ಕನ್ನಡ ಚಿತ್ರರಂಗದ ಗಣ್ಯರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ 
ಸಿನಿಮಾ ಸುದ್ದಿ

ಮೋದಿ ಒಬ್ಬ ಮಹಾನ್ ನಾಯಕ, ಚಿತ್ರರಂಗದ ಸಣ್ಣ ವಿಚಾರಗಳನ್ನೂ ತಿಳಿದುಕೊಂಡಿರುವುದು ಅಚ್ಚರಿ ಎನಿಸಿತು: ರಿಷಬ್ ಶೆಟ್ಟಿ- ಯಶ್ ಪ್ರತಿಕ್ರಿಯೆ

ಏರೋ ಇಂಡಿಯಾ–2023ರ ಉದ್ಘಾಟನೆಗಾಗಿ ಭಾನುವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ರಾಜಭವನದಲ್ಲಿ ನಟರಾದ ಯಶ್‌ ಹಾಗೂ ರಿಷಬ್‌ ಶೆಟ್ಟಿ ಅವರನ್ನು ಭೇಟಿಯಾಗಿದ್ದರು. ಈ ಭೇಟಿ ಬಳಿಕ ಇಬ್ಬರೂ ನಟರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರು: ಏರೋ ಇಂಡಿಯಾ–2023ರ ಉದ್ಘಾಟನೆಗಾಗಿ ಭಾನುವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ರಾಜಭವನದಲ್ಲಿ ನಟರಾದ ಯಶ್‌ ಹಾಗೂ ರಿಷಬ್‌ ಶೆಟ್ಟಿ ಅವರನ್ನು ಭೇಟಿಯಾಗಿದ್ದರು. ಈ ಭೇಟಿ ಬಳಿಕ ಇಬ್ಬರೂ ನಟರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಪ್ರಧಾನಿಯವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನಟ ಯಶ್, ಮೋದಿಯವರನ್ನು ಭೇಟಿಯಾಗಲು ತುಂಬಾ ಖುಷಿಯಾಯಿತು. ಚಿತ್ರರಂಗದ ಬಗ್ಗೆ ಅವರ ಜ್ಞಾನ ಮತ್ತು ದೃಷ್ಟಿ ಅದ್ಭುತವಾಗಿದೆ. ನಮಗೇನು ಬೇಕು, ಉದ್ಯಮ ದೇಶಕ್ಕೆ ಏನು ಮಾಡಬಹುದು ಎಂಬಂತಹ ಎಲ್ಲ ರೀತಿಯ ಸಮಸ್ಯೆಗಳ ಬಗ್ಗೆಯೂ ವಿಚಾರಿಸಿದರು. ಅವರು ನಮ್ಮ ಚಿತ್ರಗಳನ್ನು ಮತ್ತು ನಮ್ಮ ಶ್ರಮವನ್ನು ಮೆಚ್ಚಿದರು. ಅವರನ್ನು ಭೇಟಿ ಮಾಡಿದ್ದು ಅದ್ಭುತ ಅನುಭವ ಎಂದು ಹೇಳಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕಾಂತಾರ ನಾಯಕ ರಿಷಬ್ ಶೆಟ್ಟಿ.. ಮೋದಿ ಒಬ್ಬ ಮಹಾನ್ ನಾಯಕ. ಅವರನ್ನು ಭೇಟಿಯಾಗಲು ತುಂಬಾ ಸಂತೋಷವಾಗಿದೆ. ಕನ್ನಡ ಇಂಡಸ್ಟ್ರಿಯಲ್ಲಿ ಏನಾಗುತ್ತಿದೆ, ಇಂಡಸ್ಟ್ರಿಯ ಸಮಸ್ಯೆಗಳ ಬಗ್ಗೆ ಕೇಳಿದರು. ನಮಗೆ ಯಾವುದೇ ಅವಶ್ಯಕತೆಗಳಿದ್ದರೆ, ಕೇಳಿ. ಅವರ ಪರವಾಗಿ ಉದ್ಯಮಕ್ಕೆ ಸಹಾಯ ಮಾಡುವುದಾಗಿ ಹೇಳಿದರು. ಕಾಂತಾರ ಚಿತ್ರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ಪ್ರಧಾನಿ ಮೋದಿ ಕನ್ನಡ ಚಿತ್ರರಂಗಕ್ಕೆ ಅಭಿನಂದನೆ ಸಲ್ಲಿಸಿದ್ದು, ಚಿತ್ರರಂಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಂತೆ ಕನ್ನಡ ಚಿತ್ರರಂಗದ ಪ್ರಮುಖರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಕನಸು ನನಸಾದ ಕ್ಷಣ ಇದು. ಪ್ರಧಾನ ಮಂತ್ರಿ ಅವರನ್ನು ನಾನು ಮಹಾನ್​ ನಾಯಕರೆಂದು ತಿಳಿದಿದ್ದೇನೆ. ಅವರನ್ನು ಭೇಟಿ ಮಾಡಿದ್ದಕ್ಕೆ ತುಂಬ ಖುಷಿ ಆಯಿತು. ಕನ್ನಡ ಚಿತ್ರರಂಗ ಮತ್ತು ಭಾರತೀಯ ಚಿತ್ರರಂಗದಲ್ಲಿ ಏನೆಲ್ಲ ನಡೆಯುತ್ತಿದೆ? ನಮಗೆ ಇಲ್ಲಿ ಇನ್ನೂ ಏನೆಲ್ಲ ಬೇಕು ಎಂಬ ಬಗ್ಗೆ ಅವರು ಕೇಳಿದರು. ಮುಂದಿನ ದಿನಗಳಲ್ಲಿ ಅವರು ಏನೆಲ್ಲ ಮಾಡಬಹುದು ಎಂಬುದನ್ನೂ ಹೇಳಿದರು’ ಎಂದಿದ್ದಾರೆ ರಿಷಬ್​ ಶೆಟ್ಟಿ.

‘ನಮ್ಮ ಕಾಂತಾರ ಚಿತ್ರದ ಬಗ್ಗೆ ತುಂಬ ಮಾತನಾಡಿದರು. ಈ ಚಿತ್ರದ ಬಗ್ಗೆ ಅವರು ಸಾಕಷ್ಟು ತಿಳಿದಿದ್ದಾರೆ. ನಮ್ಮ ನಾಡಿನ ಕಥೆ, ನಮ್ಮ ಜನಪದ, ನಮ್ಮ ನಂಬಿಕೆ, ಸಂಪ್ರದಾಯವನ್ನು ಇಟ್ಟುಕೊಂಡು ಮಾಡಿದ ಕಾಂತಾರ ಸಿನಿಮಾ ಜಾಗತಿಕ ಮಟ್ಟಕ್ಕೆ ಹೋಗಿದ್ದಕ್ಕೆ ಅಭಿನಂದನೆ ತಿಳಿಸಿದರು. ಅವರ ಬಾಯಲ್ಲಿ ಹಲವು ಬಾರಿ ಕಾಂತಾರ ಸಿನಿಮಾ ಬಗ್ಗೆ ಕೇಳಿ ಖುಷಿ ಆಯಿತು’ ಎಂದು ರಿಷಬ್​ ಶೆಟ್ಟಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

BJP ಶಾಸಕ ಮುನಿರತ್ನ ಧರಿಸಿದ್ದ RSS ಟೋಪಿ ಕಿತ್ತೆಸೆದ Congress ಮುಖಂಡ: Video Viral!

ವಿಶ್ವದಾಖಲೆ ಬರೆದ ಸ್ಮೃತಿ ಮಂದಾನ: ಕ್ಯಾಲೆಂಡರ್ ವರ್ಷದಲ್ಲಿ ODI ಕ್ರಿಕೆಟ್ ನಲ್ಲಿ 1,000 ರನ್ ಪೂರೈಸಿದ ಜಗತ್ತಿನ ಮೊದಲ ಬ್ಯಾಟರ್!

ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಗಳಿವೆ; ಯಾರ ಒತ್ತಡಕ್ಕೆ ಒಳಗಾಗಿ Congress ಮರ್ಯಾದೆ ತೆಗೆಯುತ್ತಿದ್ದೀರಾ? ಚಿದಂಬರಂ ವಿರುದ್ಧ ಹೈಕಮಾಂಡ್ ಗರಂ!

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

SCROLL FOR NEXT