾ..ವಾ..ವಾಮನ ಮಾಸ್​ ಸಾಂಗ್​ ಬಿಡುಗಡೆಯಾಗಿ ಹಿಟ್​ ಆಗಿತ್ತು. ಇದೀಗ ಚಿತ್ರತಂಡ ಚಿತಂರದ ಮತ್ತೊಂದು ರೊಮ್ಯಾಂಟಿಕ್​ ಸಾಂಗ್​ ಅನ್ನು ಬಿಡುಗಡೆಗೊಳಿಸಿದೆ.

ನಟ ಧನ್ವೀರ್​ ಮಾಸ್​ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಹುನಿರೀಕ್ಷಿತ 'ವಾಮನ' ಚಿತ್ರದ ವಾ..ವಾ..ವಾಮನ ಮಾಸ್​ ಸಾಂಗ್​ ಬಿಡುಗಡೆಯಾಗಿ ಹಿಟ್​ ಆಗಿತ್ತು. ಇದೀಗ ಚಿತ್ರತಂಡ ಚಿತಂರದ ಮತ್ತೊಂದು ರೊಮ್ಯಾಂಟಿಕ್​ ಸಾಂಗ್​ ಅನ್ನು ಬಿಡುಗಡೆಗೊಳಿಸಿದೆ.

ವಿ.ನಾಗೇಂದ್ರ ಪ್ರಸಾದ್​ ಸಾಹಿತ್ಯ ಬರೆದಿರುವ ಹಾಡಿಗೆ ಅಜನೀಶ್​ ಲೋಕನಾಥ್​ ಟ್ಯೂನ್​ ಹಾಕಿದ್ದಾರೆ. ವಿಜಯ್​ ಪ್ರಕಾಶ್​ ಹಾಗೂ ಹರ್ಷಿಕಾ ದೇವನಾಥ್​ ಧ್ವನಿಯಾಗಿದ್ದಾರೆ. ಹಾಡಿಗೆ ಧನ್ವೀರ್​ ಹಾಗೂ ರೀಷ್ಮಾ ನಾಣಯ್ಯ ಹೆಜ್ಜೆ ಹಾಕಿದ್ದಾರೆ.

ಬೆಂಗಳೂರಿನ ಮಂತ್ರಿ ಮಾಲ್​ನಲ್ಲಿ ಚಿತ್ರದ 'ಮುದ್ದು ರಾಕ್ಷಸಿ' ಹಾಡನ್ನು ಜೂನಿಯರ್​ ರೆಬಲ್​ ಸ್ಟಾರ್​ ಅಭಿಷೇಕ್​ ಅಂಬರೀಶ್ ಬಿಡುಗಡೆಗೊಳಿಸಿದರು.​

ಬಳಿಕ ಮಾತನಾಡಿದ ಅಭಿಷೇಕ್​ ಅವರು, "ನಾನು ಈಗಷ್ಟೇ ಮುದ್ದು ರಾಕ್ಷಸಿ ಹಾಡು ನೋಡಿದೆ. ಒಂದು ಸಾಂಗ್ ಹಿಟ್ ಆಗಬೇಕು ಅಂದರೆ ಅದರ ಕ್ರೆಡಿಟ್ ಹೀರೋಗೂ ಅಲ್ಲ ಹೀರೋಯಿನ್​ಗೂ ಅಲ್ಲ, ಮ್ಯೂಸಿಕ್ ಡೈರೆಕ್ಟರ್ ಹಾಗೂ ಸಾಹಿತ್ಯ ಬರೆದವರಿಗೆ ಸಲ್ಲಬೇಕು. ಅವರ ಎಫರ್ಟ್ ಜಾಸ್ತಿ ಇರುತ್ತದೆ. ನಮ್ಮ ಗೆಳೆಯ ಧನ್ವೀರ್ ಇಷ್ಟು ಚೆನ್ನಾಗಿ ರೋಮ್ಯಾನ್ಸ್ ಮಾಡ್ತಾನೆ ಎಂದು ಗೊತ್ತಿರಲಿಲ್ಲ. ಬೈ ಟು ಲವ್ ಸಿನಿಮಾದಲ್ಲಿ ಸ್ವಲ್ಪ ನೋಡಿದ್ದೆವು. ಈಗ ವಾಮನ ಮುಖಾಂತರ ಕಂಪ್ಲೀಟ್ ಕಮರ್ಷಿಯಲ್ ಪ್ಯಾಕೇಜ್, ಕ್ಯೂಟ್ ಲವರ್ ಬಾಯ್ ರೀತಿ ಕಾಣಿಸುತ್ತಿದ್ದಾನೆ" ಎಂದು ಕೊಂಡಾಡಿದರು.

ವಾಮನ ಸಿನಿಮಾದಲ್ಲಿ ಧನ್ವೀರ್‌ಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ಅಭಿನಯಿಸಿದ್ದಾರೆ. ಇವರಲ್ಲದೇ ತಾರಾ, ಸಂಪತ್‌, ಆದಿತ್ಯ ಮೆನನ್‌, ಶಿವರಾಜ್ ಕೆ.ಆರ್.ಪೇಟೆ, ಅವಿನಾಶ್‌, ಅಚ್ಯುತ್‌ ಕುಮಾರ್‌, ಕಾಕ್ರೋಚ್‌ ಸುಧಿ, ಭೂಷಣ್‌ ಮುಂತಾದವರು ಮುಖ್ಯಭೂಮಿಕೆಯಲ್ಲಿದ್ದಾರೆ. ಈಕ್ವಿನಾಕ್ಸ್ ಗ್ಲೋಬಲ್‌ ಎಂಟರ್‌ಟೈನ್ಮೆಂಟ್‌ ಬ್ಯಾನರ್‌ ಅಡಿಯಲ್ಲಿ ಚೇತನ್‌ ಗೌಡ ಅದ್ಧೂರಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಯುವ ನಿರ್ದೇಶಕ ಶಂಕರ್‌ ರಾಮನ್‌ ರಚಿಸಿ ನಿರ್ದೇಶಿಸಿದ್ದಾರೆ. ಮಹೇಂದ್ರ ಸಿಂಹ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಅರ್ಜುನ್ ರಾಜ್, ವಿಕ್ರಮ್ ಮೋರ್ ಮತ್ತು ಜಾಲಿ ಬಾಸ್ಟಿನ್ ಆ್ಯಕ್ಷನ್, ನವೀನ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಸೆನ್ಸಾರ್ ಮಂಡಳಿಯಿಂದ ಕ್ರಿಯರೆನ್ಸ್ ಸಿಕ್ಕಿದ ಕೂಡಲೇ ಸೆಪ್ಟೆಂಬರ್ ತಿಂಗಳ ಮಧ್ಯದಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT