ಯುವ ನಟ ಧನುಷ್ 
ಸಿನಿಮಾ ಸುದ್ದಿ

ಕನ್ನಡದ ಯುವ ನಟ ಧನುಷ್ ನಿಧನ, ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ

ಕನ್ನಡ ಚಿತ್ರರಂಗದ ಮತ್ತೋರ್ವ ಉದಯೋನ್ಮುಖ ನಟ ಧನುಷ್  ನಿಧನರಾಗಿದ್ದಾರೆ. ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಲೀಡರ್, ಸಂಪಿಗೆ ಹಳ್ಳಿ, ಕೊಟ್ಲಲ್ಲಪ್ಪೋ ಕೈ, ಪ್ಯಾರ್ ಕಾ ಗೋಲು ಗುಂಬಜ್  ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಧನುಷ್ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ. 

ಬೆಂಗಳೂರು: ಕನ್ನಡ ಚಿತ್ರರಂಗದ ಮತ್ತೋರ್ವ ಉದಯೋನ್ಮುಖ ನಟ ಧನುಷ್  ನಿಧನರಾಗಿದ್ದಾರೆ. ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಲೀಡರ್, ಸಂಪಿಗೆ ಹಳ್ಳಿ, ಕೊಟ್ಲಲ್ಲಪ್ಪೋ ಕೈ, ಪ್ಯಾರ್ ಕಾ ಗೋಲು ಗುಂಬಜ್  ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಧನುಷ್ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ. 

ಚಿತ್ರೀಕರಣಕ್ಕಾಗಿ ಲಡಾಖ್ ಗೆ ತೆರಳಿದ್ದ ಧನುಷ್,  ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರನ್ನು ಬೆಂಗಳೂರಿಗೆ ಕರೆತಂದು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿ ಆಗದೇ ಸಾವನ್ನಪ್ಪಿದ್ದಾರೆ. ಮೂಲತ: ಬಾಗಲಕೋಟೆ ಜಿಲ್ಲೆಯ ಕೋಡಿಹಾಳ ಗ್ರಾಮದ  ಶ್ರೀಮುತ್ತುರಾಜ್  ಸಿನಿಮಾಗಾಗಿ ತಮ್ಮ ಹೆಸರನ್ನು ಧನುಷ್ ಎಂದು ಬದಲಾಯಿಸಿಕೊಂಡಿದ್ದರು ಎನ್ನಲಾಗಿದೆ.

ಮೃತ ಧನುಷ್ ಅವರ ಮೃತದೇಹವನ್ನು ಅವರ ಹುಟ್ಟೂರಿಗೆ  ಕೊಂಡೊಯ್ಯಲಾಗಿದ್ದು, ಇಂದು ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ವರದಿಯಾಗಿದೆ. ಅಗಲಿದ ನಟನಿಗೆ ಸಿನಿಮಾ ಕಲಾವಿದರು, ಸ್ನೇಹಿತರು ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

RSS ಪಥಸಂಚಲನ, ಚಟುವಟಿಕೆಗಳಿಗೆ ನಿರ್ಬಂಧ ಹೊರಡಿಸಿದ್ದ ಸರ್ಕಾರಕ್ಕೆ ಹಿನ್ನಡೆ: ಹೈಕೋರ್ಟ್ ಮಧ್ಯಂತರ ತಡೆ

Cyclone 'Montha'- ಮೊಂತಾ ಚಂಡಮಾರುತ ತೀವ್ರ, ಆಂಧ್ರ ಪ್ರದೇಶ, ಒಡಿಶಾ ಕರಾವಳಿ ಭಾಗಗಳಲ್ಲಿ ಇಂದು ಭೂಕುಸಿತ ಸಂಭವ ಸಾಧ್ಯತೆ

ಅಲ್ ಖೈದಾ ಜೊತೆ ನಂಟು ಆರೋಪ: ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆಯಲ್ಲಿ ಟೆಕ್ಕಿ ಬಂಧನ

fu**king country: ಕೆನಡಾದಲ್ಲಿ ಜನಾಂಗೀಯ ನಿಂದನೆ, ಭಾರತೀಯ ಕೆಲಸಗಾರ್ತಿಯನ್ನು ಕೆಟ್ಟದಾಗಿ ಬೈದ ಕೆನಡಾ ಪ್ರಜೆ! Video

ಕುರ್ಚಿ ಕದನ: ಡಿಕೆಶಿ ಹತ್ತಿಕ್ಕಲು ಸಿದ್ದು ಗೇಮ್ ಪ್ಲಾನ್; CM ಹುದ್ದೆಗೆ ಮುನಿಯಪ್ಪ ಹೆಸರು ಕೇಳಿಬರಲು ಕಾರಣವೇನು?

SCROLL FOR NEXT