ಅಭಿಮನ್ಯು ಕಾಶೀನಾಥ್ ಮತ್ತು ಅಪೂರ್ವ 
ಸಿನಿಮಾ ಸುದ್ದಿ

'ಸೂರಿ ಲವ್ಸ್ ಸಂಧ್ಯಾ' ಸಿನಿಮಾದಲ್ಲಿ ಅಭಿಮನ್ಯು ಕಾಶೀನಾಥ್-ಅಪೂರ್ವ ಜೋಡಿ

ಕಿರಣ್ ಸೂರ್ಯ ನಿರ್ದೇಶನದ ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರದ ರಿಲೀಸ್‌ಗಾಗಿ ಕಾಯುತ್ತಿರುವ ಅಭಿಮನ್ಯು ಕಾಶಿನಾಥ್ ಈಗ ತಮ್ಮ ಮುಂದಿನ ಸಿನಿಮಾಗೆ ಸಹಿ ಹಾಕಿದ್ದಾರೆ.

ಕಿರಣ್ ಸೂರ್ಯ ನಿರ್ದೇಶನದ ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರದ ರಿಲೀಸ್‌ಗಾಗಿ ಕಾಯುತ್ತಿರುವ ಅಭಿಮನ್ಯು ಕಾಶಿನಾಥ್ ಈಗ ತಮ್ಮ ಮುಂದಿನ ಸಿನಿಮಾಗೆ ಸಹಿ ಹಾಕಿದ್ದಾರೆ. ಸೂರಿ ಲವ್ಸ್ ಸಂಧ್ಯಾ ಎಂಬ ಟೈಟಲ್ ನ ಸಿನಿಮಾಗೆ  ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯವನ್ನು ಚೊಚ್ಚಲ ನಿರ್ದೇಶಕ ಯಾದವ್ ರಾಜ್ ಬರೆದಿದ್ದಾರೆ.

ಕೆಟಿ ಮಂಜುನಾಥ್ ನಿರ್ಮಾಣದ ಸೂರಿ ಲವ್ಸ್ ಸಂಧ್ಯಾ ರೊಮ್ಯಾಂಟಿಕ್ ಡ್ರಾಮಾ ಆಗಿದ್ದು, ಅಭಿಮನ್ಯು ಜೊತೆ ಅಪೂರ್ವ ನಟಿಸಲಿದ್ದಾರೆ. ಧನಂಜಯ್ ಅವರ ಹೊಯ್ಸಳ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳಲಿರುವ ಪ್ರತಾಪ್ ನಾರಾಯಣ್, ಸೂರಿ ಲವ್ಸ್ ಸಂಧ್ಯಾದಲ್ಲಿ ಖಳನಾಯಕನಾಗಿ ನಟಿಸಲಿದ್ದಾರೆ.

ಇದರಲ್ಲಿ ಪಲ್ಲವಿ (ಉತ್ತಮರು) ಮತ್ತು ಬೋಬೌ ಜಯರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಾರ್ಚ್ ಮೊದಲ ವಾರದಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಲು ನಿರ್ದೇಶಕರು ಯೋಜಿಸಿದ್ದಾರೆ.

ತಮ್ಮ ವೃತ್ತಿಜೀವನದ ಚೊಚ್ಚಲ ನಿರ್ದೇಶನದ ಸಿನಿಮಾವನ್ನು ಪ್ರೇಮಕಥೆಯೊಂದಿಗೆ ಪ್ರಾರಂಭಿಸುತ್ತಿರುವುದು ಸಂತೋಷವಾಗಿದೆ ಎಂದು ನಿರ್ದೇಶಕ ಯಾದವ್  ರಾಜ್ ಹೇಳಿದ್ದಾರೆ.  ಚಿತ್ರದ ಚಿತ್ರೀಕರಣ ಬೆಂಗಳೂರು, ಕೋಲಾರ ಮತ್ತು ಮದ್ದೂರು ಸೇರಿದಂತೆ ಇತರ ಸ್ಥಳಗಳಲ್ಲಿ ನಡೆಯಲಿದೆ. ನಾವು ಮಹಾರಾಷ್ಟ್ರದಲ್ಲಿ ಒಂದು ಹಾಡಿನ ಚಿತ್ರೀಕರಣಕ್ಕೂ ಯೋಜಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ತಮಿಳಿನ ಹೆಸರಾಂತ ಚಿತ್ರಗಳಾದ ಗೋಲಿ ಸೋಡಾ ಮತ್ತು ಚಂಡಿ ವೀರನ್‌ನ ಸಂಗೀತ ಸಂಯೋಜಕ ಎಸ್‌ಎನ್ ಅರುಣಗಿರಿ ಸೂರಿ ಲವ್ಸ್ ಸಂದ್ಯಾಗೆ ಸಂಗೀತ ನೀಡಲಿದ್ದಾರೆ. ಅಲಕ ಜೆವಿ ಮತ್ತು ಬಿ ಶ್ರೀನಿವಾಸ್ ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ಈ ಚಿತ್ರದಲ್ಲಿ ಸ್ಟಂಟ್ ಮಾಸ್ಟರ್ ದಿನೇಶ್ ಕಾಸಿ (ಮೈಕೆಲ್), ಸಂಕಲನಕಾರ ಉಜ್ವಲ್ ಗೌಡ ಮತ್ತು ಡ್ಯಾನ್ಸ್ ಕೊರಿಯೋಗ್ರಾಫರ್ ರಾಜ್ ಕಿಶೋರ್ ತಾಂತ್ರಿಕ ತಂಡದ ಭಾಗವಾಗಿ ಇರಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಉಕ್ರೇನ್ ವಿರುದ್ಧ ರಷ್ಯಾದ ದೀರ್ಘಕಾಲ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ

ಅಮೆರಿಕದ ಸುಂಕ: ಜವಳಿ ವಲಯದ ಒತ್ತಡ ಕಡಿಮೆ ಮಾಡಲು 40 ಪ್ರಮುಖ ಆಮದು ದೇಶ ಗುರುತು

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

SCROLL FOR NEXT