ಶ್ರೀಜಾ ಮತ್ತು ಚಿರಂಜೀವಿ 
ಸಿನಿಮಾ ಸುದ್ದಿ

'ಹೊಸ ಪಯಣ ಆರಂಭ': ಮೂರನೇ ಮದುವೆಗೆ ಚಿರಂಜೀವಿ ಪುತ್ರಿ ಶ್ರೀಜಾ ತಯಾರಿ? ಇನ್​ಸ್ಟಾ ಪೋಸ್ಟ್ ನಲ್ಲಿ ಸುಳಿವು!

ಮೆಗಾಸ್ಟಾರ್​ ಚಿರಂಜೀವಿ ಪುತ್ರಿ ಶ್ರೀಜಾ ಮತ್ತೊಮ್ಮೆ ಭಾರಿ ಸುದ್ದಿಯಲ್ಲಿದ್ದಾರೆ. ಈಗಾಗಲೇ ಎರಡು ಮದ್ವೆ ಆಗಿ ಇಬ್ಬರಿಂದಲೂ ದೂರವಾಗಿರುವ ಶ್ರೀಜಾ ಈಗ ಮೂರನೆಯ ಮದುವೆಯ ಸಿದ್ಧತೆಯಲ್ಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಮೆಗಾಸ್ಟಾರ್​ ಚಿರಂಜೀವಿ ಪುತ್ರಿ ಶ್ರೀಜಾ ಮತ್ತೊಮ್ಮೆ ಭಾರಿ ಸುದ್ದಿಯಲ್ಲಿದ್ದಾರೆ. ಈಗಾಗಲೇ ಎರಡು ಮದ್ವೆ ಆಗಿ ಇಬ್ಬರಿಂದಲೂ ದೂರವಾಗಿರುವ ಶ್ರೀಜಾ ಈಗ ಮೂರನೆಯ ಮದುವೆಯ ಸಿದ್ಧತೆಯಲ್ಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಚಿರಂಜೀವಿ ಅವರ ಕಿರಿಯ ಮಗಳು ಶ್ರೀಜಾ ಅವರು ಸದ್ಯ ಇದೇ ವಿಷಯಕ್ಕೆ ಸುದ್ದಿಯಾಗಿದ್ದಾರೆ. ಕೆಲ ವಾಹಿನಿ ಹಾಗೂ ವೆಬ್‌ಸೈಟ್ ವರದಿಗಳ ಪ್ರಕಾರ ಶ್ರೀಜಾ ಮೂರನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬಂದಿವೆ.

ಇದೇನೂ ಹೊಸ ಸುದ್ದಿಯಲ್ಲ. ಕೆಲ ತಿಂಗಳಿನಿಂದ ಈ ಸುದ್ದಿ ಸಿನಿರಂಗದಲ್ಲಿ ಹರಿದಾಡುತ್ತಲೇ ಇದೆ. ಅದರೆ ಅದಕ್ಕೆ ಸಾಕ್ಷಿ ಎಂಬಂತೆ ಶ್ರೀಜಾ ಮಾಡಿರುವ ಇನ್​ಸ್ಟಾಗ್ರಾಮ್​ ಪೋಸ್ಟ್​ ಒಂದು ವೈರಲ್​ ಆಗಿದ್ದು, ಬಿಸಿಬಿಸಿ ಚರ್ಚೆ ಶುರುವಾಗಿದೆ.

ಅಷ್ಟಕ್ಕೂ ಶ್ರೀಜಾ ಇನ್​ಸ್ಟಾಗ್ರಾಮ್​ನಲ್ಲಿ ಹಾಕಿರುವುದೇನೆಂದರೆ, "ಡಿಯರ್ 2022, ನೀನು ನನಗೆ ಬಹಳ ಮುಖ್ಯವಾದ ವ್ಯಕ್ತಿಯನ್ನು ಭೇಟಿ ಮಾಡಿಸಿರುವೆ.  ನನ್ನ ಬಗ್ಗೆ ಚೆನ್ನಾಗಿ ಅರಿತಿರುವ, ನನ್ನನ್ನು ಬಹಳ ಪ್ರೀತಿಸುವ, ತುಂಬಾ ಕೇರ್​ ಮಾಡುವ, ಕಷ್ಟ- ಸುಖದಲ್ಲಿ ನನಗೆ ಸಾಥ್​ ನೀಡುತ್ತಿರುವ, ಯಾವಾಗಲೂ  ನನಗೆ ಬೆಂಬಲವಾಗಿ ನಿಲ್ಲುವ ವ್ಯಕ್ತಿಯನ್ನು ನೀನು ಭೇಟಿ ಮಾಡಿಸಿರುವೆ. ನನ್ನ- ಅವನ ಭೇಟಿ ನಿಜಕ್ಕೂ ಬಹುದೊಡ್ಡ ಅದ್ಭುತ. ಹೊಸ ಪಯಣ ಶುರುವಾಗುತ್ತಿದೆ" ಎಂದಿದ್ದಾರೆ.

ರೀಜಾ 2007 ರಲ್ಲಿ ಶಿರಿಶ್ ಭಾರದ್ವಾಜ್ ಅವರೊಂದಿಗೆ ಮದುವೆಯಾಗಿದ್ದರು. ಬಳಿಕ 2011 ರಲ್ಲಿ ಶಿರಿಶ್ ಅವರಿಗೆ ವಿಚ್ಛೇದನ ನೀಡಿದ್ದರು. ಇವರ ವಿಹಾಹ ಸಂಬಂಧದಲ್ಲಿ ಸಾಕಷ್ಟು ಬಿರುಕು ಮೂಡಿತ್ತು. ಇದು ಮೆಗಾಸ್ಟಾರ್ ಕುಟುಂಬದಲ್ಲಿ ಬಿರುಗಾಳಿ ಸೃಷ್ಟಿಸಿತ್ತು.

ನಂತರ 2016ರಲ್ಲಿ ಶ್ರೀಜಾ ಅವರು ಉದ್ಯಮಿ ಕಲ್ಯಾಣ್ ದೇವ್ ಅವರನ್ನು ಮದುವೆಯಾಗಿದ್ದರು. ಸದ್ಯ ಬಂದಿರುವ ವರದಿಗಳ ಪ್ರಕಾರ ಕಲ್ಯಾಣ್ ದೇವ್ ಜೊತೆ ಸಂಬಂಧವನ್ನು ಕಳೆದುಕೊಳ್ಳಲು ಶ್ರೀಜಾ ಮುಂದಾಗಿದ್ದಾರೆ. ಎಲ್ಲವೂ ಅಂತಿಮಗೊಂಡಿದ್ದು, ಕಾನೂನು ಪ್ರಕಾರ ವಿಚ್ಛೇದನ ಬಾಕಿ ಇದೆ ಎಂದು ತಿಳಿದು ಬಂದಿದೆ.

ಅತ್ತ ಕಲ್ಯಾಣ್ ದೇವ್ ಕೂಡ ಇದೇ ರೀತಿ ಪೋಸ್ಟ್‌ ಹಾಕಿಕೊಂಡಿದ್ದಾರೆ. ಇದರಿಂದ ಸೋಶಿಯಲ್ ಮೀಡಿಯಾದಲ್ಲೂ ಶ್ರೀಜಾ ಮೂರನೇ ಮದುವೆಯಾಗಲಿದ್ದಾರೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ. 34 ವರ್ಷದ ಶ್ರೀಜಾ ಕೋನಿಡೇಲಾ ಅವರಿಗೆ ಮೊದಲ ಗಂಡನಿಂದ ಒಂದು ಮಗು ಹಾಗೂ ಎರಡನೇ ಗಂಡನಿಂದ ಒಂದು ಮಗು ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT