ನಿರ್ದೇಶಕ ಪ್ರೇಮ್, ರಕ್ಷಿತಾ, ದರ್ಶನ್, ನಿರ್ಮಾಪಕ ವೆಂಕಟ್ ಕೋಣಂಕಿ ಮತ್ತು ಸುಪ್ರಿತ್ 
ಸಿನಿಮಾ ಸುದ್ದಿ

ಎರಡು ದಶಕಗಳ ನಂತರ ಮತ್ತೆ ನಟ ದರ್ಶನ್ ಮತ್ತು ಪ್ರೇಮ್ ಕಾಂಬಿನೇಶನ್‌ನಲ್ಲಿ ಹೊಸ ಸಿನಿಮಾ!

ದರ್ಶನ್, ನಿರ್ಮಾಪಕ ವೆಂಕಟ್ ಕೋಣಂಕಿ, ನಿರ್ದೇಶಕ ಪ್ರೇಮ್, ರಕ್ಷಿತಾ ಮತ್ತು ಸುಪ್ರಿತ್ ಅವರಿರುವ ಫೊಟೋವೊಂದನ್ನು ಕೆವಿಎನ್ ಪ್ರೊಡಕ್ಷನ್ಸ್‌ ಟ್ವೀಟ್ ಮಾಡಿದ್ದು, ಸಿನಿಮಾ ಮಾಡುವುದಾಗಿ ಅಧಿಕೃತ ಪ್ರಕಟಣೆ ತಿಳಿಸಿದೆ.

ಕೆವಿಎನ್ ಪ್ರೊಡಕ್ಷನ್ಸ್ ಎರಡು ದಿನಗಳ ಹಿಂದೆ 'ದೊಡ್ಡ ಘೋಷಣೆ' ನೀಡಲಿದ್ದೇವೆ ಎಂದು ಟ್ವೀಟ್ ಮಾಡಿದಾಗಿನಿಂದ, ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ನಿರೀಕ್ಷೆ ವ್ಯಕ್ತವಾಗಿತ್ತು. ಈ ಘೋಷಣೆಯು ಕುತೂಹಲದಿಂದ ಕಾಯುತ್ತಿರುವ 'ಯಶ್ 19' ಚಿತ್ರಕ್ಕೆ ಸಂಬಂಧಿಸಿರಬಹುದು ಎಂದು ಹಲವರು ಊಹಿಸಿದ್ದರು. 

ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಿರ್ಮಾಣ ಸಂಸ್ಥೆಯು ಕೈಜೋಡಿಸುತ್ತಿದೆ ಎಂಬುದು ಸಿನಿಮಾ ಎಕ್ಸ್‌ಪ್ರೆಸ್‌ಗೆ ತಿಳಿದುಬಂದಿತ್ತು. ದರ್ಶನ್, ನಿರ್ಮಾಪಕ ವೆಂಕಟ್ ಕೋಣಂಕಿ, ನಿರ್ದೇಶಕ ಪ್ರೇಮ್, ರಕ್ಷಿತಾ ಮತ್ತು ಸುಪ್ರಿತ್ ಅವರಿರುವ ಫೊಟೋವೊಂದನ್ನು ಕೆವಿಎನ್ ಪ್ರೊಡಕ್ಷನ್ಸ್‌ ಟ್ವೀಟ್ ಮಾಡಿದ್ದು, ಸಿನಿಮಾ ಮಾಡುವುದಾಗಿ ಅಧಿಕೃತ ಪ್ರಕಟಣೆ ತಿಳಿಸಿದೆ.

ದರ್ಶನ್ ಅವರು ಈ ಪ್ರೊಡಕ್ಷನ್ ಹೌಸ್‌ನೊಂದಿಗೆ ಕೆಲಸ ಮಾಡುವುದು ಇದೇ ಮೊದಲು. ಆದರೆ, ಚಾಲೆಂಜಿಂಗ್ ಸ್ಟಾರ್ ಮತ್ತು ನಿರ್ದೇಶಕ ಪ್ರೇಮ್ ಇಪ್ಪತ್ತು ವರ್ಷಗಳ ಹಿಂದೆ 2003ರಲ್ಲಿ ತೆರೆಕಂಡ ಕರಿಯ ಚಿತ್ರಕ್ಕಾಗಿ ಕೆಲಸ ಮಾಡಿದ್ದರು. ಈ ಚಿತ್ರವು ಆಗ ದೊಡ್ಡ ಹಿಟ್ ಆಗಿತ್ತು. ಅದಾದ ಎರಡು ದಶಕಗಳ ನಂತರ ಮತ್ತೆ ಒಂದಾಗುತ್ತಿದ್ದಾರೆ.

ಕೆವಿಎನ್ ಪ್ರೊಡಕ್ಷನ್ಸ್ ಮುಂಬರುವ ಸಿನಿಮಾವನ್ನು ದೊಡ್ಡ ಪ್ರಮಾಣದಲ್ಲಿ ಮಾಡಲು ಯೋಜಿಸುತ್ತಿದೆ ಎಂದು ಕೆಲವು ಮೂಲಗಳು ತಿಳಿಸಿವೆ. ಇದು ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಯೋಜನೆಗಳಲ್ಲಿ ಒಂದಾಗಬಹುದು ಎನ್ನಲಾಗಿದೆ. ಐತಿಹಾಸಿಕ, ಪೌರಾಣಿಕ ಅಥವಾ ಔಟ್-ಅಂಡ್-ಔಟ್ ಕಮರ್ಷಿಯಲ್ ಎಂಟರ್‌ಟೈನರ್ ಆಗಿರಬಹುದೇ ಎಂಬುದಕ್ಕೆ ಯಾವುದೇ ಸುಳಿವನ್ನು ಬಿಟ್ಟುಕೊಟ್ಟಿಲ್ಲ. ಆದಾಗ್ಯೂ, ಕಥಾವಸ್ತುವಿನ ಬಗ್ಗೆ ಚಿತ್ರತಂಡ ಇನ್ನೂ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಕೆಡಿ ನಂತರ ಈ ಪ್ರೊಡಕ್ಷನ್ ಹೌಸ್‌ನೊಂದಿಗೆ ಪ್ರೇಮ್ ಅವರ ಎರಡನೇ ಸಿನಿಮಾ ಇದಾಗಲಿದೆ.

ಪ್ರೇಮ್ ಮತ್ತು ದರ್ಶನ್ ತಮ್ಮ ಮುಂದಿರುವ ಇತರ ಯೋಜನೆಗಳನ್ನು ಪೂರ್ಣಗೊಳಿಸಿದ ನಂತರ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ. ಸದ್ಯ ದರ್ಶನ್ ಅವರು ರಾಕ್‌ಲೈನ್ ಪ್ರೊಡಕ್ಷನ್‌ ನಿರ್ಮಾಣದ 'ಕಾಟೇರ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನು ತರುಣ್ ಕಿಶೋರ್ ಸುಧೀರ್ ನಿರ್ದೇಶಿಸುತ್ತಿದ್ದಾರೆ. ನಂತರ, ಪ್ರಕಾಶ್ ಜಯರಾಮ್ ನಿರ್ದೇಶನದ ಸಿನಿಮಾದಲ್ಲಿಯೂ ಕೆಲಸ ಮಾಡಲು ಮುಂದಾಗಿದ್ದಾರೆ. ಈಮಧ್ಯೆ, ಪ್ರೇಮ್ ಸದ್ಯ ಕೆಡಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರದಲ್ಲಿ ಧ್ರುವ ಸರ್ಜಾ ಮತ್ತು ಬಾಲಿವುಡ್ ನಟ ಸಂಜಯ್ ದತ್ ಇತರ ಟಾಪ್ ನಟರು ನಟಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT