ಕೆಮಿಕಲ್ ನೀರು ಕಣ್ಣಿಗೆ ತಾಕಿ ಒದ್ದಾಡುತ್ತಿರುವ ಸಂಗೀತಾ ಹಾಗೂ ಪ್ರತಾಪ್. 
ಸಿನಿಮಾ ಸುದ್ದಿ

ಬಿಗ್ ಬಾಸ್ ಕನ್ನಡ 10: ಟಾಸ್ಕ್ ವೇಳೆ ಕೆಮಿಕಲ್ ನೀರು ಹಾಕಿ ಸ್ಪರ್ಧಿಗಳ ಅತಿರೇಕದ ವರ್ತನೆ, ಮನೆಯಿಂದ ಹೊರಬಂದ್ರಾ ಪ್ರತಾಪ್, ಸಂಗೀತಾ?

ಬಿಗ್ ಬಾಸ್ ಕನ್ನಡ ಸೀಸನ್ 10' ಶೋನಲ್ಲಿ ಟಾಸ್ಕ್ ಆಡುವಾಗ ಗಾಯ ಆಗಿ ಡ್ರೋನ್ ಪ್ರತಾಪ್ ಹಾಗೂ ಸಂಗೀತಾ ಅವರು ಆಸ್ಪತ್ರೆ ಸೇರಿದ್ದಾರೆಂದು ಹೇಳಲಾಗುತ್ತಿದೆ.

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10' ಶೋನಲ್ಲಿ ಟಾಸ್ಕ್ ಆಡುವಾಗ ಗಾಯ ಆಗಿ ಡ್ರೋನ್ ಪ್ರತಾಪ್ ಹಾಗೂ ಸಂಗೀತಾ ಅವರು ಆಸ್ಪತ್ರೆ ಸೇರಿದ್ದಾರೆಂದು ಹೇಳಲಾಗುತ್ತಿದೆ.

ಬಿಗ್‌ಬಾಸ್‌ ಮನೆಯೊಳಗೆ ಬಿಗ್‌ಬಾಸ್‌ ಲೋಕ ಆಟದಲ್ಲಿ ಗಂಧರ್ವರು ಮತ್ತು ರಾಕ್ಷಸರು ಎಂದು ಎರಡು ಗುಂಪುಗಳಾನ್ನಾಗಿ ಮಾಡಿ, ಹಲವು ಟಾಸ್ಕ್ ಗಳನ್ನು ನೀಡಲಾಗಿದೆ. ಟಾಸ್ಕ್ ವೇಳೆ ರಾಕ್ಷಸರು ಮತ್ತು ಗಂಧರ್ವರ ಗುಂಪುಗಳ ನಡುವೆ ಭಾರೀ ಕದನವೇ ನಡೆದಿದೆ.

ಟಾಸ್ಕ್ ವೇಳೆ ಹಲವರು ಟಾರ್ಗೆಟ್ ಮಾಡಿಕೊಂಡು ಆಟ ಆಡಿದ್ದು ಕಂಡು ಬಂದಿದೆ. ಅದರಲ್ಲೂ ಸಂಗೀತಾ ಮತ್ತು ವಿನಯ್ ಮಧ್ಯೆ, ಕಾರ್ತಿಕ್ ಮತ್ತು ವಿನಯ್ ಮಧ್ಯೆ, ಸಂಗೀತಾ ಮತ್ತು ನಮ್ರತಾ ಮಧ್ಯೆ ವೈಮನಸ್ಸು ಮೂಡಿದ್ದು, ವೈಯಕ್ತಿಕವಾಗಿ ಆಟಗಳನ್ನು ಆಡುತ್ತಿದ್ದಾರೆ.

ಈ ಟಾಸ್ಕ್‌ನಲ್ಲಿ ಒಬ್ಬರಿಗೊಬ್ಬರು ಕೆಣಕಿಕೊಳ್ಳುತ್ತಿದ್ದು, ಇದರಿಂದ ಮನೆಯಲ್ಲಿ ಅನಾಹುತ ಆಗಬಹುದು ಎಂದು ಅಂದಾಜಿಸಲಾಗಿತ್ತು. ಅದೇ ರೀತಿಯೇ ಆಗಿದೆ.

ಟಾಸ್ಕ್ ವೊಂದರಲ್ಲಿ ಅವರ ಸಂಗೀತಾ ಹಾಗೂ ಡ್ರೋಣ್ ಪ್ರತಾಪ್ ಅವರ ಮುಖಕ್ಕೆ ಅತಿಯಾಗಿ ಕೆಮಿಕಲ್ ನೀರು ಹಾಕಿದ ಪರಿಣಾಮ ಇಬ್ಬರೂ ಅಸ್ವಸ್ಥಗೊಂಡಿದ್ದಾರೆ. ಇದರಿಂದ ದಿಢೀರ್ ನೆ ಡ್ರೋನ್ ಪ್ರತಾಪ್ ಮತ್ತು ಸಂಗೀತಾ ಮನೆಯಿಂದ ಹೊರ ಬಂದಿದ್ದಾರೆಂದು ತಿಳಿದುಬಂದಿದೆ.

ಈ ವಿಷಯದ ಕುರಿತಂತೆ ಚಾನೆಲ್‌ನವರಾಗಲೇ ಅಥವಾ ಬಿಗ್‌ಬಾಸ್‌ ಶೋಗೆ ಸಂಬಂಧಿಸಿದವರಾಗಲಿ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಸಂಗೀತಾ ಹಾಗೂ ಡ್ರೋನ್‌ ಪ್ರತಾಪ್‌ ಬಿಗ್‌ಬಾಸ್‌ ಮನೆಯಿಂದ ಹೊರಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂಬ ಮಾಹಿತಿ ಸುದ್ದಿ ಸಾಮಾಜಿಕ ಜಾಲತಾಣಘಳಲ್ಲಿ ವೈರಲ್ ಆಗಿದೆ.

ಜಿಯೋ ಸಿನಿಮಾ ಆಪ್‌ ಲೈವ್‌ನಲ್ಲಿ ಎಲ್ಲಾ ಸ್ಪರ್ಧಿಗಳು ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಡ್ರೋನ್ ಪ್ರತಾಪ್, ಸಂಗೀತಾ ಮಾತ್ರ ಕಾಣಿಸುತ್ತಿಲ್ಲ. ಇನ್ನು ಈ ಲೈವ್‌ನಲ್ಲಿ ಆಗಾಗ ಅಡಿಯೋ ಸಮಸ್ಯೆ ಆಗುತ್ತಿರುತ್ತದೆ. ಹಾಗಾಗಿ ಸ್ಪರ್ಧಿಗಳು ಪ್ರತಾಪ್, ಸಂಗೀತಾ ಬಗ್ಗೆ ಮಾತನಾಡಿದ್ದಾರೋ ಇಲ್ಲವೋ ಎಂಬುದೂ ಗೊತ್ತಾಗುತ್ತಿಲ್ಲ.

ಈ ಹಿಂದೆ 'ಹನಿ.. ಹನಿ' ಟಾಸ್ಕ್‌ನಲ್ಲಿ ತನಿಷಾ ಕುಪ್ಪಂಡ ಅವರು ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿದ್ದರು. ಎರಡು ದಿನಗಳ ಕಾಲ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ದೊಡ್ಮನೆಗೆ ಮರಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT