ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟ ದಳಪತಿ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ಅವರು ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಜೇಸನ್ ಸಂಜಯ್ ಅವರ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಪ್ರತಿಷ್ಠಿತ ‘ಲೈಕಾ ಪ್ರೊಡಕ್ಷನ್ಸ್’ ಸಂಸ್ಥೆ ಬಂಡವಾಳ ಹೂಡಲಿದೆ. ಸೋಶಿಯಲ್ ಮೀಡಿಯಾ ಮೂಲಕ ಈ ಹೊಸ ಸುದ್ದಿಯನ್ನು ‘ಲೈಕಾ ಪ್ರೊಡಕ್ಷನ್ಸ್’ ಹಂಚಿಕೊಂಡಿದೆ.
ಕತ್ತಿ, ದರ್ಬಾರ್, ವಡಾ ಚೆನ್ನೈ, ಪೊನ್ನಿಯಿನ್ ಸೆಲ್ವನ್ ಮತ್ತು ಇಂಡಿಯನ್ 2 ನಂತಹ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿದ ಖ್ಯಾತಿ ‘ಲೈಕಾ ಪ್ರೊಡಕ್ಷನ್ಸ್’ ಸಂಸ್ಥೆಗೆ ಸಲ್ಲುತ್ತದೆ.
ಇದನ್ನು ಓದಿ: 'ದಿ ವೆಕೆಂಟ್ ಹೌಸ್' ಮೂಲಕ ನಿರ್ದೇಶಕಿಯಾಗುತ್ತಿದ್ದಾರೆ 'ಲೋಕಲ್ ಟ್ರೈನ್' ಖ್ಯಾತಿಯ ನಟಿ ಎಸ್ತಾರ್ ನರೋನಾ!
ನಮ್ಮ ಮುಂದಿನ ಸಿನಿಮಾ ಜೇಸನ್ ಸಂಜಯ್ ಜೊತೆ ಎಂಬುದನ್ನು ತಿಳಿಸಲು ಖುಷಿ ಆಗುತ್ತಿದೆ. ಜೇಸನ್ ಅವರು ಲಂಡನ್ನಲ್ಲಿ ಶಿಕ್ಷಣ ಪಡೆದುಕೊಂಡಿದ್ದಾರೆ. ಟೊರಾಂಟೋ ಫಿಲ್ಮ್ ಸ್ಕೂಲ್ನಲ್ಲಿ ಸಿನಿಮಾ ಮೇಕಿಂಗ್ ಬಗ್ಗೆ ಡಿಪ್ಲೊಮಾ ಪಡೆದಿದ್ದಾರೆ. ಅವರು ತಮ್ಮ ಸ್ಕ್ರಿಪ್ಟ್ ವಿವರಿಸಿದಾಗ ನಮಗೆ ಒಂದು ಸಿನಿಮೀಯ ಅನುಭವ ನೀಡಿತು. ಆದ್ದರಿಂದ ನಾವು ನಿರ್ಮಾಣ ಮಾಡಲು ಮುಂದಾದೆವು. ನಿರ್ದೇಶಕರಿಗೆ ಇರಬೇಕಾದ ಎಲ್ಲ ಮುಖ್ಯ ಗುಣಗಳು ಜೇಸನ್ ಸಂಜಯ್ ಅವರಿಗೆ ಇದೆ ಎಂದು ನಿರ್ಮಾಪಕ ಸುಭಾಸ್ಕರ್ ಅವರು ಹೇಳಿದ್ದಾರೆ.
ಜೇಸನ್ ಸಂಜಯ್ ಅವರು ಈ ಹಿಂದೆ ಪುಲ್ ದಿ ಟ್ರಿಗರ್ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ.