ಸಿನಿಮಾ ಸುದ್ದಿ

Kantara- Chapter 1: ಕಾಂತಾರ ಆಡಿಷನ್‌ಗೆ ಬರೋಬ್ಬರಿ 25 ಸಾವಿರ ಅರ್ಜಿ, ಆಯ್ಕೆಯಾದವರೆಷ್ಟು?

Ramyashree GN

ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ತಂಡ ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಕಾಂತಾರ- ಅಧ್ಯಾಯ 1ರ ನಿರ್ದೇಶನ ವಿಭಾಗಕ್ಕಾಗಿ ಭಾರತದಾದ್ಯಂತ ಸಲ್ಲಿಕೆಯಾಗಿದ್ದ 1000 ಅರ್ಜಿಗಳಲ್ಲಿ 15ಕ್ಕೂ ಹೆಚ್ಚು ವ್ಯಕ್ತಿಗಳನ್ನು ಇತ್ತೀಚೆಗೆ ಅಂತಿಮಗೊಳಿಸಿದೆ. ರಿಷಬ್ ಶೆಟ್ಟಿ ಅಭಿನಯದ ಈ ಚಿತ್ರವು ಇನ್ನೂ ತನ್ನ ಕಾಸ್ಟಿಂಗ್ ಅನ್ನು ಪೂರ್ಣಗೊಳಿಸಿಲ್ಲ.

ಈಮಧ್ಯೆ, ಚಿತ್ರದ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿರುವ ರಿಷಬ್ ಶೆಟ್ಟಿ, ಸಾಮಾಜಿಕ ಮಾಧ್ಯಮದಲ್ಲಿ ಚಿತ್ರಕ್ಕೆ ಕಲಾವಿದರು ಬೇಕಾಗಿದ್ದಾರೆ. 30 ರಿಂದ 60 ವರ್ಷ ವಯಸ್ಸಿನ ನಟರು ಮತ್ತು 18 ರಿಂದ 60 ವರ್ಷದೊಳಗಿನ ನಟಿಯರ ಅಗತ್ಯವಿರುವುದಾಗಿ ಕೇಳಿದ್ದರು. ಇದಕ್ಕೆ ವ್ಯಾಪಕ ಪ್ರತಿಕ್ರಿಯೆ ಲಭ್ಯವಾಗಿದ್ದು, ಬರೋಬ್ಬರಿ 25,000 ಮಂದಿ ಅರ್ಜಿ ಸಲ್ಲಿಸಿದ್ದಾರೆ. 

'ನಾವು ವಿವಿಧ ಪ್ರದೇಶಗಳ ರಂಗಭೂಮಿ ಹಿನ್ನೆಲೆ ಉಳ್ಳವರೂ ಸೇರಿದಂತೆ ವಿವಿಧ ಮಹತ್ವಾಕಾಂಕ್ಷಿ ಪ್ರತಿಭೆಗಳಿಂದ 25,000 ಅರ್ಜಿಗಳನ್ನು ಸ್ವೀಕರಿಸಿದ್ದೇವೆ' ಎಂದು ರಿಷಬ್ ಶೆಟ್ಟಿ ಮಾಹಿತಿ ಹಂಚಿಕೊಂಡಿದ್ದಾರೆ.

'ನಮ್ಮ 10 ತಂಡವು ಸದ್ಯ ಅರ್ಜಿದಾರರನ್ನು ಶೋಧಿಸುತ್ತಿದೆ. ಇದು ಸುಮಾರು ಒಂದು ವಾರ ತೆಗೆದುಕೊಳ್ಳುತ್ತದೆ. ಪ್ರಾಥಮಿಕವಾಗಿ ಸಲ್ಲಿಕೆಯಾಗಿರುವ ಹಲವಾರು ಅರ್ಜಿಗಳ ಪೈಕಿ, ಕ್ಷಣಿಕ ಒಲವುಗಳು ಅಥವಾ ಜನಪ್ರಿಯ ಪ್ರವೃತ್ತಿಗಳಿಂದ ಪ್ರಭಾವಿತವಾಗಿರುವುದಕ್ಕಿಂತ ಹೆಚ್ಚಾಗಿ ನಿರಂತರ ಮತ್ತು ಅಧಿಕೃತ ಆಸಕ್ತಿಯಿಂದ ಪ್ರಾಮಾಣಿಕವಾಗಿ ಸಲ್ಲಿಸಿರುವ ಅರ್ಜಿಗಳನ್ನು ಆಯ್ಕೆ ಮಾಡಬೇಕಿದೆ. ಇಷ್ಟೊಂದು ಅರ್ಜಿಗಳ ಪೈಕಿ ತಾಜಾ ಸಾಮರ್ಥ್ಯವನ್ನು ಗುರುತಿಸುವುದು ಸಾಕಷ್ಟು ಸವಾಲಾಗಿದೆ' ಎಂದು ಅವರು ಹೇಳಿದರು.

ಕಿರಿಕ್ ಪಾರ್ಟಿ ಸಮಯದಲ್ಲಿ 2000 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು ಎಂಬುದನ್ನು ನೆನಪಿಸಿಕೊಂಡ ಅವರು, ಈ ಬಾರಿ ಕಾಂತಾರ- ಚಾಪ್ಟರ್ 1 ನಲ್ಲಿ ನಟಿಸಲು ಬಯಸುವವರ ಸಂಖ್ಯೆ ಏರಿಕೆಯಾಗಿರುವುದನ್ನು ಗಮನಿಸಿದರು. 

ಚಿತ್ರತಂಡ ಇನ್ನೂ ನಾಯಕಿ ಯಾರೆಂಬುದನ್ನು ಅಂತಿಮಗೊಳಿಸಿಲ್ಲ. ತಮ್ಮ ಪಾತ್ರಕ್ಕೆ ಸೂಕ್ತವಾಗುವ ಈಗಾಗಲೇ ಗುರುತಿಸಿಕೊಂಡ ಮುಖ ಅಥವಾ ಹೊಸಬರ ಹುಡುಕಾಟದಲ್ಲಿ ತಂಡ ತೊಡಗಿಕೊಂಡಿದೆ. 

ಚಿತ್ರದಲ್ಲಿನ ವಿವಿಧ ಪಾತ್ರಗಳಿಗೆ ಎಚ್ಚರಿಕೆಯಿಂದ ಆಯ್ಕೆ ಮಾಡಲಾಗುತ್ತದೆ ಮತ್ತು ಆಯ್ಕೆಯು ಅರ್ಜಿದಾರರ ಕೌಶಲ್ಯಗಳ ಮೇಲೆ ಅವಲಂಬಿತವಾಗಿರುತ್ತದೆ. ಅಂತಿಮ ಆಡಿಷನ್ ಸುತ್ತುಗಳಲ್ಲಿ ನಿರ್ದಿಷ್ಟವಾಗಿ ಯಾರು ಸೂಕ್ತ ಎಂಬುದು ಸ್ಪಷ್ಟವಾಗಿರುತ್ತದೆ.

ಕಾಂತಾರ- ಅಧ್ಯಾಯ 1ಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಮತ್ತು ಅರವಿಂದ್ ಕಶ್ಯಪ್ ಅವರ ಡಿಒಪಿ ಅಂತಿಮವಾಗಿದೆ.

SCROLL FOR NEXT